ಕನ್ನಡಪ್ರಭ ವಾರ್ತೆ ಅರಸೀಕೆರೆ
ಸಭಾಂಗಣದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀಗಳು, ಆಧುನಿಕ ಕಾಲದಲ್ಲಿ ಹಣದ ವ್ಯಾಮೋಹದಿಂದ ಮನುಷ್ಯನು ಮನಃಶಾಂತಿಯನ್ನೇ ಕಳೆದುಕೊಂಡಿದ್ದಾನೆ. ಇಂಥ ಸಮಯದಲ್ಲಿ ಪುರಾಣ ಪ್ರವಚನಗಳು ಆಧ್ಯಾತ್ಮಿಕ ಶಾಂತಿಗೆ ಮಾರ್ಗದರ್ಶಿಯಾಗುತ್ತವೆ ಎಂದು ಹೇಳಿದರು.ಕ್ಷೇತ್ರದ ವೈಶಿಷ್ಟ್ಯವನ್ನೂ ವಿವರಿಸಿ, ಶಿವಲಿಂಗ ಅಜ್ಜಯ್ಯ ಮತ್ತು ನೀಲಮ್ಮ ಅಜ್ಜಯ್ಯ ದೈವಪುರುಷರು ಈ ಭೂಮಿಯಲ್ಲಿ ಅವತರಿಸಿ ಭಕ್ತರ ಉದ್ದಾರ ಕಾರ್ಯ ಮಾಡಿದ್ದು, ಈ ಕ್ಷೇತ್ರ ತಪೋಶಕ್ತಿಯ ಬಂಡಾರವಾಗಿದೆ ಎಂದು ಹೇಳಿದರು. ಕೋಡಿಮಠವು ಜಾತ್ಯತೀತ ಧರ್ಮಪರ ಮಠವಾಗಿದ್ದು, ಎಲ್ಲಾ ಧರ್ಮ-ಜಾತಿಗಳಿಗೆ ಸಮಾನ ಗೌರವ ನೀಡುತ್ತದೆ ಎಂಬುದನ್ನೂ ಉಲ್ಲೇಖಿಸಿದರು. ಇಂಥ ಧಾರ್ಮಿಕ ಕಾರ್ಯಕ್ರಮಗಳು ಶಾಂತಿ, ನೆಮ್ಮದಿ ಮತ್ತು ಭಕ್ತಿಭಾವನೆ ಬೆಳೆಸುವಲ್ಲಿ ನೆರವಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಡಗುರು ಹಿರೇಮಠ ಬೆಳಗಾವಿಯ ಶ್ರೀ ಮೃತ್ಯುಂಜಯ ಸ್ವಾಮೀಜಿಯವರು ಪುರಾಣ ಪಠಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಉತಾರಾಧಿಕಾರಿ ಚೇತನ್ ಮುರಿದೇವರು, ಶಿವಾನಿ, ಗುರು ಮಲ್ಲಯ್ಯ, ಮಾಡಾಳು ಶಿವಲಿಂಗಪ್ಪ, ಎಂ.ಡಿ ಸೋಮಶೇಖರ್, ಲೋಕೇಶ್, ಕಟ್ನೆ ತಿಮ್ಮಯ್ಯ, ಕೋಡಿಮಠದ ಏಜೆಂಟ್ ಸಿ. ಮಹದೇವಪ್ಪ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.