ಶ್ರೀ ಕ್ಷೇತ್ರ ಶಂಕರಪುರ: ಮುಖ್ಯಪ್ರಾಣ ಏಕಶಿಲಾ ಮೂರ್ತಿ ಪ್ರತಿಕೃತಿ ಅನಾವರಣ

KannadaprabhaNewsNetwork |  
Published : Jul 09, 2025, 12:19 AM IST
08ಮುಖ್ಯಪ್ರಾಣ | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಯಿ ಮಠದ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನದ ವತಿಯಿಂದ ಏಪ್ರಿಲ್‌ನಲ್ಲಿ ನಡೆಯುವ 18 ಅಡಿ ಎತ್ತರದ ಶ್ರೀ ಮುಖ್ಯಪ್ರಾಣ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಮೂರ್ತಿಯ ಪ್ರತಿರೂಪದ ಅನಾವರಣ ಕಾರ್ಯಕ್ರಮ ಕ್ಷೇತ್ರದಲ್ಲಿ ಮಂಗಳವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಯಿ ಮಠದ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನದ ವತಿಯಿಂದ ಏಪ್ರಿಲ್‌ನಲ್ಲಿ ನಡೆಯುವ 18 ಅಡಿ ಎತ್ತರದ ಶ್ರೀ ಮುಖ್ಯಪ್ರಾಣ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಮೂರ್ತಿಯ ಪ್ರತಿರೂಪದ ಅನಾವರಣ ಕಾರ್ಯಕ್ರಮ ಕ್ಷೇತ್ರದಲ್ಲಿ ಮಂಗಳವಾರ ನಡೆಯಿತು.ಶಿಲಾಮೂರ್ತಿಯ ಪ್ರತಿರೂಪವನ್ನು ಶ್ರೀ ಕ್ಷೇತ್ರದ ಶ್ರೀ ಸಾಯಿ ಈಶ್ವರ್ ಗುರೂಜಿ ಪರಮ ಗುರುಗಳಾದ ಪ್ರವೀಣ್ ರಾಜ್ ಮಚೇಂದ್ರನಾಥ ಬಾಬಾ ಅನಾವರಣಗೊಳಿಸಿ ಆಶೀರ್ವಾದ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗುರೂಜಿ, ಏ.2 ರಂದು ಹನುಮಾನ್ ಜಯಂತಿಯ ಪರ್ವಕಾಲದಲ್ಲಿ 18 ಅಡಿ ಎತ್ತರದ ಶ್ರೀ ಮುಖ್ಯಪ್ರಾಣ ದೇವರ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆಗೊಳಲಿದೆ, ಇದರ ಪೂರ್ವಭಾವಿಯಾಗಿ ಶಿಲಾಮೂರ್ತಿಯನ್ನು ಅಂಜನಾದ್ರಿಯಲ್ಲಿ ಪೂಜಿಸಿ ಹನುಮಜ್ಯೋತಿ ಮೂಲಕ ಕ್ಷೇತ್ರಕ್ಕೆ ತರಲಾಗುವುದು ಈ ಎಲ್ಲಾ ಕಾರ್ಯಕ್ರಮಗಳಿಗೆ ಕ್ಷೇತ್ರದ ಭಕ್ತರು ಸಹಕರಿಸಬೇಕು ಎಂದು ಕೋರಿದರು.

ಜು. 10ರಂದು ಸಾಯಿ ದರ್ಬಾರ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈ ಸಮಾರಂಭದಲ್ಲಿ ಈಶ್ವರ ಅನುಗ್ರಹ ಪ್ರಶಸ್ತಿ ನೀಡಿ ಸಾಧಕರನ್ನು ಗೌರವಿಸಲಾಗುವುದು ಎಂದರು.

ಕ್ಷೇತ್ರದ ಟ್ರಸ್ಟಿ ಗೀತಾಂಜಲಿ ಸುವರ್ಣ, ವೀಣಾ ಎಸ್. ಶೆಟ್ಟಿ, ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿಗಳಾದ ಅಭಿರಾಜ್ ಸುವರ್ಣ, ರಾಜೇಶ್ ಇನ್ನoಜೆ, ರಾಮಪ್ಪ ಪೂಜಾರಿ, ಸಂತೆಕಟ್ಟೆ, ಕಿರಣ್ ಜೋಗಿ, ಜಯರಾಮ ಶೆಟ್ಟಿಗಾರ್, ವಿನೋದ್ ಕುಮಾರ್, ಸುರೇಶ್ ಪೂಜಾರಿ, ರಾಘವೇಂದ್ರ ಅಮೀನ್, ಶ್ರೀಧರ ಅಮೀನ್, ವಿಜಯ ಕುಂದರ್, ಸತೀಶ ದೇವಾಡಿಗ, ಅಖಿಲೇಶ್, ದಿನೇಶ ಶೆಟ್ಟಿ ಮತ್ತು ಕ್ಷೇತ್ರದ ಭಕ್ತರು ಮುಂತಾದವರು ಇದ್ದರು.

ಶಿಲ್ಪಿ ಗಣೇಶ್ ಮತ್ತು ಶಿಲಾಮೂರ್ತಿ ಮಾದರಿ ತಯಾರಿಸಿದ ಕೇಶವ ಆಚಾರ್ಯ ಅವರನ್ನು ಗೌರವಿಸಲಾಯಿತು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ನಂತರ ಅಖಂಡ ಶ್ರೀ ಸಾಯಿ ಸಚರಿತ್ರೆ ಪಾರಾಯಣ ನಡೆಯಿತು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು