ವಾಸುದೇವಾಚಾರ್ಯರ ಮನೆಯಲ್ಲಿ ಗಾಯನ ಸಮರ್ಪಣೆ ಮಾಡುವುದೇ ಒಂದು ಯೋಗ

KannadaprabhaNewsNetwork |  
Published : Jun 01, 2024, 01:45 AM IST
18 | Kannada Prabha

ಸಾರಾಂಶ

ಸಂಗೀತ ತಪಸ್ವಿಗಳಾದ ಅವರು ಬಾಳಿ, ಬದುಕಿದ ಮನೆಯನ್ನು ಒಂದು ಪಾರಂಪರಿಕ ತಾಣವಾಗಿ ರೂಪಿಸಲಾಗಿದೆ

- ಗಾಯಕ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ಫೋಟೋ- 29ಎಂವೈಎಸ್ 18ಕನ್ನಡಪ್ರಭ ವಾರ್ತೆ ಮೈಸೂರು

ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಮೈಲಿಗಲ್ಲನ್ನೇ ಸ್ಥಾಪಿಸಿ ವಿಶ್ವವಿಖ್ಯಾತರಾಗಿ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮಹತ್ತರ ಕೊಡುಗೆ ನೀಡಿದ ಮೈಸೂರು ವಾಸುದೇವಾಚಾರ್ಯರ ಮನೆಯಲ್ಲಿ ಗಾಯನ ಸಮರ್ಪಣೆ ಮಾಡುವುದು ಪೂರ್ವ ಜನ್ಮದ ಸುಕೃತವೇ ಆಗಿದೆ ಎಂದು ಖ್ಯಾತ ಗಾಯಕ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಹೇಳಿದರು.

ನಗರದ ಆಚಾರ್ಯ ಪಾಠಶಾಲಾ ಸಮೀಪದ ಶ್ರೀವಾಸುದೇವಾಚಾರ್ಯರ ಮನೆಯಲ್ಲಿ ಶಾಸ್ತ್ರೀಯ ಗಾಯನ ಸಮರ್ಪಿಸಿದ ಬಳಿಕ ಮಾತನಾಡಿದ ಅವರು, ವಾಸುದೇವಾಚಾರ್ಯರ ರಚನೆಗಳು ಎಂದರೆ ಅದು ಸಾಕ್ಷಾತ್ ನಾದ ಸರಸ್ವತಿಯಷ್ಟೇ ಮಾನ್ಯವಾದವು. ಸಂಗೀತ ತಪಸ್ವಿಗಳಾದ ಅವರು ಬಾಳಿ, ಬದುಕಿದ ಮನೆಯನ್ನು ಒಂದು ಪಾರಂಪರಿಕ ತಾಣವಾಗಿ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಯದುಪತಿ ಪುಟ್ಟಿ ಮತ್ತು ಶ್ರೀನಿವಾಸ ಪುಟ್ಟಿ ಅವರ ಶ್ರಮ ಅಪಾರವಾಗಿದೆ. ಇಬ್ಬರು ಸಹೋದರರು ವಾಸುದೇವಾಚಾರ್ಯರ ವಂಶಿಕರ ಮನ ಒಲಿಸಿ, ಈ ಮನೆಯನ್ನು ಕಲಾವಿದರ ಕ್ಷೇತ್ರವನ್ನಾಗಿಸಿದ್ದಾರೆ. ಇದು ನಮ್ಮ ನಾಡಿನ ಸಂಗೀತ ಪರಂಪರೆಯ ದೇಗುಲ ಇದ್ದಂತೆ ಎಂದರು.

ಮೈಸೂರು ವಾಸುದೇವಾಚಾರ್ಯರ ಮನೆಗೆ ಹೊಸ ಪೀಳಿಗೆಯ ಗಾಯಕರೂ, ಕಲಾವಿದರೂ ಪ್ರವೇಶ ಮಾಡಬೇಕು. ಇಲ್ಲಿ ಅನುದಿನವೂ ಕಲಾ ಚಟುವಟಿಕೆ, ಗೋಷ್ಠಿ ನಡೆಯಬೇಕು. ಆ ಮೂಲಕ ನವ ಕಲಾವಿದರಿಗೆ ನಮ್ಮ ಪೂರ್ವಿಕರ ಮಹತ್ವ ಪರಿಚಯ ಆಗಬೇಕು. ಆಗ ಮಾತ್ರ ವಾಸುದೇವಾಚಾರ್ಯರನ್ನು ನಾವು ಗೌರವಿಸಿದಂತಾಗುತ್ತದೆ ಎಂದರು.

ಖ್ಯಾತ ವೀಣಾವಾದಕ ವಿದ್ವಾನ್ ಪ್ರಶಾಂತ ಅಯ್ಯಂಗಾರ್ ಅವರೂ ಗಾಯನ ಸಮರ್ಪಿಸಿದರು. ಮೃದಂಗ ವಿದ್ವಾನ್ ಪಿ.ಎಸ್. ಶ್ರೀಧರ ಇದ್ದರು.

ಸಾಧಕರಿಗೆ ಸನ್ಮಾನ

ಇದೇ ವೇಳೆ ಸಂಗೀತ ಕಲಾ ಪೋಷಕರು ಮತ್ತು ವಾಸುದೇವಾಚಾರ್ಯರ ಮನೆಯನ್ನು ಪುನರುತ್ಥಾನ ಮಾಡಿದ ಯದುಪತಿ ಪುಟ್ಟಿ ಮತ್ತು ಶ್ರೀನಿವಾಸ ಪುಟ್ಟಿ ಅವರನ್ನು ವಿದ್ವಾನ್ ನಾಗರಾಜ್ ಸನ್ಮಾನಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್