ಕನ್ನಡಪ್ರಭ ವಾರ್ತೆ ವಿಜಯಪುರ
ಚಡಚಣ ತಾಲೂಕಿನ ಧೂಳಖೇಡನ ಗುರುಚಂದ್ರಶೇಖರ ಶ್ರವಣ ದೋಷವುಳ್ಳ ಮಕ್ಕಳ ವಿದ್ಯಾವರ್ದಕ ಶಾಲೆಯ ಮಕ್ಕಳು ಶಿವಾನಂದವರಿಗೆ ಪುಷ್ಪವೃಷ್ಟಿ ಎರಚಿ, ದ್ವೀಪ ಬೆಳಗಿಸುವ ಮೂಲಕ ಜನ್ಮ ದಿನ ಆಚರಿಸಿ, ಶುಭಾಶಯ ಕೋರಿದರು.ಶಿವಾನಂದ-ಮೀನಾಕ್ಷಿ ಮಖಣಾಪೂರ ದಂಪತಿ ತಂದೆ-ತಾಯಿಗೆ ಪಾದಪೂಜೆ ಮಾಡುವ ಮೂಲಕ ಆಶೀರ್ವಾದ ಪಡೆದುಕೊಂಡರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವೇ.ಮಹಾಂತೇಶ ಶಾಸ್ತ್ರಿ ತದ್ದೇವಾಡಿ ನೇತೃತ್ವದಲ್ಲಿ ಶಾಲೆ ಮಕ್ಕಳಿಂದ ನಡೆದ ಪ್ರಾರ್ಥನೆ, ದೇಶಭಕ್ತಿ ಗೀತೆ, ನೃತ್ಯಗಳು ಜನಪದ ಸಿರಿ ಸಾಂಸ್ಕೃತಿಕ ಕಲೆಯ ಅನಾವರಣಗೊಂಡು ಕಾರ್ಯಕ್ರಮದ ಮೆರಗು ಹೆಚ್ಚಿಸಿತು. ಜನ್ಮ ದಿನದ ಪ್ರಯುಕ್ತ ಶಿವಾನಂದ ಮಖಣಾಪೂರ ಅವರಿಗೆ ಇಡೀ ದಿನ ಜಿಲ್ಲೆಯ ಪ್ರಮುಖರು, ನಾಗಠಾಣ ಮತಕ್ಷೇತ್ರದ ವಿವಿಧ ಗ್ರಾಮಗಳಾದ ಶಿವಣಗಿ, ಕಗ್ಗೋಡ, ಅಂಕಲಗಿ, ನಾಗಠಾಣ, ಹಿಟ್ನಳ್ಳಿ, ಚಡಚಣ, ಬರಡೋಲ, ಜಿಗಜಿವಣಗಿ, ಹಲಸಂಗಿ, ಧೂಳಖೇಡ, ಶಿರ್ನಾಳ, ಲೋಣಿ ಬಿ.ಕೆ, ಹತ್ತಳ್ಳಿ, ಸಂಖ ತದ್ದೇವಾಡಿ, ಅಣಚಿ, ಇಂಚಗೇರಿ, ಕನ್ನೂರ, ಮಖಣಾಪೂರ, ತಿಡಗುಂದಿ, ಬೊಮ್ಮನಳ್ಳಿ ಸೇರಿದಂತೆ ವಿಜಯಪುರ ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಅಭಿಮಾನಿಗಳು ಆಗಮಿಸಿ ಶುಭಾಶಯ ಕೋರಿದರು.
ಇಲ್ಲಿಯವರೆಗೆ ನಾನು ನನ್ನ ಜನ್ಮ ದಿನ ಆಚರಣೆ ಮಾಡಿಕೊಂಡಿಲ್ಲ. ಈ ಬಾರಿ ಅಭಿಮಾನಿಗಳು ಹಾಗೂ ನಮ್ಮ ಹಿರಿಯ ಮುಖಂಡರು ಸೇರಿದಂತೆ ನನ್ನ ಮಾರ್ಗದರ್ಶನಕರು ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಬೇಡವೆನ್ನದೇ ಹಾಗೂ ಅವರ ಒತ್ತಡಕ್ಕೆ ಮಣಿದು ಆಚರಣೆ ಮಾಡಿಕೊಂಡಿದ್ದೇನೆ. ಹಿರಿಯರ ಆಶೀರ್ವಾದದಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲು ಶಕ್ತಿ ಇಮ್ಮಡಿಯಾಗಿದೆ. ಅಭಿಮಾನಿಗಳ ಪ್ರೀತಿ, ವಿಶ್ವಾಸಕ್ಕೆ ಯಾವುದೇ ಕಾರಣಕ್ಕೆ ಚುತಿ ಬರದಂತೆ ನೋಡಿಕೊಳ್ಳವ ಜಬಾಬ್ದಾರಿಯನ್ನು ಹೊಂದಿ ಕ್ಷೇತ್ರದ ಜನತೆಯ ಸೇವೆ ಮಾಡಲು ಸದಾ ಬದ್ಧನಾಗಿದ್ದೇನೆ. ಶುಭಾಶಯ ಕೋರಿದ ನನ್ನೆಲ್ಲ ಸ್ನೇಹ ಬಂಧುಗಳಿಗೆ ಅನಂತ, ಅನಂತ ವಂದನೆಗಳು.