ಮಾತೆ ಜೀಜಾಬಾಯಿ ದಿನನಿತ್ಯ ಶ್ರೀದೇವಿ ತುಳಜಾಭವಾನಿ ಪೂಜಿಸುತ್ತಾ ಶೂರ-ಧೀರ ಮಗನನ್ನು ದಯಪಾಲಿಸು ಎಂಬ ತಾಯಿಯ ಭಕ್ತಿಗೆ ಮೆಚ್ಚಿ ಛತ್ರಪತಿ ಶಿವಾಜಿ ಮಹಾರಾಜರು ಜನ್ಮತಾಳಿದರು ಎಂದು ತಹಸೀಲ್ದಾರ್ ಕೀರ್ತಿ ಚಾಲಕ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮಾತೆ ಜೀಜಾಬಾಯಿ ದಿನನಿತ್ಯ ಶ್ರೀದೇವಿ ತುಳಜಾಭವಾನಿ ಪೂಜಿಸುತ್ತಾ ಶೂರ-ಧೀರ ಮಗನನ್ನು ದಯಪಾಲಿಸು ಎಂಬ ತಾಯಿಯ ಭಕ್ತಿಗೆ ಮೆಚ್ಚಿ ಛತ್ರಪತಿ ಶಿವಾಜಿ ಮಹಾರಾಜರು ಜನ್ಮತಾಳಿದರು ಎಂದು ತಹಸೀಲ್ದಾರ್ ಕೀರ್ತಿ ಚಾಲಕ ಹೇಳಿದರು.
ತಾಲೂಕು ಆಡಳಿತ, ಕಂದಾಯ ಇಲಾಖೆಯಿಂದ ನಡದ ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವ ಅಂಗವಾಗಿ ಬಜಾರ್ ಹನುಮಾನ ದೇವಸ್ಥಾನದ ಆವರಣದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮಹಾಪೂಜೆ ಸಲ್ಲಿಸುವುದರೊಂದಿಗೆ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಯಿಯ ಭಕ್ತಿ ಮಾತು ಪಾಲಿಸುತ್ತಿದ್ದ ಶಿವಾಜಿ ಮಹಾರಾಜರು ಮಾತೃದೇವೋಭವ ಎಂಬುದನ್ನು ಚಿಕ್ಕಂದಿನಿಂದಲೇ ಅರಿತಿದ್ದರು. ದೇಶದ ಇತಿಹಾಸ ಕಾಪಾಡಬೇಕೆಂಬ ಮಹಾದಾಸೆ ಹೊಂದಿದ್ದ ಅವರ ಇತಿಹಾಸ, ವ್ಯಕ್ತಿತ್ವ, ಸಾಹಸಗಳ ಕುರಿತು ಓದಿದರೆ ಮೈ ರೋಮಾಂಚನಗೊಳ್ಳುತದೆ. ಅವರ ತಾಯಿ ಮಾರ್ಗದರ್ಶನ ದಾರಿದೀಪವಾಗಿತ್ತು. ಮಾತೆಯರು ಅದನ್ನು ಅರಿತು ಮಕ್ಕಳನ್ನು ಧೈರ್ಯಶಾಲಿ ವಿದ್ಯಾವಂತರನ್ನಾಗಿ ಮಾಡಲು ಮುಂದಾಗಬೇಕೆಂದರು.
ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಮಾತನಾಡಿ, ಭಾರತದ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು, ಮಹಾರಾಣಾ ಪ್ರತಾಪಸಿಂಹ ರಂತಹ ಶೂರ-ಧೀರರು ತಮ್ಮ ತಮ್ಮ ಸ್ವಹಿತಾಶಕ್ತಿಗಾಗಿ ಹೋರಾಟ ಮಾಡಿಲ್ಲ. ಅವರಲ್ಲಿ ದೇಶದ ಹಿತರಕ್ಷಣೆ ಎಂಬುದು ಅಡಗಿತ್ತು. ಶಿವಾಜಿ ಮಹಾರಾಜರಿಗೆ ತಾಯಿ ಜೀಜಾಬಾಯಿ ನೀಡಿದ ಸಂಸ್ಕಾರ ಮಹತ್ವದ್ದಾಗಿತ್ತು. ಮಹಾರಾಜರು ರೈತರ ಹಿತರಕ್ಷಣೆ ಬಯಸಿದ್ದರು. ತಾಯಿ ಮಾತೆ ಜೀಜಾಬಾಯಿ ಮಾರ್ಗ ಅನುಸರಿಸಿದರೆ ಛತ್ರಪತಿ ಶಿವಾಜಿ ಮಹಾರಾಜರಂತಹ ಮಗನನ್ನು ಪಡೆಯಬಹುದು ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ರಾಜನಾರಾಯಣ ನಲವಡೆ, ಸಮಾಜ ಸೇವಕ ಉದಯ ರಾಯಚೂರ ಮಾತನಾಡಿ, ಕೆಲವು ಅಂಕಣಕಾರರು ಪ್ರಚಾರದ ಬಯಸಿ ಶಿವಾಜಿ ಮಹಾರಾಜರ ಇತಿಹಾಸ ತಿರುಚಿ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಹಾಗಾಗಬಾರದು ಅವರ ಸತ್ಯಾಸತ್ಯತೆ ಇತಿಹಾಸ ಹೊರ ಹಾಕಿದರೆ ಎಲ್ಲ ಸಮುದಾಯಕ್ಕೆ ಒಳಿತಾಗುತ್ತದೆ. ಶಿವಾಜಿ ಮಹಾರಾಜರಲ್ಲಿದ್ದ ದೇಶ ಪ್ರೇಮ, ಮಾತೃಪ್ರೇಮ, ಮಹಿಳೆಯರ ಮೇಲೆ ಆಗುವ ದೌರ್ಜನ್ಯ ಕಂಡು ಬಂದರೆ ಅಂದಿನ ಕಾಲದಲ್ಲಿ ತಕ್ಕ ಶಿಕ್ಷೆ ನೀಡಲಾಗುತ್ತಿತ್ತು. ಶಿವಾಜಿ ಮಹಾರಾಜರು ಜನ್ಮತಾಳದಿದ್ದರೆ ಹಿಂದುತ್ವವೆಂಬುದು ಅಷ್ಠೇ ಅಲ್ಲಾ ನಾವೂ ಕೂಡಾ ಇಲ್ಲಿ ಇರುತ್ತಿರಲಿಲ್ಲ ಎಂದು ತಿಳಿಸಿದರು.
ಮೆರಣಿಗೆಯು ಶಿವಾಜಿ ಮಹಾರಾಜರ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಮರಾಠಾ ಸಮಾಜ ಬಾಂಧವರ ನೇತೃತ್ವದಲ್ಲಿ ಆಯೋಜಿಸಲಾದ ಧ್ವಜಾರೋಹಣ ಕಾರ್ಯಕ್ರಮವನ್ನು ತಹಸೀಲ್ದಾರ್ ಕೀರ್ತಿ ಚಾಲಕ ನೇರವೇರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.