ಶ್ರೀ ಶಂಕರಾಚಾರ್ಯರ ಜಯಂತಿ, ಕೊಪ್ಪಳ ಜಿಲ್ಲಾಡಳಿತದಿಂದ ನಮನ

KannadaprabhaNewsNetwork |  
Published : May 13, 2024, 12:02 AM IST
12ಕೆಪಿಎಲ್3:ಕೊಪ್ಪಳದ ನಗರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಶಂಕರಾಚಾರ್ಯರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ  ಸಾವಿತ್ರಿ  ಬಿ ಕಡಿ ಪುಷ್ಪ ನಮನ ಸಲ್ಲಿಸಿದರು. ಗಣ್ಯರು ಹಾಗು ಅಧಿಕಾರಿ ವರ್ಗದವರಿದ್ದರು. | Kannada Prabha

ಸಾರಾಂಶ

ಶ್ರೀ ಶಂಕರಾಚಾರ್ಯ ಜಯಂತಿ ಪ್ರಯುಕ್ತ ನಗರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಶಂಕರಾಚಾರ್ಯರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಪುಷ್ಪನಮನ ಸಲ್ಲಿಸಿದರು.

ಕೊಪ್ಪಳ: ಶ್ರೀ ಶಂಕರಾಚಾರ್ಯ ಜಯಂತಿ ಪ್ರಯುಕ್ತ ನಗರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಶಂಕರಾಚಾರ್ಯರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಪುಷ್ಪನಮನ ಸಲ್ಲಿಸಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ಶಂಕರಾಚಾರ್ಯ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.

ಸಮಾಜದ ಮುಖಂಡರಾದ ರಮೇಶ ಪದಕಿ, ರವಿ ಪುರೋಹಿತ, ಸತ್ಯನಾರಾಯಣ ಕುಲಕರ್ಣಿ, ನಾಗರಾಜ ಎಲ್. ದೇಸಾಯಿ, ರಮೇಶ ದೀಕ್ಷಿತ್, ಶಿಕ್ಷಣ ಇಲಾಖೆಯ ಅಯ್ಯನಗೌಡ, ಅಬಕಾರಿ ಇಲಾಖೆಯ ಇಸ್ಮಾಯಿಲ್, ವಾರ್ತಾ ಇಲಾಖೆಯ ಎಂ. ಪಾಂಡುರಂಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಂಕರ ಮತ್ತು ಮತ್ತಣ್ಣ ಮತ್ತಿತರರಿದ್ದರು.ಅಧ್ಯಾತ್ಮ ಜ್ಯೋತಿ ಬೆಳಗಿದ ಶಂಕರಾಚಾರ್ಯರು:ಆದಿ ಗುರು ಶಂಕರಾಚಾರ್ಯರು ಸಮಾಜದಲ್ಲಿದ್ದ ಅಂಧಕಾರ ಓಡಿಸುವ ಮೂಲಕ ಅಧ್ಯಾತ್ಮದ ಜ್ಯೋತಿ ಬೆಳಗಿದ್ದಾರೆ. ಭರತ ಭೂಮಿಯನ್ನು ಜ್ಞಾನದ ಮೂಲಕ ಪ್ರಕಾಶಿಸುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಪ್ರಾಚಾರ್ಯ ಡಾ. ಎಸ್.ವಿ. ಡಾಣಿ ಹೇಳಿದರು.

ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಆದಿ ಗುರು ಶಂಕರಾಚಾರ್ಯರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಶಂಕರಾಚಾರ್ಯರು ಭಾರತದಲ್ಲಿ ಹಿಂದೂ ಧರ್ಮ ಜಾಗ್ರತಗೊಳಿಸುವ ಕೆಲಸ ಮಾಡಿದ್ದಾರೆ. ಅವರು ವಿವಿಧ ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ನರಳುತ್ತಿದ್ದ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದರು.ಪ್ರಾಧ್ಯಾಪಕರಾದ ಶಂಕರ, ಮಹಾಂತೇಶ ಗವಾರಿ, ಕಚೇರಿಯ ಸಿಬ್ಬಂದಿ ಸುರೇಶ ಹಾಗೂ ವಿದ್ಯಾರ್ಥಿಗಳು ಇದ್ದರು.

ಕುಕನೂರಲ್ಲಿ ಶಂಕರಾಚಾರ್ಯ ಜಯಂತಿ:

ಕುಕನೂರು ತಾಲೂಕಿನ ಮಂಡಲಗೇರಿ ಗ್ರಾಪಂನಲ್ಲಿ ಶ್ರೀ ಶಂಕರಚಾರ್ಯರ ಜಯಂತಿ ಆಚರಿಸಲಾಯಿತು. ಗ್ರಾಪಂ ಕಾರ್ಯದರ್ಶಿ ಸರಿತಾ ರಾಥೋಡ್, ಸಿಬ್ಬಂದಿ ರೇವಣಪ್ಪ, ಅಂಗವಿಕಲರ ಪುನರ್ವಸತಿ ಕಾರ್ಯಕರ್ತ ಶಂಭುಲಿಂಗಯ್ಯ ಹಿರೇಮಠ, ಆಶಾ ಕಾರ್ಯಕರ್ತೆ ಲಕ್ಷ್ಮೀ ಗಾಣಿಗೇರ್, ಶಿಶು ಸಖಿಯರಾದ ಶಾಂತಾ ದಳವಾಯಿ, ಅನ್ನಪೂರ್ಣಾ ಹೂಗಾರ್, ಹನುಮಂತಮ್ಮ ಹೊಸಮನಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ