ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗದ ವ್ಯಕ್ತಿ ನ್ಯಾಯಮೂರ್ತಿಯಾಗಿರುವುದನ್ನು ಸಹಿಸದ ಹಿತಾಸಕ್ತಿಗಳಿಂದ ಅವಮಾನ ಆಗಿದೆ. ಅವಮಾನ ಮಾಡುವ ಮೂಲಕ ಸಂವಿಧಾನಕ್ಕೆ ಧಕ್ಕೆ ತಂದಿದ್ದಾರೆ. ಇದನ್ನು ಖಂಡಿಸಿ ಬಂದ್ ಮಾಡಿ ಪ್ರತಿಭಟಿಸಲಾಗುವುದು. ಹೋರಾಟದಲ್ಲಿ ದಲಿತಪರ, ಹಿಂದುಳಿದ ವರ್ಗದ, ಅಲ್ಪಸಂಖ್ಯಾತ ಸಂಘಟನೆಗಳು, ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಮಾತನಾಡಿ, ನ್ಯಾಯಮೂರ್ತಿಗಳಿಗೆ ಬೂಟು ಎಸೆದಂತೆಯೇ ಪ್ರಧಾನ ಮಂತ್ರಿಗಳಿಗೂ ಬೂಟು ಎಸೆದರೆ ನೀವು ಸುಮ್ಮನೆ ಇರುತ್ತೀರಾ?. ಇವರು ದಲಿತ ನ್ಯಾಯಾಧೀಶರಿದ್ದಾರೆ ಎಂದು ದಾಳಿ ಮಾಡಿದವನ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲವೇನು ಎಂದು ಪ್ರಶ್ನಿಸಿದರು.ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಹಿಂದೂ ರಾಷ್ಟ್ರ, ಹಿಂದೂ ಪುನರುತ್ಥಾನ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಮನುವಾದಿಗಳಿಗೆ ಸಹಿಸಲು ಆಗುತ್ತಿಲ್ಲ. ಕೆಳ ಜಾತಿಯವರನ್ನು ಉನ್ನತ ಸ್ಥಾನದಲ್ಲಿ ನೋಡಲು ಮನುವಾದಿಗಳಿಗೆ, ಮೇಲ್ಜಾತಿಯವರಿಗೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ರಮೇಶ ಆಸಂಗಿ, ಅಭಿಷೇಕ ಚಕ್ರವರ್ತಿ, ಅಡಿವೆಪ್ಪ ಸಾಲಗಲ, ಸಿದ್ದು ರಾಯಣ್ಣವರ, ಇರ್ಫಾನ ಶೇಖ, ಫಯಾಜ್ ಕಲಾದಗಿ, ವಸಂತ ಹೊನಮೊಡೆ, ನಾಗರಾಜ ಲಂಬು, ಮಲ್ಲು ಬಿದರಿ, ಪರಶುರಾಮ ಲಂಬು, ಶ್ರೀನಾಥ ಪೂಜಾರಿ ಉಪಸ್ಥಿತರಿದ್ದರು.