ಶಾರ್ಟ್‌ ಸರ್ಕ್ಯೂಟ್‌ ಕಾಲೇಜು ದಾಖಲಾತಿಗಳು ಭಸ್ಮ

KannadaprabhaNewsNetwork |  
Published : May 17, 2026, 02:45 AM IST
ಕಲಾದಗಿ: ಶ್ರೀ ಗುರುಲಿಂಗೇಶ್ವರ ಸ್ವತಂತ್ರ ಪದವಿಪೂವ್ ಕಾಲೇಜಿನಲ್ಲಿ ಬೆಂಕಿ ಅವಘಡಕ್ಕೆ ಸುಟ್ಟು ಹಾನಿಯಾಗಿರುವುದು. | Kannada Prabha

ಸಾರಾಂಶ

ಕಲಾದಗಿ ಗ್ರಾಮದಲ್ಲಿನ ಶ್ರೀ ಗುರುಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಬೆಳಗ್ಗೆ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‍ನಿಂದ ಅಗ್ನಿ ಅವಘಡ ಸಂಭವಿಸಿ ಕಾಲೇಜು ದಾಖಲಾತಿ, ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.

ಕನ್ನಡಪ್ರಭ ವಾರ್ತೆ ಕಲಾದಗಿ

ಗ್ರಾಮದಲ್ಲಿನ ಶ್ರೀ ಗುರುಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಬೆಳಗ್ಗೆ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‍ನಿಂದ ಅಗ್ನಿ ಅವಘಡ ಸಂಭವಿಸಿ ಕಾಲೇಜು ದಾಖಲಾತಿ, ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.ಶ್ರೀ ಗುರುಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ಕೊಠಡಿ ಹಾಗೂ ಉಪನ್ಯಾಸಕರ ಕೊಠಡಿಗೆ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌ ನಿಂದ ಬೆಂಕಿ ಹೊತ್ತಿ ಬೆಂಕಿಯ ಕೆನ್ನಾಲಿಗೆಗೆ ಕಾಲೇಜಿನ ಅಮುಲ್ಯ ದಾಖಲಾತಿಗಳು ಸೇರಿ ಪಠ್ಯ ಪುಸ್ತಕಗಳು, ಪೀಠೋಪಕರಣಗಳು, ಎಲೆಕ್ರ್ಟಾನಿಕ್ಸ್‌ ವಸ್ತುಗಳು ಹಾಗೂ ಅಲ್ಯುಮಿನಿಯಂ ಬಾಗಿಲುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ವಿಷಯ ತಿಳಿದ ಕಾಲೇಜಿನ ಸಿಬ್ಬಂದಿಯೊಬ್ಬರು ಅಗ್ನಿ ಶಾಮಕ ಠಾಣೆಗೆ ತಿಳಿಸಿದ್ದು ಸ್ಥಳಕ್ಕಾಗಿಮಿಸಿ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿಯ ತೀವ್ರತೆಗೆ ಕೊಠಡಿಯ ಗೋಡೆಗಳು ಬಿರುಕು ಬಿಟ್ಟಂತಾಗಿದ್ದು, ಮೇಲ್ಪದರ ಉಬ್ಬಿ ಶಿಥಿಲಾವಸ್ಥೆಗೆ ತಲುಪಿದೆ. ಶಾಲೆಗೆ ರಜೆ ಇರುವುದರಿಂದ ಭಾರೀ ಅವಘಡ ತಪ್ಪಿದೆ. ಈ ಕುರಿತು ಕಲಾದಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ಸಿಗರಂತೆ ಮೋದಿ ಚಿನ್ನದ ತುಲಾಭಾರ ಮಾಡಿಸಿಕೊಂಡಿಲ್ಲ
ಐತಿಹಾಸಿಕ ಮಹಾಲಕ್ಷ್ಮೀದೇವಿ ಜಾತ್ರೆ ಯಶಸ್ಸಿಗೆ ಸಿದ್ಧತೆ