ಸುರಪುರದಲ್ಲಿ ಶ್ರದ್ಧಾಭಕ್ತಿ ಯಾಜ್ಞವಲ್ಕ್ಯ ಜಯಂತ್ಯುತ್ಸವ

KannadaprabhaNewsNetwork | Published : Jun 18, 2024 12:57 AM

ಸಾರಾಂಶ

ಸುರಪುರದಲ್ಲಿ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಂಘ ಹಾಗೂ ಕಾತ್ಯಾಯನಿ ಮಹಿಳಾ ಭಜನಾ ಮಂಡಳಿಯವರ ಭಜನೆಯೊಂದಿಗೆ ಯಾಜ್ಞವಲ್ಕ್ಯ ಗುರುಗಳ ಭಾವಚಿತ್ರದ ಶೋಭಾಯಾತ್ರೆ ನಡೆಯಿತು.

ಕನ್ನಡಪ್ರಭ ವಾರ್ತೆ ಸುರಪುರ

ನಗರದ ಮುಜುಂದಾರ ಗಲ್ಲಿಯ ಮಧ್ವ ಮಂಟಪದಲ್ಲಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯರ ಜಯಂತ್ಯುತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಂಘ ಹಾಗೂ ಕಾತ್ಯಾಯನಿ ಮಹಿಳಾ ಭಜನಾ ಮಂಡಳಿಯವರ ಭಜನೆಯೊಂದಿಗೆ ಯಾಜ್ಞವಲ್ಕ್ಯ ಗುರುಗಳ ಭಾವಚಿತ್ರದ ಶೋಭಾಯಾತ್ರೆ ಮೆರವಣಿಗೆ ನಗರದ ಪ್ರಮುಖ ರಾಜಬೀದಿಗಳಲ್ಲಿ ಜರುಗಿತು. ಶ್ರೀ ಮಧ್ವ ಮಂಟಪದಲ್ಲಿ ಶ್ರೀ ಯಾಜ್ಞವಲ್ಕ್ಯರ ಭಾವಚಿತ್ರಕ್ಕೆ ಮಹಾಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭೀಮಸೇನಾಚಾರ್ಯ ಜೋಷಿ ಮಂಗಳೂರು, ಯಾಜ್ಞವಲ್ಕ್ಯರು ವಿದ್ವಾಂಸರು, ವಾಗ್ಮಿಗಳು, ಅನೇಕ ಮಂತ್ರಗಳನ್ನು ಬರೆದರು. ಅಪಾರ ಜ್ಞಾನವನ್ನು ಹೊಂದಿದ್ದರು. ಭಗವಾನ ಸೂರ್ಯದೇವನಿಂದ ಆಶೀರ್ವಾದ ಪಡೆದು ಯಜುರ್ವೇದದ ಮಂತ್ರಗಳ ಜ್ಞಾನವನ್ನು ಪಡೆದ ಮಹನೀಯರು ಆಗಿದ್ದಾರೆ. ಯಾಜ್ಞವಲ್ಕ್ಯರನ್ನು ಬ್ರಹ್ಮದೇವನ ಅವತಾರವೆಂಬುದಾಗಿ ಪರಿಗಣಿಸಲಾಗಿದೆ. ಹೀಗಾಗಿ ಅವರನ್ನು ಬ್ರಹ್ಮಋಷಿ ಎನ್ನುತ್ತಾರೆ ಎಂದರು.

ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಂಡಳಿ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ಪ್ರಮುಖರಾದ ಕೃಷ್ಣಾಚಾರ್ಯ ದೇವರು, ರಾಘವೇಂದ್ರಾಚಾರ್ಯ ಪುರೋಹಿತ, ಪ್ರಾಣೇಶರಾವ ಕುಲಕರ್ಣಿ, ಮಲ್ಲಾರಾವ ಸಿಂದಗೇರಿ, ಲಕ್ಷ್ಮೀಕಾಂತರಾವ ಅಮ್ಮಾಪುರ, ಶ್ರೀನಿವಾಸ ದೇವಡಿ, ಬಲಭೀಮರಾವ ಶೆಳ್ಳಗಿ, ಗುರುನಾಥರಾವ ಹಂದ್ರಾಳ, ಗುಂಡುರಾವ ಅರಳಹಳ್ಳಿ, ಮಲ್ಲಾರಾವ ದೇವತ್ಕಲ್, ಚಂದ್ರಕಾಂತ ನಾಡಗೌಡ, ವೆಂಕಟೇಶ ಕುರಿಹಾಳ, ಗೋವಿಂದಾಚಾರ್ಯ ದೇವರು, ರಮೇಶ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಪ್ರವೀಣ ಕುಲಕರ್ಣಿ, ವೆಂಕಟೇಶ ರಾಯನಪಾಳ್ಯಾ, ರಾಘವೇಂದ್ರರಾವ ಮುನಮುಟಗಿ, ದತ್ತುರಾವ ಏವೂರ, ಪ್ರಲ್ಹಾದ ದೀಕ್ಷಿತ, ಮಾಧವಾಚಾರ್ಯ ದೇವಾಪುರ ಹಾಗೂ ಕಾತ್ಯಾಯನಿ ಮಹಿಳಾ ಭಜನಾ ಮಂಡಳಿ ಸದಸ್ಯರು ಇದ್ದರು.

ಸನ್ಮಾನ: ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿ ಯಾಜ್ಞವಲ್ಕ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.

Share this article