ಶೃಂಗೇರಿ: ಶ್ರೀ ಶಾರದಾಪೀಠದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವದಲ್ಲಿ ಶಾರದೆಗೆ ಬುಧವಾರ ಗಜಲಕ್ಷಮಿ ಅಲಂಕಾರ ಮಾಡಲಾಗಿತ್ತು. ಶ್ರೀ ಶಾರದೆ ಪದ್ಮದಲ್ಲಿ ಉಪನಿಷ್ಠಳಾಗಿ ಪಾಶ್ವಭಾಗದಲ್ಲಿ ಸೊಂಡಿಲೆತ್ತಿರುವ ಆನೆಗಳಿಂದ ನಮಸ್ಕರಿಸಲ್ಪಡುತ್ತಾ ಮಂದಾಸ್ಮಿತವದನೆಯಾಗಿ ಪ್ರಸನ್ನಳಾಗಿರುವ ಶ್ರೀ ಗಜಲಕ್ಷಮಿಯು ಭಕ್ಕಾದಿಗಳಿಗೆ ಧನದಾನ್ಯ, ಸುಖ ಸಂಪತ್ತುಗಳನ್ನು ಕರುಣಿಸಿ ಅನುಗ್ರಹಿಸಿದಳು. ಜಗದ್ಗುರುಗಳು ಶ್ರೀ ಶಾರದಾಂಬೆಗೆ ನವರಾತ್ರಿಯ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು,
ಮಂಗಳವಾರ ಶಾರದೆಗೆ ಚಾಮುಂಡೇಶವರಿ ಅಲಂಕಾರ ಮಾಡಲಾಗಿತ್ತು. ಆಯುಧಪೂಜೆ ಅಂಗವಾಗಿ ಶ್ರೀ ಮಠದ ನರಸಿಂಹವನದಲ್ಲಿ ಶ್ರೀ ಮಠದ ವಾಹನಗಳಿಗೆ ಪೂಜೆ ನೆರವೇರಿತು.ಗಜಶಾಲೆಯಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಶ್ರೀ ಮಠದ ಆನೆಗಳಿಗೆ,ಅಶ್ವಗಳಿಗೆ ಪೂಜೆ ಸಲ್ಲಿಸಿದರು. ಶ್ರೀಮಠದ ಆವರಣದಲ್ಲಿರುವ ಎಲ್ಲಾ ದೇವಾಲಯಗಳಿಗೆ ತೆರಳಿ ನವರಾತ್ರಿಯ ವಿಶೇಷ ಪೂಜೆ ನೆರವೇರಿಸಿದರು. ನವರಾತ್ರಿಯ ಅಂಗವಾಗಿ ನಡೆಯುತ್ತಿದ್ದ ಶತಚಂಡೀಯಾಗದ ಪೂರ್ಣಾಹುತಿ ಜಗದ್ಗುರುಗಳ ಸಾನಿಧ್ಯದಲ್ಲಿ ನೆರವೇರಿತು. ಸಂಜೆಯ ಬೀದಿ ಉತ್ಸವದಲ್ಲಿ ಕೆರೆ ಗ್ರಾಮ ಪಂಚಾಯಿತಿ ಭಕ್ತದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಕಲಾ ತಂಡಗಳು, ಭಜನಾ ತಂಡಗಳು ಪಾಲ್ಗೊಂಡಿದ್ದವು.
ವಿಜಯೋತ್ಸವ, ಶಮೀಪೂಜೆ:ವಿಜಯದಶಮಿ ಅಂಗವಾಗಿ ವಿಜಯೋತ್ಸವ, ಶಮೀಪೂಜೆ ನೆರವೇರಿತು, ಮಧ್ಯಾಹ್ನ ಭವ್ಯ ಮೆರವಣಿಗೆಯಲ್ಲಿ ಅಮ್ಮನವರ ಉತ್ಸವ ಪಟ್ಟಣದಲ್ಲಿರುವ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಸಾಗಿತು. ಅಲ್ಲಿ ಕಾಳಿಕಾಂಬೆ ಸನ್ನಿಧಿಯಲ್ಲಿ ದೇವಿಗೆ ವಿಷೇಷ ಪೂಜೆ ನೆರವೇರಿತು. ಬನ್ನಿಪತ್ರೆಯಿಂದ ಉತ್ಸವ ಮೂರ್ತಿಗೂ, ಕಾಳಿಕಾಂಬೆಗೂ ಬನ್ನಿಪೂಜೆ ನೆರವೇರಿತು. ವಿಶೇಷ ಪೂಜೆ ಮಹಾಮಂಗಳಾರತಿ ನೆರವೇರಿತು.
ಗುರುವಾರ ಮಹಾರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವ-ಮಹಾಲಯ ಅಮಾವಾಸ್ಯೆಯಂದು ಶ್ರೀ ಶಾರದಾಂಬೆಗೆ ಮಹಾಭಿಷೇಕದೊಂದಿಗೆ ಆರಂಭಗೊಂಡಿದ್ದ ಶರನ್ನವರಾತ್ರಿ ಮಹೋತ್ಸವದ ಕೊನೆಯ ದಿನವಾದ ಗುರುವಾರ ಶ್ರೀ ಶಾರದಾಂಬಾ ಮಹಾರಥೋತ್ಸವ ನಡೆಯಲಿದೆ. ಬೆಳಿಗ್ಗೆ ಪಟ್ಟಣದ ರಥಬೀದಿಯಲ್ಲಿ ಶ್ರೀ ಶಾರದಾಂಬಾ ಮಹೋರಥೋತ್ಸವದೊಂದಿಗೆ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವೂ ನಡೆಯಲಿದೆ. ರಥೇತ್ಸವದ ನಂತರ ಶ್ರೀ ಶಾರದೆಯ ಸನ್ನಿದಿಯಲ್ಲಿ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ನಂತರ ಜಗದ್ಗುರುಗಳ ನವರಾತ್ರಿಯ ಹಗಲು ದರ್ಬಾರ್ ನಡೆಯುತ್ತದೆ.
21 ಶ್ರೀ ಚಿತ್ರ 1-ಶೃಂಗೇರಿ ಶಾರದೆ ಬುಧವಾರ ಗಜಲಕ್ಷಮಿ ಅಲಂಕಾರದಲ್ಲಿ ಕಂಗೊಳಿಸಿದಳು.