ಗಿರಿಯಾಪುರದಲ್ಲಿ ನಾಳೆಯಿಂದ ಶಿವಾನುಭವ ಸಮ್ಮೇಳನ -ಅಮೃತ ಮಹೋತ್ಸವ

KannadaprabhaNewsNetwork | Published : Mar 3, 2024 1:30 AM

ಸಾರಾಂಶ

ಇದೇ 4, 5, ಮತ್ತು 6 ರಂದು ಕಡೂರು ತಾಲೂಕಿನ ಗಿರಿಯಾಪುರದಲ್ಲಿ ಲಿಂ.ಹಾನಗಲ್ಲ ಕುಮಾರ ಶಿವಯೋಗಿ ಸ್ಮಾರಕ ಶಿವಾನುಭವ ಸಮ್ಮೇಳನ -ಅಮೃತ ಮಹೋತ್ಸವ ಹಾಗೂ ಲಿಂ. ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳ 50 ನೇ ಲಿಂಗೈಕ್ಯ ದಿನೋತ್ಸವ ನಡೆಯಲಿದೆ ಎಂದು ಶಿವಾದ್ವೈತ ತತ್ವ ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಜಿ.ಸಿ. ಶಿವಲಿಂಗಪ್ಪ ಹೇಳಿದರು.

ಲಿಂ. ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಜಿ 50ನೇ ಲಿಂಗೈಕ್ಯ ದಿನೋತ್ಸವ: ಶಿವಾದ್ವೈತ ತತ್ವ ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಜಿ.ಸಿ. ಶಿವಲಿಂಗಪ್ಪ

ಕನ್ನಡಪ್ರಭ ವಾರ್ತೆ, ಕಡೂರು

ಇದೇ 4, 5, ಮತ್ತು 6 ರಂದು ಕಡೂರು ತಾಲೂಕಿನ ಗಿರಿಯಾಪುರದಲ್ಲಿ ಲಿಂ.ಹಾನಗಲ್ಲ ಕುಮಾರ ಶಿವಯೋಗಿ ಸ್ಮಾರಕ ಶಿವಾನುಭವ ಸಮ್ಮೇಳನ -ಅಮೃತ ಮಹೋತ್ಸವ ಹಾಗೂ ಲಿಂ. ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳ 50 ನೇ ಲಿಂಗೈಕ್ಯ ದಿನೋತ್ಸವ ನಡೆಯಲಿದೆ ಎಂದು ಶಿವಾದ್ವೈತ ತತ್ವ ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಜಿ.ಸಿ. ಶಿವಲಿಂಗಪ್ಪ ಹೇಳಿದರು.

ಕಡೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಿರಿಯಾಪುರದಲ್ಲಿ ಲಿಂ. ಹಾನಗಲ್ಲ ಕುಮಾರಸ್ವಾಮಿಗಳ ಸ್ಮಾರಕ ವಾಗಿ ಶಿವಾದ್ವೈತ ತತ್ವ ಪ್ರಚಾರ ಕೇಂದ್ರ ಆರಂಭಿಸಿ ಪ್ರತಿ ವರ್ಷ ನಡೆಸುತಿದ್ದ ಸಮ್ಮೇಳನಕ್ಕೆ ಈಗ 75ರ ಹರೆಯ. ಈಗಾಗಲೇ ದ್ವಾದಶ, ರಜತ ಮತ್ತು ಸುವರ್ಣ ಮಹೋತ್ಸವಗಳನ್ನು ಆಚರಿಸಲಾಗಿರುವ ಈ ಸಮ್ಮೇಳನದ ಅಮೃತ ಮಹೋತ್ಸವ ಮತ್ತು ಇದೇ ಸಂದರ್ಭದಲ್ಲಿ ಪೂಜ್ಯರ ಐವತ್ತನೇ ದಿನೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದರು. ಮಾ. 4 ರ ಸೋಮವಾರ ಬೆಳಗ್ಗೆ ಕೆ.ಬಿದರೆ ಮಠದ ಶ್ರೀ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿಗಳಿಂದ ಹಾನಗಲ್ಲ ಕುಮಾರ ಶಿವಯೋಗಿಗಳ ರಜತ ಮೂರ್ತಿ ಮತ್ತು ಮಹಾಸ್ವಾಮಿಜಿ ಭಾವಚಿತ್ರದ ಉತ್ಸವದ ಮೂಲಕ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಬೆಳಿಗ್ಗೆ 10:30ಕ್ಕೆ ಅಮೃತ ಮಹೋತ್ಸವ ಮತ್ತು ನೂತನ ಸಭಾ ಭವನವನ್ನು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳಿಂದ ಉದ್ಘಾಟನೆ ಆಗಲಿದೆ. ಕಡೂರು ಶಾಸಕ ಕೆ. ಎಸ್. ಆನಂದ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಮಾಜಿ ಸಚಿವ ಹಾಗೂ ಸ್ಕೌಟ್ ಅಂಡ್ ಗೈಡ್ಸ್‌ ನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮೈಸೂರಿನ ಕುಂದೂರು ಮಠದ ಶ್ರೀ ಭರತ್ ಚಂದ್ರಸ್ವಾಮೀಜಿ ವಿಭೂತಿ ಗ್ರಂಥ, ಸಂಭ್ರಮ ಸ್ಮರಣ ಸಂಚಿಕೆಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಬಿಡುಗಡೆ ಮಾಡಲಿದ್ದಾರೆ. ಸಭಾ ಭವನವನ್ನು ನಾಡೋಜ ಡಾ.ಗೊ.ರು. ಚನ್ನಬಸಪ್ಪ ಉದ್ಘಾಟಿಸಲಿದ್ದಾರೆ. ಪ್ರಚಾರ ಸಮಿತಿ ಕಾರ್ಯದರ್ಶಿ ಜಿ.ಸಿ. ಶಿವಲಿಂಗಪ್ಪ ನುಡಿಯಲಿದ್ದು, ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ನಿ. ಜನರಲ್ ಜಿ.ಎಸ್. ರಾಜು ಹಾಗೂ ಜೆ.ಪಿ ಸನ್ಮಾನ ನಡೆಯಲಿದೆ ಎಂದರು. ಮಧ್ಯಾಹ್ನ 2:30ಕ್ಕೆ ಯಳನಾಡು ಮಠದ ಶ್ರೀ ಜ್ಞಾನ ಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ . ಬೀರೂರಿನ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹಣ್ಣೆ ಮಠದ ಶ್ರೀ ಮರುಳ ಸಿದ್ದೇಶ್ವರ ಸ್ವಾಮೀಜಿ ಉಪಸ್ಥಿತಿಯಲ್ಲಿ ನವಲಗುಂದದ ಗವಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮತ್ತು ಬೆಂಗಳೂರಿನ ಚಲನಚಿತ್ರ ನಿರ್ದೇಶಕ ಜಿ.ಸಿ. ಕಾರ್ತಿಕ್ ಸರಗೂರು ರವರಿಂದ ಉಪನ್ಯಾಸ ನೀಡಲಿದ್ದು ,ಬಡಗನಾಡು ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಎಚ್ ಸಿ ರೇವಣಸಿದ್ದಪ್ಪ, ಗುತ್ತಿಗೆದಾರ ಹಾಲಪ್ಪ ಸಮ್ಮುಖದಲ್ಲಿ ನಡೆಯಲಿದೆ ಎಂದರು.

ಮಂಗಳವಾರ ಬೆಳಿಗ್ಗೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಜಗದ್ಗುರು ಡಾ. ಗುರು ಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಹಾಗೂ ವಿವಿಧ ಮಠಗಳ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುವ ಚಿಂತನ ಗೋಷ್ಠಿಯಲ್ಲಿ ಡಾ. ಎಸ್ ಪಿ ಯೋಗಣ್ಣ ಮತ್ತು ಮೈಸೂರಿನ ಡಾಕ್ಟರ್ ವಿ. ಲಕ್ಷ್ಮೀನಾರಾಯಣ ಅವರಿಂದ ಆಧ್ಯಾತ್ಮ ಆರೋಗ್ಯ ಸುಧಾರಣೆ, ಜೀವನ ಶೈಲಿ ಕುರಿತು ಮಾತನಾಡಲಿದ್ದಾರೆ. ಮೈಸೂರಿನ ಹೇಮರೆಡ್ಡಿ ಮಲ್ಲಮ್ಮ ಬಳಗದ ಜಿ. ಸಿದ್ದಲಿಂಗ ಸ್ವಾಮಿ, ಆರೋಗ್ಯ ಇಲಾಖೆ ನಿವೃತ್ತ ನಿರ್ದೇಶಕ ಜಿ.ಎಂ. ವಾಮ ದೇವ ಅಧ್ಯಕ್ಷತೆಯಲ್ಲಿ ಚಿಂತನಾ ಗೋಷ್ಠಿ ನಡೆಯಲಿದ್ದು, ಸಾಣೇಹಳ್ಳಿ ಶಿವ ಸಂಚಾರ ತಂಡದಿಂದ ವಚನ ಸಂಗೀತ ನಡೆಯಲಿದೆ. ಎರಡನೇ ಚಿಂತನ ಗೋಷ್ಠಿಯಲ್ಲಿ ಶ್ರೀಪಂಡಿತಾರಾಧ್ಯ ಸ್ವಾಮೀಜಿ, ಶ್ರೀ ಪ್ರಭುಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಡಾ.ಪ್ರೇಮಸಿದ್ದರಾಜು,ವಿರೂಪಾಕ್ಷಪ್ಪ,ಜಿ.ಎನ್.ಪ್ರತಾಪ್ ಭಾಗವಹಿಸಲಿದ್ದಾರೆ, 3 ನೇ ಗೋಷ್ಠಿಯಲ್ಲಿ ಚಿಕ್ಕಮಗಳೂರಿನ ಚಂದ್ರಶೇಖರ ನಾರಾಯಣಪುರ ಮತ್ತು ಗಿರಿಯಾಪುರದ ಜಿ.ಸಿ.ಪ್ರಭುಕುಮಾರ್, ಇಂದುಮತಿ ಸಾಲಿಮಠ ಭಾಗವಹಿಸಲಿದ್ದಾರೆ.ಮಧ್ಯಾಹ್ನ 2.30ಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರೋಪ ನಡೆಯಲಿದೆ. ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಸೋಮಶೇಖರ್ ಸಮಾರೋಪ ನುಡಿ ನುಡಿಯಲಿ ದ್ದಾರೆ. ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಮೈಸೂರು ಜಿಲ್ಲೆ ಶ್ರೀ ಅಮ್ಮ ರಾಮಚಂದ್ರ ಪಾಲ್ಗೊಳ್ಳಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಗುರುಶಾಂತಪ್ಪ ಮತ್ತಿತರರು ಇದ್ದರು.

2ಕೆಕೆಡಿಯು1 ,

ಕಡೂರು ತಾಲೂಕಿನ ಗಿರಿಯಾಪುರದಲ್ಲಿ ನಡೆಯಲಿರುವ ಶಿವಾನುಭವ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.

Share this article