ಮುನೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪೂಜೆ ಸಂಪನ್ನ

KannadaprabhaNewsNetwork |  
Published : Feb 19, 2026, 03:15 AM IST
ಸ್ಥಳೀಯ ದಾನಿಗಳಾದ ಸರೋಜನಾರಾಯಣ ದಂಪತಿಗಳನ್ನು ಸನ್ಮಾನಿಸುತ್ತಿರುವುದು. | Kannada Prabha

ಸಾರಾಂಶ

ಇಲ್ಲಿಗೆ ಸಮೀಪದ ಬೊಳ್ಳುರು ಗ್ರಾಮದ ಮುನೇಶ್ವರ ದೇವಸ್ಥಾನಲ್ಲಿ ಶಿವರಾತ್ರಿ ಮಹಾ ಪೂಜೆ ನಡೆಯಿತು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು

ಇಲ್ಲಿಗೆ ಸಮೀಪದ ಬೊಳ್ಳುರು ಗ್ರಾಮದ ಮುನೇಶ್ವರ ದೇವಸ್ಥಾನಲ್ಲಿ ಶಿವರಾತ್ರಿ ಮಹಾ ಪೂಜೆ ನಡೆಯಿತು.

ಪ್ರತಿವರ್ಷ ಶಿವರಾತ್ರಿಯ ಮರುದಿನ ಇಲ್ಲಿ ಪೂಜೆ ನಡೆಸಲಾಗುತ್ತಿದೆ. 25 ನೇ ವರ್ಷದ ಮಹಾಪೂಜೆ ನಡೆಯಿತು. ಈ ಸಂದರ್ಭ ಗಣಪತಿ ಹೋಮ ಮತ್ತು ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಿತು.

ಪೂಜಾಕಾರ್ಯವನ್ನು ಸೋಮಶೇಖರ್‌ ಭಟ್‌ ತಂಡದವರು ನೆರವೇರಿಸಿದರು. ಈ ಸಂದರ್ಭ ದೇವಸ್ಥಾನಕ್ಕೆ ಸ್ಥಳ ದಾನ ಮಾಡಿದ ಸ್ಥಳೀಯ ದಾನಿಗಳಾದ ಸರೋಜ ನಾರಾಯಣ ದಂಪತಿ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶಶಿಕುಮಾರ್‌ ಮತ್ತು ಕಾರ್ಯದರ್ಶಿ ಕುಡೆಕಲ್ಲು ಗುರುಪ್ರಸಾದ್‌ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಅಲ್ಲಿನ ಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ

ಬಿ.ಸಿ. ಮಲ್ಲಿಕಾರ್ಜುನ ಮತ್ತು ಗ್ರಾಮದ ಹಿರಿಯರಾದ ಕೆ.ಎಲ್.ರಾಮಣ್ಣ ಮತ್ತು ಸಮಿತಿ ಸದಸ್ಯರು ಹಾಜರಿದ್ದರು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ