ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಅದ್ಧೂರಿ ಜಾತ್ರೆ

KannadaprabhaNewsNetwork |  
Published : Mar 25, 2024, 12:54 AM IST
6. ಸುಗ್ಗನಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆಯ ಸಂಭ್ರಮ | Kannada Prabha

ಸಾರಾಂಶ

ಕುದೂರು: ಮಾಗಡಿ ತಾಲೂಕು ಕುದೂರು ಹೋಬಳಿಯ ಪುರಾಣಪ್ರಸಿದ್ದ ಸುಗ್ಗನಹಳ್ಳಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಜನರು ಸಮ್ಮುಖದಲ್ಲಿ ಸುಗ್ಗನಹಳ್ಳಿ ಜಾತ್ರೆ ಸಂಪನ್ನವಾಯಿತು.

ಕುದೂರು: ಮಾಗಡಿ ತಾಲೂಕು ಕುದೂರು ಹೋಬಳಿಯ ಪುರಾಣಪ್ರಸಿದ್ದ ಸುಗ್ಗನಹಳ್ಳಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಜನರು ಸಮ್ಮುಖದಲ್ಲಿ ಸುಗ್ಗನಹಳ್ಳಿ ಜಾತ್ರೆ ಸಂಪನ್ನವಾಯಿತು.

ರಥೋತ್ಸವ ನಡೆವ ಸಂದರ್ಭಕ್ಕೆ ಸರಿಯಾಗಿ ಗುರುಡ ಪಕ್ಷಿ ಬಂದು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದ ನಂತರವೇ ರಥವನ್ನು ಮುಂದೆ ಎಳೆಯುವ ಪರಂಪರೆ ಮೊದಲಿನಿಂದಲೂ ರೂಢಿಯಾಗಿದೆ. ಇದೊಂದು ವಿಸ್ಮಯವಾಗಿ ಇಂದಿಗೂ ಕಂಡು ಬರುತ್ತಿದೆ.

ಜೈಶ್ರೀರಾಮ್-ಗೋವಿಂದ ಗೋವಿಂದ:

ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಮಾಜಿ ಶಾಸಕ ಎ.ಮಂಜು ಕಡೆಯ ಕಾರ್ಯಕರ್ತರ ಘೋಷಣೆಗಳು ಜಾತ್ರೆಯ ಜನರಿಗೆ ಮನರಂಜನೆ ನೀಡಿದವು. ಬಿಜೆಪಿ ಮತ್ತು ಜೆಡಿಎಸ್ ಕಾರ್‍ಯಕರ್ತರಿಂದ ಜೈಶ್ರೀರಾಮ್ ಎಂದು ಘೋಷಣೆಯಾದರೆ ಕಾಂಗ್ರೆಸ್ ಕಾರ್ಯಕರ್ತರಿಂದ ಗೋವಿಂದ ಗೋವಿಂದ ಎಂದು ಕೂಗುತ್ತಿದ್ದರು. ಪರಸ್ಪರ ನಗುನಗುತ್ತಲೇ ಒಬ್ಬರನ್ನೊಬ್ಬರು ಘೋಷಣೆಗಳ ಮೂಲಕ ಮೂರು ಪಕ್ಷದವರು ಪರಸ್ಪರ ನಗುತ್ತಾ ಜನರಿಗೆ ಮನರಂಜನೆ ನೀಡಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ಉತ್ಸವಮೂರ್ತಿಯ ಪಲ್ಲಕ್ಕಿಗೆ ಹೆಗಲು ಕೊಟ್ಟು ಹರಕೆ ತೀರಿಸಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಅವರನ್ನು ಜನರು ಹೆಗಲ ಮೇಲೆ ಹೊತ್ತು ಕುಣಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಜಾತ್ರೆಗಳು ನಮ್ಮ ಜನಪದ ಸಂಸ್ಕೃತಿಯ ಪ್ರತಿಬಿಂಬ. ಎಷ್ಟೇ ಆಧುನಿಕ ಜಗತ್ತಿನಲ್ಲಿದ್ದರೂ ಸಂತೆ ಮತ್ತು ಜಾತ್ರೆಗಳು ತಮ್ಮ ಸ್ವರೂಪವನ್ನು ಬದಲಿಸಿಕೊಂಡಿಲ್ಲ. ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಮಂಜುನಾಥ್ ಮಾತನಾಡಿ, ಸೌಹಾರ್ದಯುತ ಬದುಕನ್ನು ರೂಢಿಸಿಕೊಳ್ಳಲೆಂದೇ ಇಂತಹ ಜಾತ್ರೆಗಳನ್ನು ನಮ್ಮ ಹಿರಿಯರು ಇದನ್ನು ಸಂಪ್ರದಾಯವಾಗಿಸಿದರು. ಒತ್ತಡಗಳಿಲ್ಲದೇ ಸಂತೋಷವಾಗಿ ಬದುಕುವುದೇ ನಿಜವಾದ ಜೀವನ ಕ್ರಮ ಎನ್ನುವುದನ್ನು ಜಾತ್ರೆಗಳ ಸಂಭ್ರಮದ ವಾತಾವರಣ ನಮಗೆ ಪಾಠ ಕಲಿಸುತ್ತವೆ ಎಂದು ಹೇಳಿದರು.

ಮಾಜಿ ಶಾಸಕ ಎ.ಮಂಜು ಮಾತನಾಡಿ, ಇಂದು ರಾಜ್ಯದ 108 ಕಡೆಗಳಲ್ಲಿ ಏಕಕಾಲಕ್ಕೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ನಡೆಯುವುದು ವಿಶೇಷ. ಇಲ್ಲಿನ ಜಾತ್ರೆಗೆ ಸುತ್ತಲಿನ ಹದಿನಾರು ಹಳ್ಳಿಯ ಜನರು ಆಗಮಿಸಿ ಸಂಭ್ರಮಿಸುತ್ತಾರೆ.

ಬಿಸಿಲ ಬೇಗೆಯ ಕಾರಣ ದೇವಾಲದ ಸುತ್ತ ಅರವಂಟಿಕೆಗಳು, ಮಜ್ಜಿಗೆ, ಹೆಸರುಬೇಳೆ, ಶರಬತ್ತುಗಳನ್ನು ಜನರಿಗೆ ಭಕ್ತರು ಹಂಚುತ್ತಿದ್ದರು.

ಭಕ್ತ ಪ್ರಹ್ಲಾದ ಓಡಾಡಿದ ಜಾಗವಿದು. ಆತನೇ ಕಂಬದಲ್ಲಿ ನೆಲೆಯಾಗಿರುವ ಶ್ರೀ ಲಕ್ಷ್ಷೀನರಸಿಂಹಸ್ವಾಮಿ ದೇವಾಲಯವನ್ನು ಕಟ್ಟಿಸಿದ್ದು ಎಂದು ಪ್ರತೀತಿ. ಶುಕಮುನಿಗಳು ಮತ್ತು ಇತರೆ ಐದು ಜನರು ತಪ ಮಾಡಿದ ಸ್ಥಳದಲ್ಲಿ ಯಲಚಿ ಮರದದಲ್ಲಿ ಒಂದು ಗಿಡದಲ್ಲಿ ಐದು ಬುಡಗಳಾಗಿ ನಿಂತಿರುವುದು ಇಂದಿಗೂ ಸಾಕ್ಷಿ ಕಾಣುತ್ತದೆ. ಇಂತಹ ಐತಿಹಾಸಿಕ ಹಿನ್ನಲೆಯ ಜಾತ್ರೆಗೆ ತಮಿಳುನಾಡು, ಆಂಧ್ರಪ್ರದೇಶದಿಂದಲೂ ಭಕ್ತ ಸಮೂಹ ಇಲ್ಲಿಗೆ ಆಗಮಿಸುತ್ತಾರೆ.

24ಕೆಆರ್ ಎಂಎನ್ 6.7.ಜೆಪಿಜಿ

6. ಸುಗ್ಗನಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆಯ ಸಂಭ್ರಮ.

7.ಉತ್ಸವ ಮೂರ್ತಿಯ ಪಲ್ಲಕ್ಕಿಗೆ ಹೆಗಲು ಕೊಟ್ಟು ಹರಕೆ ತೀರಿಸಿದ ಎಚ್.ಸಿ.ಬಾಲಕೃಷ್ಣ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ