ಮನುಷ್ಯನ ಬಾಳಿಗೆ ಶ್ರೀ ಶಾರದದೇವಿ ಜ್ಞಾನ ಬೋಧಿಸುವ ದೇವತೆ

KannadaprabhaNewsNetwork |  
Published : Dec 13, 2025, 01:15 AM IST
ಚಿಕ್ಕಮಗಳೂರು ನಗರದ ಹೊರವಲಯದ ಜೀವನ್ ಸಂಧ್ಯಾ ವೃದ್ದಾಶ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಹಾಗೂ ನಗರ ಘಟಕದಿಂದ ಆಯೋಜಿಸಿದ್ಧ ಶ್ರೀ ಶಾರದ ದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ|| ಜೆ.ಪಿ.ಕೃಷ್ಣೇಗೌಡ ಶ್ರೀ ಶಾರದ ದೇವಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು | Kannada Prabha

ಸಾರಾಂಶ

ಚಿಕ್ಕಮಗಳೂರುಮನುಷ್ಯನ ಬಾಳಿಗೆ ಶ್ರೀ ಶಾರದದೇವಿ ಜ್ಞಾನವನ್ನು ಬೋಧಿಸುವ ದೇವತೆ. ಪ್ರತಿನಿತ್ಯ ಆ ದೇವಿ ಆರಾಧಿಸುವ ಗುಣ ನಾವೆಲ್ಲರೂ ಬೆಳೆಸಿಕೊಳ್ಳಬೇಕು. ವಿದ್ಯೆ ಮತ್ತು ಬುದ್ದಿ ಯನ್ನು ಗಳಿಸಿದರೆ ಶ್ರೀಲಕ್ಷ್ಮೀ ಆಶೀರ್ವಾದ ತಾನಾಗಿಯೇ ಲಭಿಸಲಿದೆ ಎಂದು ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮನುಷ್ಯನ ಬಾಳಿಗೆ ಶ್ರೀ ಶಾರದದೇವಿ ಜ್ಞಾನವನ್ನು ಬೋಧಿಸುವ ದೇವತೆ. ಪ್ರತಿನಿತ್ಯ ಆ ದೇವಿ ಆರಾಧಿಸುವ ಗುಣ ನಾವೆಲ್ಲರೂ ಬೆಳೆಸಿಕೊಳ್ಳಬೇಕು. ವಿದ್ಯೆ ಮತ್ತು ಬುದ್ದಿ ಯನ್ನು ಗಳಿಸಿದರೆ ಶ್ರೀಲಕ್ಷ್ಮೀ ಆಶೀರ್ವಾದ ತಾನಾಗಿಯೇ ಲಭಿಸಲಿದೆ ಎಂದು ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಹೇಳಿದರು.

ನಗರದ ಹೊರವಲಯದ ಜೀವನ್ ಸಂಧ್ಯಾ ವೃದ್ದಾಶ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಹಾಗೂ ನಗರ ಘಟಕ ದಿಂದ ಆಯೋಜಿಸಿದ್ಧ ಶ್ರೀ ಶಾರದ ದೇವಿ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಕನ್ನಡದ ಸೇವೆ ಕೂಡಾ ಒಂದು ಶಾರದಾ ದೇವಿ ದಿವ್ಯ ಕಾಯಕ. ಇಂಥ ಭವ್ಯ ನಾಡಿನಲ್ಲಿ ಜನಿಸಿರುವ ಕನ್ನಡಿಗರು ಮತ್ತೊಮ್ಮೆ ಇದೇ ನೆಲದಲ್ಲಿ ಜನಿಸಬೇಕೆಂಬ ಆಶಯದೊಂದಿಗೆ ಶ್ರೀ ದೇವಿ ಆರ್ಶೀವಾದ ಪಡೆದು ನಾಡು ಕಟ್ಟು ಕೆಲಸದಲ್ಲಿ ನಿರತರಾಗಬೇಕು ಎಂದರು.ಪ್ರಸ್ತುತ ಹಣವನ್ನು ಎಲ್ಲರೂ ಸಂಪಾದಿಸಬಹುದು. ಆದರೆ ಶ್ರೀ ಶಾರದಾದೇವಿ ಕೃಪೆಗೆ ಪಾತ್ರರಾಗಲು ಕಠಿಣ ಪರಿಶ್ರಮದ ಅಗತ್ಯವಿದೆ. ಆ ನಿಟ್ಟಿನಲ್ಲಿ ಭವಿಷ್ಯದ ಯುವಜನತೆ ವೃತ್ತಿ ಅಥವಾ ಬದು ಕನ್ನು ಕೇವಲ ಹಣಕ್ಕಾಗಿ ಸೀಮಿತಗೊಳಿಸದೇ, ಜ್ಞಾನ ಸಂಪಾದಿಸುವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ವೃದ್ದಾಶ್ರಮ ಭಗವಂತ ನೆಲೆಸಿರುವ ದೇವಾಲಯ. ಈ ಸ್ಥಳದಲ್ಲಿ ವೃದ್ಧರಿಗೆ ಸದಾಕಾಲ ಶಾಂತಿ, ನೆಮ್ಮದಿ ಸಿಗಲಿದೆ. ಆದರೆ ಕೆಲವು ಉಳ್ಳವರು, ಸರ್ಕಾರಿ ಅಧಿಕಾರಿಗಳೇ ಪಾಲಕರನ್ನು ನೋಡಿಕೊಳ್ಳಲಾಗದೇ ವೃದ್ಧಾ ಶ್ರಮಕ್ಕೆ ಕಳುಹಿಸುವ ಪರಿ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಇದು ಭಗವಂತನು ಕ್ಷಮಿಸಲಾರರು ಎಂದು ಹೇಳಿದರು. ಸಾಂಸ್ಕೃತಿಕ ಚಿಂತಕ ದೀಪಕ್ ದೊಡ್ಡಯ್ಯ ಮಾತನಾಡಿ ಮಕ್ಕಳ ಬೆಳವಣಿಗೆಗೆ ಅನೇಕ ವರ್ಷಗಳ ಕಾಲ ಕಷ್ಟಪಡುವ ಪಾಲಕರನ್ನು ಕೊನೆಗಳಿಗೆಯಲ್ಲಿ ವೃದ್ದಾಶ್ರಮಕ್ಕೆ ಸೇರಿಸುವುದು ಸರಿಯಲ್ಲ. ಈಚೆಗೆ ನ್ಯಾಯಾ ಧೀಶರೊಬ್ಬರು ತಮ್ಮ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದು, ಬಳಿಕ ನ್ಯಾಯಪೀಠದಲ್ಲಿ ಕುಳಿತು ಕಕ್ಷಿದಾರರಿಗೆ ನ್ಯಾಯ ಒದಗಿಸಬಲ್ಲರೇ ಎಂದು ಪ್ರಶ್ನಿಸಿದರು.ಸಾಹಿತ್ಯ, ಸಂಗೀತಕ್ಕೆ ಎಲ್ಲಾ ಹೃದಯದ ನೋವು ಮರೆಸುವ ಶಕ್ತಿಯಿದೆ. ಆ ನಿಟ್ಟಿನಲ್ಲಿ ಹಿರಿಯರಿಗೆ ಖ್ಯಾತ ಕಲಾವಿದರಿಂದ ಸಂಗೀತಮಯಗೊಳಿಸಿ ರಂಜಿಸುತ್ತಿರುವುದು ತೃಪ್ತಿ ತಂದಿದೆ. ಜೀವನದಲ್ಲಿ ಹಣಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವುದಿಲ್ಲ, ಬದುಕನ್ನು ಸಮಾಜದ ಒಳ್ಳೆಯ ಕಾರ್ಯಕ್ಕೆ ಮುಡಿಪಿಡುವುದು ಸಾರ್ಥಕ ವಾಗಲಿದೆ ಎಂದರು.ಕಸಾಪ ಗೌರವಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಶ್ರೀ ಶಾರದೆ ಆರಾಧನೆ ಮನಸ್ಸ ನ್ನು ಉಲ್ಲಾಸಗೊಳಿಸುವ ಜೊತೆಗೆ ಯುವಕರಿಗೆ ಉಜ್ವಲ ಭವಿಷ್ಯ ಕರುಣಿಸುವ ಸಾಮರ್ಥ್ಯವಿದೆ. ಶ್ರೀಮಂತಿಕೆ ಕೆಲ ಕಾಲ ಉಳಿಯಬಹುದು. ಜ್ಞಾನ ಎಂಬುದು ಕೊನೆತನಕ ಜೊತೆಗಿರಲಿದೆ ಎಂಬುದು ಮರೆಯದಿರಿ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ನಗರಾಧ್ಯಕ್ಷ ಸಚಿನ್‌ಸಿಂಗ್ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ದಯಾನಂದ್, ಆಶಾಕಿರಣ ಟ್ರಸ್ಟ್ ಅಧ್ಯಕ್ಷೆ ಡಾ.ಎ.ಹರ್ಷ, ಹಿರಿಯ ರಂಗಕರ್ಮಿ ಬಿಸಲೇಹಳ್ಳಿ ಸೋಮಶೇಖರ್, ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ, ಕಸಬಾ ಹೋ ಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ಕಿರಿಯ ಪಶು ವೈದ್ಯಕೀಯ ಪರೀವೀಕ್ಷಕಿ ಎಚ್.ಕೆ. ಸುಲೋಚನ ಉಪಸ್ಥಿತರಿದ್ದರು.ಇದೇ ವೇಳೆ ಹಿರಿಯ ಗಾಯಕ ಎ.ಎನ್.ಮೂರ್ತಿ ಮಿಮಿಕ್ರಿ, ಹಾಡುಗಳ ಮೂಲಕ ಹಿರಿಯರನ್ನು ರಂಜಿಸಿದರು. ಬಳಿಕ ಗಾಯಕರಾದ ಚಂದನ್, ವೀಣಾ ಅರವಿಂದ್, ಸಿ.ಎ.ವಿಭಾ ರಾವ್ ಗೀತೆಗಾಯನ ನಡೆಸಿ ಕೊಟ್ಟರು. ಕಸಾಪ ಜಿಲ್ಲಾ ಪ್ರಧಾನ ಮಹಿಳಾ ಘಟಕದ ಕಾರ್ಯದರ್ಶಿ ರೂಪಾನಾಯ್ಕ್, ಸದಸ್ಯೆ ಜಯಂತಿ ಶಿವಾಜಿ, ಚಂದನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ