ಸ್ತ್ರೀ-ಪುರುಷರಲ್ಲಿ ಸಮಾನತೆ ಸಾರಿದ ಶ್ರೀಮಠ

KannadaprabhaNewsNetwork | Published : Dec 23, 2023 1:46 AM

ಸಾರಾಂಶ

ರಷ್ಯಾದ ಮಹಿಳೆಗೆ ಲಿಂಗ ದೀಕ್ಷೆ ಕೊಟ್ಟು ಪಾರ್ವತಿ ಎಂಬ ನಾಮಕರಣ ಮಾಡಿ ವೇದಭ್ಯಾಸ, ರುದ್ರಪಠಣ ಕಲಿಸಿದೆ. ಅವಳಿ ಜವಳಿ ಜನಿಸಿದ ಮಗುವಿಗೆ ಗಣೇಶ ಎಂಬ ನಾಮಕರಣ ಮಾಡಲಾಗಿದೆ. ರಷಿಯನರೂ ಸಹ ಸರಾಗವಾಗಿ ರುದ್ರಪಠಣ, ಸಿದ್ಧಾಂತ ಶಿಖಾಮಾಣಿ ಪಾರಾಯಣ ಮಾಡುವ ಮೂಲಕ ಭಾರತೀಯರಿಗೆ ಅಚ್ಚರಿ ಮೂಡಿಸುತ್ತಿದ್ದಾರೆ

ಶಿಗ್ಗಾವಿ: ಪುರುಷರಿಗೆ ಮಾತ್ರ ಸೀಮಿತವಾಗಿದ್ದ ವೇದಭ್ಯಾಸವನ್ನು ತಾಯಂದಿರಿಗೂ ಧಾರೆ ಎರೆಯುವ ಮೂಲಕ ಸ್ತ್ರೀ, ಪುರುಷರು ಸಮಾನರು ಎಂಬುದನ್ನು ಶ್ರೀಮಠ ಸಾಬೀತು ಪಡಿಸಿದೆ. ಸ್ತ್ರೀಯರಿಗೆ ಯಾವುದೇ ಕಾಯಕ ನೀಡಿದರೂ ಪ್ರಮಾಣಿಕವಾಗಿ ನಿರ್ವಹಿಸಬಲ್ಲರು ಎಂಬುದಕ್ಕೆ ಈ ವೇದಭ್ಯಾಸವೇ ಸಾಕ್ಷಿಯಾಗಿದೆ ಎಂದು ಕಾಶಿಯ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಬಿಸನಳ್ಳಿ ಗ್ರಾಮದ ಜ.ಪಂ.ವೇ.ಆ.ಸಂ.ಸಂ.ಯೋಗ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಸಾಮೂಹಿಕ ಇಷ್ಠಲಿಂಗ ಮಹಾಪೂಜೆಯ ೨ನೇ ದಿನದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೇದಭ್ಯಾಸವನ್ನು ಕಾಶಿ ಪೀಠ್‌ ಆನ್‌ಲೈನ್‌ ಮೂಲಕ ಕಲೆಸುವ ವ್ಯವಸ್ಥೆ ಮಾಡಿ ಯಶಸ್ವಿಯಾಗಿದೆ. ರಷ್ಯಾದ ಮಹಿಳೆಗೆ ಲಿಂಗ ದೀಕ್ಷೆ ಕೊಟ್ಟು ಪಾರ್ವತಿ ಎಂಬ ನಾಮಕರಣ ಮಾಡಿ ವೇದಭ್ಯಾಸ, ರುದ್ರಪಠಣ ಕಲಿಸಿದೆ. ಅವಳಿ ಜವಳಿ ಜನಿಸಿದ ಮಗುವಿಗೆ ಗಣೇಶ ಎಂಬ ನಾಮಕರಣ ಮಾಡಲಾಗಿದೆ. ರಷಿಯನರೂ ಸಹ ಸರಾಗವಾಗಿ ರುದ್ರಪಠಣ, ಸಿದ್ಧಾಂತ ಶಿಖಾಮಾಣಿ ಪಾರಾಯಣ ಮಾಡುವ ಮೂಲಕ ಭಾರತೀಯರಿಗೆ ಅಚ್ಚರಿ ಮೂಡಿಸುತ್ತಿದ್ದಾರೆ ಎಂದರು.

ಗುಳೇದಗುಡ್ಡದ ಶ್ರೀ ಡಾ.ನಿಲಕಂಠ ಶಿವಾಚಾರ್ಯರು ಮಾತನಾಡಿ, ಶ್ರೀ ಕಾಶಿ ಜ. ಡಾ.ಚಂದ್ರಶೇಖರ ಶಿವಾಚಾರ್ಯರು, ಜಗದ್ಗುರುಗಳ ನಡಿಗೆ ರೈತರ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಮಾಡಿ, ಆದರಿಂದ ಬಂದ ದೇಣಿಗೆ ಹಣದಿಂದ ಬಿಸನಳ್ಳಿ ಗ್ರಾಮದಲ್ಲಿ ವೇದ ಪಾಠಶಾಲೆ ಪ್ರಾರಂಭಿಸಿದರು. ಅದು ಈಗ ದಶಮಾನೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಬಾಗಲಕೋಟೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ ಮಾತನಾಡಿ, ಕಾಶಿ ಶ್ರೀಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಮ್ಮ ಕುಟುಂಬ ನಡೆದುಕೊಂಡು ಬರುತ್ತಿದೆ. ಭಾರತೀಯ ಸನಾತನ ಪರಂಪರೆ, ಸಂಸ್ಕೃತಿ, ಸಂಸ್ಕಾರ ಬಿತ್ತಿ ಬೆಳೆಯುವ ಈ ಪಾಠಶಾಲೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ. ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ತಮ್ಮನ್ನೇ ತಾವು ಸಮರ್ಪಿಸಿಕೋಂಡ ಕಾಶಿ ಜಗದ್ಗುರುಗಳವರ ಕಾರ್ಯ ಶ್ಲಾಘನೀಯ ಎಂದರು. ಯುವ ಬ್ರಿಗೇಡ್ ಕಿರಣ ರಾಮ್ ಮಾತನಾಡಿ, ದೇಶದ ಇತಿಹಾಸದಲ್ಲಿ ಮಹಿಳೆಯರಿಲ್ಲದೇ ಯಾವ ಯುದ್ದವೂ ಪೂರ್ಣಗೊಂಡಿಲ್ಲ ಎಂಬುದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ. ಹೆಣ್ಣುಮಕ್ಕಳು ಬರಿ ಅಡುಗೆ ಮನೆಗೆ ಸೀಮಿತರಲ್ಲ ಎಂಬುದನ್ನು ಕೆಳದಿಯ ಚನ್ನಮ್ಮ, ರಾಣಿ ಅಬ್ಬಕ್ಕ, ಕಿತ್ತೂರರಾಣಿ ಚನ್ನಮ್ಮ ನಿರೂಪಿಸಿದರು. ಸಭೆಯಲ್ಲಿ ಶ್ರೀಮಠದಿಂದ ಪಿಎಸ್ಐ ಗಂಗಾಧರ ಹಿರೇಮಠ ಅವರಿಗೆ ಅರಕ್ಷಕ ರತ್ನ ಎಂಬ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಶ್ರೀಗಳು ಸಭೆಯ ಅಧ್ಯಕ್ಷತೆ ವಹಿಸಿದ್ದರು. ತುಮಕೂರಿನ ಶ್ರೀಶಿವಾನಂದ ಶಿವಾಚಾರ್ಯರು, ಹಿರೇಮಣಕಟ್ಟಿಯ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರು, ಗದಗ ಆಡ್ನೂರಿನ ಶ್ರೀಅಭಿನವ ಪಂಚಾಕ್ಷರ ಶಿವಾಚಾರ್ಯರು, ಹೊತನಹಳ್ಳಿ ಶ್ರೀ ಶಂಭುಲಿಂಗ ಶಿವಾಚಾರ್ಯರು, ನವನಗರದ ಶ್ರೀ ರಾಜಶೇಖರ ಶಿವಾಚಾರ್ಯರು, ಶಿವಪ್ರಕಾಶ ಸುರಗಿಮಠ, ಕಲ್ಲಪ್ಪ ಆಜೂರ, ಬಸಣ್ಣ ಕೌಜಲಗಿ, ಪರಮೇಶ್ವರ ಮಠದ ಸೇರಿದಂತೆ ಇತರರು ಇದ್ದರು. ಮಲ್ಲಿಕಾರ್ಜುನ ಯಳಮಲ್ಲಿಮಠ ಸ್ವಾಗತಿಸಿದರು. ಗಂಗುಬಾಯಿ ದೇಸಾಯಿ ನಿರೂಪಿಸಿದರು.

Share this article