ಗಣಪ ಉತ್ಸವಕ್ಕೆ ಖರೀದಿ ಭರಾಟೆ ರಂಗು

KannadaprabhaNewsNetwork |  
Published : Sep 14, 2026, 01:45 AM IST
ಗೌರಿ ಗಣೇಶ ಹಬ್ಬ ಒಂದೇ ದಿನ | Kannada Prabha

ಸಾರಾಂಶ

ದೊಡ್ಡ ಹಬ್ಬಗಳಲ್ಲಿ ಒಂದಾದ ಗೌರಿ-ಗಣೇಶ ಹಬ್ಬವು ಈ ಬಾರಿ ಒಂದೇ ದಿನ ಬಂದಿರುವುದರಿಂದ ಗೌರಿ-ಗಣೇಶ ವಿಗ್ರಹಗಳು, ಹೂವು, ಬಾಳೆಹಣ್ಣು, ಅಲಂಕಾರಿಕ ವಸ್ತುಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿ ಬೆಲೆ ಏರಿಕೆ ಬರದ ಬಿಸಿ ತಟ್ಟುತ್ತಿದ್ದರೂ, ಸೋಮವಾರದ ಗೌರಿ ಗಣೇಶ ಹಬ್ಬಕ್ಕೆ ಜನರು ವಸ್ತುಗಳನ್ನು ಖರೀದಿಸುತ್ತಿದ್ದುದು ಮಾರುಕಟ್ಟೆಯಲ್ಲಿ ಕಂಡು ಬಂತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೊಡ್ಡ ಹಬ್ಬಗಳಲ್ಲಿ ಒಂದಾದ ಗೌರಿ-ಗಣೇಶ ಹಬ್ಬವು ಈ ಬಾರಿ ಒಂದೇ ದಿನ ಬಂದಿರುವುದರಿಂದ ಗೌರಿ-ಗಣೇಶ ವಿಗ್ರಹಗಳು, ಹೂವು, ಬಾಳೆಹಣ್ಣು, ಅಲಂಕಾರಿಕ ವಸ್ತುಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿ ಬೆಲೆ ಏರಿಕೆ ಬರದ ಬಿಸಿ ತಟ್ಟುತ್ತಿದ್ದರೂ, ಸೋಮವಾರದ ಗೌರಿ ಗಣೇಶ ಹಬ್ಬಕ್ಕೆ ಜನರು ವಸ್ತುಗಳನ್ನು ಖರೀದಿಸುತ್ತಿದ್ದುದು ಮಾರುಕಟ್ಟೆಯಲ್ಲಿ ಕಂಡು ಬಂತು.

ಬರ ಬೆಲೆ ಏರಿಕೆಯ ನಡುವೆಯೂ ಈ ಬಾರಿ ಗೌರಿ ಗಣವತಿ ವ್ಯಾಪಾರ ಬಲು ಜೋರಾಗಿದ್ದು, ಮಾರುಕಟ್ಟೆಯಲ್ಲಿ ವಿವಿಧ ರೀತಿಯ ವಿವಿಧ ಭಂಗಿಯ ಗೌರಿ- ಗಣಪತಿಯನ್ನು ಕೊಳ್ಳಲು ಜನರು ಆಗಮಿಸುತ್ತಿದ್ದರು, ಅಗತ್ಯ ವಸ್ತಗಳ ಬೆಲೆ, ಹೂ, ಹಣ್ಣು ಪೂಜಾ ಸಾಮಾಗ್ರಿಗಳ ಬೆಲೆ ಹೆಚ್ಚಾದರು, ಜನರು ಲೆಕ್ಕಿಸದೇ ಖರೀದಿಯಲ್ಲಿ ತೊಡಗಿದ್ದರು. ಇದ್ದುದರಲ್ಲಿ ತರಕಾರಿಗಳ ಬೆಲೆ ಸಾಮಾನ್ಯವಾಗಿತ್ತು.

ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು ಕೊಳವೆಬಾವಿಗಳಲ್ಲಿ ನೀರಿಲ್ಲದೆ ಹೂವು ಮತ್ತು ಹಣ್ಣುಗಳ ಇಳುವರಿ ಕುಸಿದಿದ್ದು ದರಗಳು ಗಣನೀಯವಾಗಿ ಏರಿಕೆಯಾಗಿವೆ. ಮಾರುಕಟ್ಟೆಯಲ್ಲಿ ಕನಕಾಂಬರ ೧,೩೦೦ ರು., ಮಲ್ಲಿಗೆ ೬೦೦ ರು. ಹಾಗೂ ಸೇಬು ೩೦೦ ರು. ತಲುಪಿದೆ. ಇಷ್ಟಾದರೂ ಹಬ್ಬದ ಉತ್ಸಾಹದಲ್ಲಿ ಯಾವುದೇ ಕೊರತೆಯಾಗದೆ ನಾಗರಿಕರು ಹೂವು, ಹಣ್ಣು, ಗೌರಿ ಬಾಗಿನದ ಕಿಟ್‌ಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಭರ್ಜರಿಯಾಗಿ ಖರೀದಿಸುತ್ತಿದ್ದಾರೆ

ಜಿಲ್ಲಾ ಕೇಂದ್ರ ಚಾಮರಾಜನಗರ ಭಾನುವಾರ ಅಂಗಡಿ ಬೀದಿಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿಯೇ ಇತ್ತು, ಅದರಲ್ಲೂ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಚಾಮರಾಜೇಶ್ವರ ದೇವಸ್ಥಾನದ ಪಕ್ಕದಲ್ಲಿ ತೆರೆದಿರುವ ಗೌರಿ-ಗಣಪತಿ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಕಳೆಕಟ್ಟಿತ್ತು.

ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳ ಯುವಕರು ತಮ್ಮ ಬಡಾವಣೆ ಮತ್ತು ಗ್ರಾಮಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲು, ದೊಡ್ಡ ದೊಡ್ಡ ಗಣಪತಿ ವಿಗ್ರಹಗಳನ್ನು ಖರೀದಿ ಮಾಡಿ ಆಟೋಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.

ಭಾನುವಾರ ಬೆಳಿಗ್ಗೆಯಿಂದಲೇ ವಸ್ತುಗಳನ್ನು ಖರೀದಿಸಲು ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿಯ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಹಳೆ ಖಾಸಗಿ ಬಸ್ ನಿಲ್ದಾಣದ ಅಂಗಡಿಗಳು, ಚಾಮರಾಜೇಶ್ವರ ದೇವಸ್ಥಾನದ ಪಕ್ಕದಲ್ಲಿ ತೆರೆದಿರುವ ಗೌರಿ-ಗಣಪತಿ ಮಾರಾಟ ಮಳಿಗೆಗಳಿಗೆ ಜನರು ಮುಗಿಬಿದ್ದರು.

ಮನೆಯಲ್ಲಿ ಬಳಕೆ ತೆಗೆಯಲು ಹೊಸ ಮಡಕೆ, ಕುಡಿಕೆ, ಬಾಗಿನಕ್ಕೆ ಬಿದಿರು ಮೊರೆಗಳ ಖರೀದಿಯು ಜೋರಾಗಿತ್ತು. ನಗರದ ಪ್ರಸಿದ್ದ ವಿದ್ಯಾಗಣಪತಿ ಮಂಡಳಿಯಿಂದ ರಥದ ಬೀದಿಯ ಗುರುನಂಜಶೆಟ್ಟರ ಛತ್ರದ ಮುಂಭಾಗದಲ್ಲಿ ಶ್ರೀ ಸಿಂಹರೂಢ ವೀರ ಗಣಪತಿಯನ್ನು ಮಧ್ಯಾಹ್ನ ೧೨.೨೦ರಿಂದ ೧.೨೦ಕ್ಕೆ ಧಾರ್ಮಿಕ ಪೂಜಾ ಕೈಂಕಾರ್ಯಗಳಿಂದ ನೆರವೇರಿಸಲಾಗುವುದು, ಇದಕ್ಕಾಗಿ ವಿದ್ಯಾಗಣಪತಿ ಮಂಡಳಿಯಿಂದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರಾವತಿಯಲ್ಲಿ ಗೌರಿ ಹಬ್ಬಕ್ಕೆ ಖರೀದಿ ಜೋರು
ಶಿಕ್ಷಕರಿಂದ ಶಿಕ್ಷಣದ ಜತೆ ಸಂಸ್ಕಾರ ಕಲಿಕೆ: ಪಡಗೂರು ಶ್ರೀ