ಗಡಿರಕ್ಷಿಸಿದ ಹೆಮ್ಮೆಯ ಸೇನಾನಿ ಶುಕುರ್ ಅಹಮ್ಮದ್: ಅಂಬರೀಷ

KannadaprabhaNewsNetwork |  
Published : Jul 28, 2025, 12:31 AM IST
ಭಂಡಿಗಡಿಯಲ್ಲಿ ಯೋಧ ಶುಕುರ್ ಅಹಮ್ಮದ್ ಗೆ ಸನ್ಮಾನ | Kannada Prabha

ಸಾರಾಂಶ

ಕೊಪ್ಪ, ಗಡಿರಕ್ಷಣೆಯ ಕಾಯಕವನ್ನು ತ್ರಿಕರಣಪೂರ್ವಕ ನಿರ್ವಹಿಸಿದ ಹೆಮ್ಮೆಯ ಸೇನಾನಿ ಶುಕುರ್ ಅಹಮ್ಮದ್ ಅವರು ನಮ್ಮ ಭಂಡಿಗಡಿ ಗ್ರಾಮದವರು ಎನ್ನುವುದು ಹೆಮ್ಮೆಯ ವಿಚಾರ ಎಂದು ಭಂಡಿಗಡಿ ಜೀವನ ಚೇತನ ವೇದಿಕೆ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಷ ಹೇಳಿದರು.

ಭಂಡಿಗಡಿಯಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವದಲ್ಲಿ ಸನ್ಮಾನ

ಕನ್ನಡಪ್ರಭ ವಾರ್ತೆ, ಕೊಪ್ಪ

ಗಡಿರಕ್ಷಣೆಯ ಕಾಯಕವನ್ನು ತ್ರಿಕರಣಪೂರ್ವಕ ನಿರ್ವಹಿಸಿದ ಹೆಮ್ಮೆಯ ಸೇನಾನಿ ಶುಕುರ್ ಅಹಮ್ಮದ್ ಅವರು ನಮ್ಮ ಭಂಡಿಗಡಿ ಗ್ರಾಮದವರು ಎನ್ನುವುದು ಹೆಮ್ಮೆಯ ವಿಚಾರ ಎಂದು ಭಂಡಿಗಡಿ ಜೀವನ ಚೇತನ ವೇದಿಕೆ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಷ ಹೇಳಿದರು. ಕಾರ್ಗಿಲ್ ವಿಜಯೋತ್ಸದ ದಿನವಾದ ಶನಿವಾರ ಜೀವನ ಚೇತನ ಸಂಸ್ಥೆಯಿಂದ ನಿವೃತ್ತ ಯೋಧ ಭಂಡಿಗಡಿಯ ಶುಕೂರ್ ಆಹಮ್ಮದ್ ರವರನ್ನು ಸನ್ಮಾನಿಸಿ ಮಾತಾನಾಡಿದ ಅವರು ಶುಕೂರ್ ಅಹಮ್ಮದ್ ಭಾರತೀಯ ಭೂ ಸೇನೆಯಲ್ಲಿ ಗಡಿರಕ್ಷಣೆ ಕಾಯಕವನ್ನು ತ್ರಿಕರಣ ಪೂರ್ವಕವಾಗಿ ನಿರ್ವಹಿಸಿ, ತಮ್ಮ ೩೭ ಸೈನಿಕ ಯೋಧರೊಂದಿಗೆ ಕಾರ್ಗಿಲ್ ಯುದ್ಧ ಭೂಮಿಗೆ ತೆರಳಿ ಪ್ರತ್ಯಕ್ಷವಾಗಿ ಕಾರ್ಗಿಲ್ ಸಮರದಲ್ಲಿ ಪಾಲ್ಗೊಂಡರು ಮೈ ಕೊರೈಸುವ ಚಳಿಯಲ್ಲಿ ೨೦ ದಿನಗಳ ಕಾಲ ಕಾರ್ಗಿಲ್ ಸಮರದಲ್ಲಿರುವಾಗಲೆ ಆಕಸ್ಮಿಕ ಹಿಮದ ಶೀತಲತೆಗೆ ಪ್ರಜ್ಞೆ ಕಳೆದುಕೊಂಡು ಬಿದ್ದ ಇವರನ್ನು ಸೈನಿಕ ಮಿತ್ರರು ದೇಹಲಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು, ಅದರಿಂದ ಇವರ ಎಡಗೈ ಸ್ವಾಧೀನ ಕಳೆದು ಕೊಂಡಿತ್ತು.೨೪ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿ ನಿವೃತ್ತರಾದ ಇವರಿಗೆ ಬೆಂಗಳೂರಿನಲ್ಲಿ ಜೈ ಜವಾನ್ ಜೈಕಿಸನ್ ನಿಂದ ಗೌರವಿಸಲಾಗಿದೆ. ಇವರ ಸೇವೆ ಗುರುತಿಸಿ ಆನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಜನರಲ್ಲಿ ಜಾತಿ, ಧರ್ಮವನ್ನು ಹುಡುಕದೆ ಸ್ನೇಹ ಸೌಹರ್ದತೆ ಹುಡುಕುವ ಸ್ನೇಹಜೀವಿ, ಮಿತಭಾಷಿ ಶುಕುರ್ ಆಹಮ್ಮದ್ ನಿವೃತ್ತಿ ನಂತರ ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಸಾಪ ಹರಿಹರಪುರ ಹೊಬಳಿ ಘಟಕಗಳ ಸಕ್ರಿಯ ಸದಸ್ಯರಾಗಿ ಕನ್ನಡ ಸೇವೆಯಲ್ಲಿ ತೊಡಗಿ ನಾಡು ನುಡಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸೇವಾ ಚಟುವಟಿಕೆ ಹೀಗೆ ಮುಂದುವರಿಯಲಿ ಎಂದು ಜೀವನ ಚೇತನ ವೇದಿಕೆ ಭಂಡಿಗಡಿ ಇದರ ಅಧ್ಯಕ್ಷ ವೈದ್ಯ ಬಿ,ಆರ್ ಅಂಬರೀಷ ಶುಭ ಹಾರೈಸಿದ್ದಾರೆ. ಬಿ.ಎನ್. ಬಿಷೇಜ, ವೈದ್ಯ ಬಿ.ಆರ್. ಅಂಬರೀಶ, ಬಿ.ಎಚ್. ಚಂದ್ರಮೌಳಿ, ಬಿ.ಆರ್. ರವಿ ಪ್ರಸಾದ್, ಮಹಿಮ ಬಿ.ಎ, ಮನ್ವಿತ್ ಹಿರಣ್ಯ ಬಿ.ಎ, ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''