ಬಾಗಲಕೋಟೆ ಉಪ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ: ಸಿದ್ದಲಿಂಗ ಸ್ವಾಮೀಜಿ

KannadaprabhaNewsNetwork |  
Published : Feb 25, 2026, 03:15 AM IST
(ಫೋಟೊಬಿಕೆಟಿ6, ಶಿವಸೇನಾ ರಾಜ್ಯಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ  ಅವರು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು) | Kannada Prabha

ಸಾರಾಂಶ

ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧಿಸುವುದು ಖಚಿತ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧಿಸುವುದು ಖಚಿತ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಉಪ ಚುನಾವಣೆಯಲ್ಲಿ ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ಜೊತೆಗೆ ಜಿಪಂ, ತಾಪಂ, ಗ್ರಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ ಎಂದು ತಿಳಿಸಿದರು.

ಹಿಂದುತ್ವ ಮತ್ತು ಅಭಿವೃದ್ಧಿ ನಮ್ಮ ಪಕ್ಷದ ಅಜೆಂಡಾ ಆಗಿದ್ದು, ಹಿಂದುತ್ವಕ್ಕಾಗಿ ಜೈಲಿಗೆ ಹೋದ ಹಿಂದೂ ಕಾರ್ಯಕರ್ತರಿಗೆ, ಯುವಕರಿಗೆ, ಮಹಿಳೆಯರು, ರೈತರು ಹಾಗೂ ಕಾರ್ಮಿಕರಿಗೆ ಆದ್ಯತೆ ನೀಡಲಾಗುವುದು. ಜಾತಿ ಹಾಗೂ ಹಣದ ರಾಜಕಾರಣ ಮಾಡುವವರಿಗೆ ಪಕ್ಷದಲ್ಲಿ ಅವಕಾಶವಿಲ್ಲ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ರಾಜ್ಯದ ಜನತೆ ಬದಲಾವಣೆ ಬಯಸುತ್ತಿದೆ. ಚಿಕ್ಕಮಗಳೂರು, ಕೋಲಾರ, ದಾವಣಗೆರೆ, ಬಾಗಲಕೋಟೆ, ಬೆಂಗಳೂರು ಸೇರಿದಂತೆ ಮುಂತಾದ ಕಡೆಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದು, ದಲಿತರ ಹಣವನ್ನು ನುಂಗಿದ ಭ್ರಷ್ಟ ಸರ್ಕಾರ ಇದಾಗಿದೆ. ಕಾಂಗ್ರೆಸ್ ಪಕ್ಷವು ಮುಸ್ಲಿಮರ ಓಲೈಕೆ ಮಾಡುತ್ತಿದ್ದು, ಇಂತಹ ಕೆಟ್ಟ ಸರ್ಕಾರವನ್ನು ಕಿತ್ತೊಗೆಯುವುದು ಹಿಂದೂ ಕಾರ್ಯಕರ್ತರ ಉದ್ದೇಶವಾಗಿದೆ ಎಂದು ಹೇಳಿದರು.

ಬಾಗಲಕೋಟೆ ಘಟನೆಯನ್ನು ಬಗ್ಗೆ ತೀವ್ರವಾಗಿ ಖಂಡಿಸಿದ ಅವರು, ಮುಸ್ಲಿಮರನ್ನು ಕಾಪಾಡಲು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು. ಹಿಂದುತ್ವದ ರಕ್ಷಣೆ ಮಾಡುವವರಿಗೆ ಮಾತ್ರ ಶಿವಸೇನೆ ಬೆಂಬಲಿಸುತ್ತದೆ. ಇಡೀ ಕನ್ನಡ ನಾಡು ಗಾಂಜಾಮಯವಾಗಿದ್ದ ಅಸಮರ್ಥ ಗೃಹ ಸಚಿವ ರಾಜ್ಯವನ್ನು ಆಳುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ಉಪಾಧ್ಯಕ್ಷ ಆನಂದ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಮಹಾಲಿಂಗಣ್ಣ ಗುಂಜಿಗಾವಿ, ಅಮರನಾಥ ಬೆಂಗಳೂರು, ಎಂ.ಎಸ್.ಹರೀಶ, ಜಿಲ್ಲಾಧ್ಯಕ್ಷ ನಾಗರಾಜ್ ಭಜಂತ್ರಿ ಉಪಸ್ಥಿತರಿದ್ದರು.-----------

ಬಾಕ್ಸ್....

ಬಣ್ಣ ಹಚ್ಚಿಕೊಂಡು ಹಿಂದುತ್ವ ಕೆಲಸ ಮಾಡಬೇಡಿ

ಬಣ್ಣ ಹಚ್ಚಿಕೊಂಡು ಹಿಂದುತ್ವ ಕೆಲಸ ಮಾಡಬೇಡಿ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಬಾಗಲಕೋಟೆ ನಗರದಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಬಳಿಕ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಪೊಲೀಸರೊಂದಿಗೆ ವಾದ ಮಾಡಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ತಾವು ಶಾಸಕರಿದ್ದಾಗ ಯಾವ ಹಿಂದೂ ಕಾರ್ಯಕರ್ತರನ್ನು ಇವರು ಕಾಪಾಡಿದ್ದಾರೆ ಎಂದು ಪ್ರಶ್ನಿಸಿದರು.

ಇಂತಹ ಇಬ್ಭಗೆ ನೀತಿ ಅನುಸರಿಸುತ್ತಿರುವವರೆಗೆ ತಕ್ಕ ಪಾಠವನ್ನು ಹಿಂದೂ ಕಾರ್ಯಕರ್ತರೇ ಕಲಿಸುತ್ತಾರೆ. ಬಾಗಲಕೋಟೆ ನಗರದ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ವಿಶ್ವಗುರು ಬಸವಣ್ಣವರ ಪುತ್ಥಳಿ ಸ್ಥಾಪನೆ ಮಾಡಲು ಆಗಲಿಲ್ಲ. ಈಗ ನಾಟಕೀಯ ಹೋರಾಟ ಮಾಡುತ್ತಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಪುತ್ಥಳಿಗಳನ್ನು ಅನಾವರಣ ಏಕೆ ಮಾಡಲಿಲ್ಲ? ಜಿಲ್ಲೆಯಲ್ಲಿ ಇಂತಹ ಅಸಮರ್ಥ ಬಿಜೆಪಿ ನಾಯಕರು ಇದ್ದಾರೆಂದು ದೂರಿದರು.

ಪಂಖಾ ಮಸೀದಿ ಅಲ್ಲ....ಪತ್ತರ್ ಮಸೀದಿ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಕಾಲಕ್ಕೆ ಪಂಖಾ ಮಸೀದಿಯಿಂದ ಕಲ್ಲು ಹಾಗೂ ಚಪ್ಪಲಿ ಎಸೆದಿರುವುದನ್ನು ಶಿವಸೇನಾ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಬಾಗಲಕೋಟೆಯಲ್ಲಿ ನಡೆಯುವ ಘಟನೆಗಳು ಪಂಖಾ ಮಸೀದಿಯಿಂದಲೇ ಆರಂಭವಾಗುತ್ತದೆ. ಅದು ಪಂಖಾ ಮಸೀದಿ ಅಲ್ಲ ಪತ್ತರ್ ಮಸೀದಿ ಎಂದು ಸಿದ್ದಲಿಂಗ ಸ್ವಾಮೀಜಿ ಗುಡುಗಿದರು.

ಇನ್ಮುಂದೆ ಹಿಂದುಗಳ ಮೆರವಣಿಗೆ ವೇಳೆ ಟ್ರಕ್‌ನಲ್ಲಿ ಕಲ್ಲು ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ ಶ್ರೀಗಳು, ಆ ಕಡೆಯಿಂದ ಕಲ್ಲು ಬಂದರೆ ತಕ್ಕ ಉತ್ತರ ಕೊಡಿ. ಬರಿ ಡಿಜೆ ಮೂಲಕ‌ ಮೆರವಣಿಗೆ ನಡೆಯೋದಿಲ್ಲ. ಇಲ್ಲದಿದ್ದರೆ ಪೊಲೀಸರಿಗೂ ಕಲ್ಲು ಬೀಳುತ್ತವೆ. ಜಮೀರ್ ಅಹ್ಮದ್ ಅಂತವರು ಕಲ್ಲೆಸೆದ ಕಿಡಿಗೇಡಿಗಳ ಮನೆಗೆ ದುಡ್ಡು, ರೇಷನ್ ಕೊಡುತ್ತಾರೆ ಎಂದು ಆರೋಪಿಸಿದರು.

ರಾಜ್ಯಾದ್ಯಂತ ಹಿಂದುಗಳ‌ ಮೇಲೆ‌ ನಿರಂತರ ದೌರ್ಜನ್ಯ ‌ ನಡೆಯುತ್ತಿವೆ. ಕೊಲೆ‌ಮಾಡುವ ಮಟ್ಟಕ್ಕೆ ಕೆಲ ಮತಾಂಧರು ಮುಂದಾಗಿದ್ದಾರೆ. ಒಂದು ತಿಂಗಳಿಂದ ಇಲ್ಲಿಯವರೆಗೆ ನೋಡುವುದಾದರೆ ಮುರ್ಡೇಶ್ವರದ‌ ಹಿಂದು ಮನೆ ಮೇಲೆ‌ ಕಲ್ಲು ತೂರಾಟ, ಚಿಕ್ಕಮಗಳೂರು ಮುಸ್ಲಿಂ ಯುವತಿಗೆ ಹಿಂದು ಯುವಕ ಡ್ರಾಪ್ ಕೊಟ್ಟ ಕಾರಣ ಹಲ್ಲೆ ಮಾಡುತ್ತಾರೆ. ಕೋಲಾರದಲ್ಲಿ ಕಾಲ್ಕೆರೆದು ಕೆರೆದು ಹಲ್ಲೆ ಮಾಡುತ್ತಾರೆ. ದಾವಣಗೆರೆ ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡುತ್ತಾರೆ ಎಂದು ಪ್ರಕರಣಗಳನ್ನು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ
ಯಶಸ್ಸು ನೆತ್ತಿಗೆರಬಾರದು