- ಹೊನ್ನಾಳಿ ತಾಲೂಕು ಸಾಧು ವೀರಶೈವ ಸಮಾಜ ಅಧ್ಯಕ್ಷ ಹುಣಸಘಟ್ಟ ಗದ್ದಿಗೇಶ್ ಅಭಿಮತ
- - -- ಯಕ್ಕನಹಳ್ಳಿಯಲ್ಲಿ ತರಳಬಾಳು ಬೃಹನ್ಮಠದ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 33ನೆಯ ಶ್ರದ್ಧಾಂಜಲಿ ಸಮಾರಂಭ
- ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಿಂದ ನಡೆಯುವ ಭಕ್ತಿ ಸಮರ್ಪಣೆ- ಕರಪತ್ರ ಬಿಡುಗಡೆ- - -
ಕನ್ನಡಪ್ರಭ ವಾರ್ತೆ ಹೊನ್ನಾಳಿತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ತರಳಬಾಳು ಬೃಹನ್ಮಠದ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 33ನೆಯ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣಾ ಕಾರ್ಯಕ್ರಮ ಸೆ.14ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎ. ಹುಣಸಘಟ್ಟ ಗದ್ದಿಗೇಶ್ ಹೇಳಿದರು.
ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಿಂದ ನಡೆಯುವ ಭಕ್ತಿ ಸಮರ್ಪಣಾ ಸಮಾರಂಭದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ದಶಕಗಳಿಂದಲೂ ಈ ಭಕ್ತಿ ಸಮರ್ಪಣೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ಇದೂವರೆಗೂ 26 ಗ್ರಾಮಗಳಲ್ಲಿ ಕಾರ್ಯಕ್ರಮ ನಡೆದಿದೆ. ಬೃಹನ್ಮಠದ 20ನೇ ಗುರುಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು ತಮ್ಮ ಜೀವಿತದ ಅವಧಿಯಲ್ಲಿಯೇ ದಂತಕಥೆಯಾದವರು. ಕೇವಲ ನುಡಿಜಾಣರಾಗದೇ ನಡೆಧೀರರೂ ಆಗಿದ್ದವರು. ಸಮಾಜದ ಒಳ ಹಾಗೂ ಹೊರಗಿನ ಶತ್ರುಗಳು ಮೆಚ್ಚುವಂತೆ ಸಮಾಜದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತವರು ಎಂದು ಬಣ್ಣಿಸಿದರು.
ಪ್ರತಿವರ್ಷ ಸೆ.14ರಂದು ಚಿತ್ರದುರ್ಗದ ಸಿರಿಗೆರೆಯಲ್ಲಿ ನಡೆಯಲಿರುವ ಲಿಂ.ಗುರುಗಳ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಸೆ.14ರಂದು ನಮ್ಮ ಅವಳಿ ತಾಲೂಕಿನ ಜನರಿಂದ ಭಕ್ತಿ ಸಮರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಾಲೂಕಿನ ಸಮಸ್ತ ಭಕ್ತರು ತಮ್ಮ ಭಕ್ತಿ ಕಾಣಿಕೆ ಸಲ್ಲಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಭಕ್ತಿ ಸಮರ್ಪಣಾ ಸಮಾರಂಭ ಸಮಿತಿ ಅಧ್ಯಕ್ಷ ಎಸ್.ಎಂ. ನಾಗರಾಜಪ್ಪ, ಟಿ.ಬಸವರಾಜಪ್ಪ, ಸಿ.ಎನ್. ಹಾಲೇಶಪ್ಪ, ಸಿ.ಬಿ. ಕುಬೇಂದ್ರಪ್ಪ, ವೈ.ಕೆ. ದಯಾನಂದ್, ಕೆ.ಯು. ಶಿವಕುಮಾರ್, ಸಿ.ಆರ್. ಅವಿನಾಶ್, ಸಿ. ಪರಮೇಶ್, ಸಿದ್ದನಗೌಡ, ಸಿ.ಎಸ್. ಮಂಜುನಾಥ್, ಟಿ.ಎಸ್. ಜಗದೀಶ್ ಹಾಗೂ ನ್ಯಾಮತಿ ತಾಲೂಕಿನ ಸಾಧು ವೀರಶೈವ ಸಮಾಜದ ಅಧ್ಯಕ್ಷ ಜಿ.ಶಿವಪ್ಪ ಮತ್ತಿತರರು ಹಾಜರಿದ್ದರು.
- - --12ಎಚ್.ಎಲ್.ಐ1.ಜೆಪಿಜಿ:
ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿಯಲ್ಲಿ ನಡೆಯಲಿರುವ ಭಕ್ತಿ ಸಮರ್ಪಣಾ ಸಮಾರಂಭದ ಕರಪತ್ರಗಳನ್ನು ಸಮಾಜದ ಅಧ್ಯಕ್ಷ ಎಚ್.ಎ. ಗದ್ದಿಗೇಶ್ ಹುಣಸಘಟ್ಟ ಬಿಡುಗಡೆಗೊಳಿಸಿದರು. ಸಮಿತಿ ಅಧ್ಯಕ್ಷ ಎಸ್.ಎಂ. ನಾಗರಾಜಪ್ಪ ಇತರರು ಇದ್ದರು.