ಶಿವರಾತ್ರಿ: ಬಿಎಂಟಿಸಿಯಿಂದ ವಿಶೇಷ ಪ್ಯಾಕೇಜ್ ಬಿಡುಗಡೆ

KannadaprabhaNewsNetwork |  
Published : Mar 08, 2024, 01:46 AM IST
ಸಿಕೆಬಿ-1 ನಂದಿಯ ಭೋಗ ನಂಧಿಶ್ವರ ಸಿಕೆಬಿ-2 ಈಶಾ ಫೌಂಡೇಶನ್​ ನ 112 ಅಡಿಗಳ ಆದಿಯೋಗಿ ಸಿಕೆಬಿ-3 ರಂಗಸ್ಥಳದ ರಂಗನಾಥಸಿಕೆಬಿ-4 ಮುದ್ದೇನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಸಮಾಧಿ | Kannada Prabha

ಸಾರಾಂಶ

ಈಶ ಫೌಂಡೇಷನ್ ಹೆಸರಿನ ಈ ವಿಶೇಷ ಟೂರ್ ಪ್ಯಾಕೇಜ್ ಅಡಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬಸ್ ಸೇವೆ ಶುರುವಾಗಲಿದ್ದು, ರಾತ್ರಿ 9.30ಕ್ಕೆ ಮೆಜೆಸ್ಟಿಕ್​ಗೆ ವಾಪಸ್ ಕರೆದುಕೊಂಡು ಬರಲಾಗುತ್ತದೆ. ಒಂದು ಸೀಟಿಗೆ 500 ರು. ದರ ನಿಗದಿ ಮಾಡಲಾಗಿದೆ. ಈಶ ಫೌಂಡೇಷನ್ ಸೇರಿ ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡಲು ಅವಕಾಶವಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಿವರಾತ್ರಿ, ಬೇಸಿಗೆ ರಜೆ ಆರಂಭವಾಗುವ ಹಿನ್ನೆಲೆ ಬಿಎಂಟಿಸಿ ವಿಶೇಷ ಪ್ಯಾಕೇಜ್ ಬಿಡುಗಡೆಗೆ ಮುಂದಾಗಿದೆ. ಅದರಲ್ಲೂ ಚಿಕ್ಕಬಳ್ಳಾಪುರದ ಈಶ ಫೌಂಡೇಷನ್​ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಬಿಎಂಟಿಸಿಯ ಈ ಪ್ಯಾಕೇಜ್​ ಮೂಲಕ 500 ರು.ಗೆ ಐದು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ.

ನಗರದ ಹೊರವಲಯದ ಸುತ್ತ ಮುತ್ತಲಿನಲ್ಲಿರುವ ಸುಂದರ ಬೆಟ್ಟಗಳು, ಹಸಿರು ತಪ್ಪಲಿನಲ್ಲಿ ಎದ್ದು ಕಾಣುವ ಬೃಹತ್ ಶಿವನ ಮೂರ್ತಿಯಿರುವ ಈಶ ಫೌಂಡೇಷನ್‌ ನೋಡಲು ಪ್ರತಿ ದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ವಾರಾಂತ್ಯ, ರಜಾ ದಿನಗಳು ಬಂತೆಂದರೆ ಜನ ಸಾಗರವೇ ಹರಿದು ಬರುತ್ತದೆ. ಸದ್ಯ ಈಶ ಫೌಂಡೇಷನ್​ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಬಿಎಂಟಿಸಿ ವಿಶೇಷ ಟೂರ್ ಪ್ಯಾಕೆಜ್ ವ್ಯವಸ್ಥೆ ಮಾಡಿದೆ. ಮಾರ್ಚ್​ 8 ಶಿವರಾತ್ರಿ ಹಬ್ಬದಿಂದ ಈಶಾ ಫೌಂಡೇಷನ್ ಟೂರ್ ಪ್ಯಾಕೇಜ್ ಆರಂಭಿಸಲಿದೆ.

ಈಶ ಫೌಂಡೇಷನ್ ಹೆಸರಿನ ಈ ವಿಶೇಷ ಟೂರ್ ಪ್ಯಾಕೇಜ್ ಅಡಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬಸ್ ಸೇವೆ ಶುರುವಾಗಲಿದ್ದು, ರಾತ್ರಿ 9.30ಕ್ಕೆ ಮೆಜೆಸ್ಟಿಕ್​ಗೆ ವಾಪಸ್ ಕರೆದುಕೊಂಡು ಬರಲಾಗುತ್ತದೆ. ಒಂದು ಸೀಟಿಗೆ 500 ರು. ದರ ನಿಗದಿ ಮಾಡಲಾಗಿದೆ. ಈಶ ಫೌಂಡೇಷನ್ ಸೇರಿ ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡಲು ಅವಕಾಶವಿದೆ.

ಮಾರ್ಚ್ 8 ರಿಂದ ಎಲ್ಲ ಸಾರ್ವತ್ರಿಕ ರಜೆ ದಿನಗಳಲ್ಲಿ ಈ ಸೇವೆ ಲಭ್ಯವಿರಲಿದೆ.

ಈಶಾ ಟೂರ್ ಪ್ಯಾಕೇಜ್ ಅಡಿ ಹೋಗಬಹುದಾದ ಸ್ಥಳಗಳು:

ನಂದಿಯ ಐತಿಹಾಸಿಕ ಭೋಗ ನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ ದೇವಸ್ಥಾನ, ಮುದ್ದೇನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ ಸ್ಥಳ, ರಂಗಸ್ಥಳದ ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಈಶ ಫೌಂಡೇಷನ್ ಸೇರಿ ಒಟ್ಟು 5 ಪ್ರವಾಸಿ ತಾಣಗಳನ್ನು ಈ ವಿಶೇಷ ಪ್ಯಾಕೇಜ್ ಒಳಗೊಂಡಿದೆ. ಈಶಾ ಫೌಂಡೇಷನ್​ನ ಆದಿಯೋಗಿ ಪ್ರತಿಮೆಯು 112 ಅಡಿ ಇದ್ದು ಉಕ್ಕಿನಿಂದ ಮಾಡಲಾಗಿದೆ. ಸುಮಾರು 500 ಟನ್ ತೂಕವಿದೆ. ಇದು 34 ಮೀಟರ್ ಎತ್ತರ, 45 ಮೀಟರ್ ಉದ್ದ ಮತ್ತು 25 ಮೀಟರ್ ಅಗಲವಿದೆ. ಆದಿ ಯೋಗಿ ಪ್ರತಿಮೆಯ ಮುಂದಿರುವ 21 ಅಡಿ ಎತ್ತರದ ನಂದಿ ಮತ್ತು 54 ಅಡಿ ಎತ್ತರದ ಮಹಾ ತ್ರಿಶೂಲವಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಬಳಿಯ ಈಶಾ ಫೌಂಡೇಷನ್‌ಗೆ ತೆರಳಲು ಟ್ರಾಫಿಕ್‌ಗೆ ಅನುಗುಣವಾಗಿ ಸುಮಾರು 1 ಗಂಟೆ 30 ನಿಮಿಷ ಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಹತ್ತಿರದಲ್ಲಿರುವ ನಂದಿ ಗಿರಿಧಾಮ ಹಾಗೂ ಭೋಗ ನಂದೀಶ್ವರ ದೇವಾಲಯಗಳಿಗೂ ಜನ ಹೆಚ್ಚಾಗಿ ಭೇಟಿ ನೀಡುತ್ತಾರೆ. ಬಿಎಂಟಿಸಿಯ ವಿಶೇಷ ಟೂರ್ ಪ್ಯಾಕೇಜ್​ ಮೂಲಕ ಪ್ರವಾಸಿಗರು ಕೇವಲ 500 ರು.ಗೆ ಈ ಮೇಲ್ಕಂಡ ನಾಲ್ಕು ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ