ಶಟ್ಲ್‌ ಬ್ಯಾಡ್ಮಿಂಟನ್: ಮಿಕ್ಸೆಡ್ ಡಬಲ್ಸ್‌ನಲ್ಲಿ ಸುಳ್ಳಿಮಾಡ ದೀಪಕ್, ಕುಪ್ಪಂಡ ರಚನ ಚಾಂಪಿಯನ್

KannadaprabhaNewsNetwork | Published : Mar 22, 2025 2:00 AM

ಸಾರಾಂಶ

ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ ಮನರಂಜನಾ ಕೂಟದ ವತಿಯಿಂದ ಕೊಡವ ಸಮಾಜದಲ್ಲಿ ಮೂರನೇ ವರ್ಷದ ಮುಕ್ತ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ ಮನರಂಜನಾ ಕೂಟದ ವತಿಯಿಂದ ಕೊಡವ ಸಮಾಜದಲ್ಲಿ ಮೂರನೇ ವರ್ಷದ ಮುಕ್ತ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಿತು.

ಸ್ಪರ್ಧೆಯ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಸುಳ್ಳಿಮಾಡ ದೀಪಕ್ ಮತ್ತು ಕುಪ್ಪಂಡ ರಚನ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಪುರುಷರ ಓಪನ್ ಡಬಲ್ಸ್‌ನಲ್ಲಿ ಬೊಪ್ಪೆರ ರಿತೇಶ್ ಮತ್ತು ಮೂಕೊಂಡ ಅಯ್ಯಪ್ಪ ಪ್ರಶಸ್ತಿ ಜಯಿಸಿದರೆ, ಬೊಬ್ಬೆರ ರಿತೇಶ್, ಮೇಚಿಯಂಡ ದೇವಯ್ಯ ರನ್ನರ್‌ಅಪ್‌ ಅನಿಸಿಕೊಂಡರು.20 ವರ್ಷ ವಯೋಮಾನದ ಒಳಗಿನವರಲ್ಲಿ ಬೊಪ್ಪೆರ ರಿತೇಶ್ ಮತ್ತು ಮೂಕೊಂಡ ಅಯ್ಯಪ್ಪ ವಿಜೇತರಾದರೆ, ಪೊನ್ನಕಚ್ಚಿರ ಭೀಮಯ್ಯ ಮತ್ತು ಮುಕ್ಕಾಟಿರ ಮುತ್ತಣ್ಣ ದ್ವಿತೀಯ ಸ್ಥಾನಿಯಾದರು.35-50 ವಯೋಮಿತಿಯ ವಿಭಾಗದಲ್ಲಿ ಕೀಕಿರ ಧನ್ಯ ಮತ್ತು ಕಳ್ಳಂಗಡ ಅಪ್ಪಣ್ಣ ಗೆದ್ದರೆ, ಬಾಚಮಂಡ ಅಪ್ಪಣ್ಣ ಮತ್ತು ಪಟ್ಟಡ ಶರತ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.50 ವರ್ಷ ಮೇಲ್ಪಟ್ಟವರಲ್ಲಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮತ್ತು ಬೊಬ್ಬೆರ ಜಯ ಉತ್ತಪ್ಪ ವಿಜೇತರಾದರು. ಕನ್ನಂಭೀರ ಸುಧಿ ಮತ್ತು ಶಿವಾಚಾಳಿಯಂಡ ಲವ ಕಾಳಪ್ಪ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು.

ಬೆಸ್ಟ್ ಅಪ್ ಕಮಿಂಗ್ ಪ್ಲೇಯರ್ ಆಗಿ ಚೆಂಬಂಡ ತಶ್ಮಾ ಹೊರಹೊಮ್ಮಿದರು.ಸ್ನೂಕರ್‌ ಸ್ಪರ್ಧೆಯಲ್ಲಿ ಕುಂಡ್ಯೋಳಂಡ ಶಬನ್ ಮತ್ತು ಕೋಟೆರ ಜೀವನ್ ಪ್ರಶಸ್ತಿ ಜಯಿಸಿದರೆ, ಮಾಳೇಟಿರ ಪೂಣಚ್ಚ ಮತ್ತು ಅಪ್ಪಚೆಟ್ಟೋಳಂಡ ಅಜಿತ್ ರನ್ನರ್ ಅಪ್ ಪ್ರಶಸ್ತಿ ಪಡೆದರು. ಉತ್ತಮ ಆಟಗಾರರಾಗಿ ಕುಂಜಂಡ ಬೆಳ್ಳಿಯಪ್ಪ ಹೊರಹೊಮ್ಮಿದರು.* ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಬಿದ್ದಾಟಂಡ ತಮ್ಮಯ್ಯ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು. ಅತಿಥಿಗಳಾಗಿ ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಾಂಡ್ ಗಣಪತಿ, ಬೆಂಗಳೂರು ಕೊಡವ ಸಮಾಜದ ಮಾಜಿ ಕಾರ್ಯದರ್ಶಿ ಚೆರಿಯಪಂಡ ಸುರೇಶ್ ನಂಜಪ್ಪ, ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ, ಕಾಫಿ ಬೆಳೆಗಾರ ಅಜ್ಜಿ ಕುಟ್ಟಿರ ಸಿ. ಕಾರ್ಯಪ್ಪ ಹುದಿಕೇರಿ, ಕಸ್ಟಮ್ ಅಧಿಕಾರಿ ವಾಂಜಂಡ ಕಾರ್ಯಪ್ಪ ಬೆಂಗಳೂರು, ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಾಪೋಕ್ಲು ಕೊಡವ ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ಕಾಫಿ ಬೆಳೆಗಾರರಾದ ಬಿದ್ದಾಟಂಡ ರೋಹಿಣಿ, ಕ್ಲಬ್ ಉಪಾಧ್ಯಕ್ಷ ಕೊಂಡಿರ ನಂದ ಕುಮಾರ್, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ಖಜಾಂಚಿ ಕಲಿಯಂಡ ಕೌಶಿ ಕುಶಾಲಪ್ಪ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.21-ಎನ್ ಪಿ ಕೆ-1ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ ಮನರಂಜನಾ ಕೂಟದ ವತಿಯಿಂದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಮೂರನೇ ವರ್ಷದ ಮುಕ್ತ ಬ್ಯಾಡ್ಮಿಂಟನ್ ಮತ್ತು ಸ್ನೂಕರ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು.21-ಎನ್ ಪಿ ಕೆ-2. ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ ಮನರಂಜನಾ ಕೂಟದ ವತಿಯಿಂದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಮೂರನೇ ವರ್ಷದ ಮುಕ್ತ ಬ್ಯಾಡ್ಮಿಂಟನ್ ಮತ್ತು ಸ್ನೂಕರ್ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ದಾಳುಗಳು.

Share this article