ಶಿವಾಜಿ ಮಹಾರಾಜರು ಶೌರ್ಯ, ಸಾಹಸ, ದೇಶಭಕ್ತಿಯ ಸಂಕೇತ: ಶಾಸಕ ಪ್ರಭು ಚವ್ಹಾಣ

KannadaprabhaNewsNetwork |  
Published : Nov 21, 2026, 01:30 AM IST
ಚಿತ್ರ 20ಬಿಡಿಆರ್50ಎ | Kannada Prabha

ಸಾರಾಂಶ

ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ಶೌರ್ಯ, ಸಾಹಸ, ಪರಾಕ್ರಮ ಹಾಗೂ ದೂರದೃಷ್ಟಿಯ ಆಡಳಿತದ ಮೂಲಕ ಸ್ವರಾಜ್ಯ ಸ್ಥಾಪನೆಗೆ ಶ್ರಮಿಸಿದ ಮಹಾನ್ ರಾಷ್ಟ್ರಪುರುಷರು ಎಂದು ಶಾಸಕ ಪ್ರಭು ಚವ್ಹಾಣ ನುಡಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ಶೌರ್ಯ, ಸಾಹಸ, ಪರಾಕ್ರಮ ಹಾಗೂ ದೂರದೃಷ್ಟಿಯ ಆಡಳಿತದ ಮೂಲಕ ಸ್ವರಾಜ್ಯ ಸ್ಥಾಪನೆಗೆ ಶ್ರಮಿಸಿದ ಮಹಾನ್ ರಾಷ್ಟ್ರಪುರುಷರು ಎಂದು ಶಾಸಕ ಪ್ರಭು ಚವ್ಹಾಣ ನುಡಿದರು.

ಕಮಲನಗರ ತಾಲ್ಲೂಕಿನ ಹೊಳಸಮುದ್ರ ಗ್ರಾಮದಲ್ಲಿ ಗುರುವಾರ ಸಂಜೆ ನೂತನವಾಗಿ ನಿರ್ಮಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿ, ಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಪ್ರಜಾಹಿತಕ್ಕೆ ಆದ್ಯತೆ ನೀಡಿದ ಅವರ ಆಡಳಿತ ಇಂದಿಗೂ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಶಿವಾಜಿ ಮಹಾರಾಜರು ದೇಶಭಕ್ತಿ, ಸ್ವಾಭಿಮಾನ ಮತ್ತು ಸ್ವರಾಜ್ಯದ ಸಂಕಲ್ಪಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ. ಮಾತೃಭೂಮಿಯ ರಕ್ಷಣೆ, ಧರ್ಮ ಮತ್ತು ಸಂಸ್ಕೃತಿಯ ಉಳಿವು ಹಾಗೂ ಜನರ ಸ್ವಾತಂತ್ರ್ಯರಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾನ್ ವೀರರು. ಅವರ ಅಪ್ರತಿಮ ಸಾಹಸ, ತ್ಯಾಗ, ಶೌರ್ಯ ಮತ್ತು ರಾಷ್ಟ್ರಪ್ರೇಮ ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿಯ ಕಿಚ್ಚು ಹೊತ್ತಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.

ಹೋಳಸಮುದ್ರ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾನು ನಿರಂತರವಾಗಿ ಸಹಕರಿಸುತ್ತಿದ್ದು, ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಗ್ರಾಮದ ಅಭಿವೃದ್ಧಿ ಒಂದಿಬ್ಬರ ಜವಾಬ್ದಾರಿಯಲ್ಲ; ಅದು ಸಮಸ್ತ ಗ್ರಾಮಸ್ಥರ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಗೋಪಾಲರಾವ ಪಾಟೀಲ, ಏಕನಾಥ ಮಹಾರಾಜ ಹಂಡೆ, ದಾದಾ ಮಹಾರಾಜ ನಗರಕರ್, ಪದ್ಮಾಕರ ಪಾಟೀಲ, ಬಾಬುರಾವ್‌ ಕಾರಭಾರಿ, ಪ್ರಕಾಶ ಪಾಟೀಲ, ಶಿವಾಜಿರಾವ ಪಾಟೀಲ ಮುಂಗನಾಳ, ಉಷಾತಾಯಿ ಪಾಟೀಲ, ಅನೀಲ ವಾಡೀಕರ್, ಅನೀಲ ಭೂಸಾರೆ, ಪ್ರವೀಣ ಕಾರಬಾರಿ, ಭರತ ಕದಂ, ರಾಹುಲ ಪಾಟೀಲ, ಪಾಂಡುರಂಗ ಪಾಟೀಲ, ವಿಷ್ಣು ನುದನೂರೆ, ಮಾರುತಿ ಅಳಂದೆ, ರಾಮ್ ಕದಂ, ಅನೀಲ ಶಿಂಧೆ, ವಿಜಯಕುಮಾರ ನುದನೂರೆ, ಸಂದೀಪ ತೇಲಗಾಂವಕರ್, ಅಮಿತಕುಮಾರ ಕುಲಕರ್ಣಿ, ಬಾಳಾಸಾಬ್ ಪಾಟುದೆ ಸೇರಿದಂತೆ ಗ್ರಾಮದ ಮುಖಂಡರು, ಜನಪ್ರತಿನಿಧಿಗಳು, ಯುವಕರು ಹಾಗೂ ಶಿವಾಜಿ ಮಹಾರಾಜರ ಅಭಿಮಾನಿಗಳು ಉಪಸ್ಥಿತರಿದ್ದರು.

--

ಚಿತ್ರ 20ಬಿಡಿಆರ್50:

ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದಲ್ಲಿ ಗುರುವಾರ ಸಂಜೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಶಾಸಕ ಪ್ರಭು ಚವ್ಹಾಣ ಲೋಕಾರ್ಪಣೆಗೊಳಿಸಿದರು.

---

ಚಿತ್ರ 20ಬಿಡಿಆರ್50ಎ:

ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದಲ್ಲಿ ಗುರುವಾರ ಸಂಜೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಶಾಸಕ ಪ್ರಭು ಚವ್ಹಾಣ ಲೋಕಾರ್ಪಣೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ