ಸಿದ್ದಗಂಗಾ ಶ್ರೀಗಳು ಯುವಜನತೆಗೆ ಆದರ್ಶ: ಸ್ವಾಮೀಜಿ

KannadaprabhaNewsNetwork |  
Published : Aug 03, 2026, 01:45 AM IST
೦೧ವಿಜೆಪಿ ೦೧ವಿಜಯಪುರ ಬಸವಕಲ್ಯಾಣ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ೧೧೯ನೇ ಜನ್ಮದಿನೋತ್ಸವ, ಬಸವಕಲ್ಯಾಣ ಮಠದ ೩೭ನೇ ವರ್ಷದ ಪೀಠಾರೋಹಣ ಮಹೋತ್ಸವ, ಬಸವ ಜಯಂತಿ, ಎಂ. ಮರಿಯಮ್ಮನವರ ೯ನೇ ವರ್ಷದ ಸ್ಮರಣೋತ್ಸವ, ಶ್ರೀ ಮಹದೇವ ಸ್ವಾಮೀಜಿಗಳವರ ೬೭ನೇ ವರ್ಷದ ವರ್ಧಂತ್ಯೋತ್ಸವ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದ ಪ್ರಯುಕ್ತ ಬಸವೇಶ್ವರನಗರದ ವಿನಾಯಕ ದೇವಾಲಯದಿಂದ ಶ್ರೀ ಮಹದೇವ ಸ್ವಾಮೀಜಿ, ಶ್ರೀ ಬಸವ ರಮಾನಂದ ಸ್ವಾಮೀಜಿ ಹಾಗೂ ಶ್ರೀ ಸದಾಶಿವ ಸ್ವಾಮೀಜಿಯವರನ್ನು ವೀರಗಾಸೆಯ ಜಾನಪದ ಕಲಾತಂಡದೊಂದಿಗೆ ಆಕರ್ಷಕ ಅಲಂಕೃತ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ವಿಜಯಪುರ: ಇಂದಿನ ಯುವಜನತೆಗೆ ಜಗಜ್ಯೋತಿ ಬಸವಣ್ಣನವರ ತತ್ವ ಚಿಂತನೆಗಳು, ಸಿದ್ದಗಂಗಾ ಮಠದ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿಯ ಜೀವನ ಹಾಗೂ ಬಸವಕಲ್ಯಾಣ ಮಠದ ಅಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿಯವರ ಬದುಕು ಆದರ್ಶಮಯ ಎಂದು ಶ್ರೀವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವ ರಮಾನಂದ ಸ್ವಾಮೀಜಿ ಹೇಳಿದರು

ವಿಜಯಪುರ: ಇಂದಿನ ಯುವಜನತೆಗೆ ಜಗಜ್ಯೋತಿ ಬಸವಣ್ಣನವರ ತತ್ವ ಚಿಂತನೆಗಳು, ಸಿದ್ದಗಂಗಾ ಮಠದ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿಯ ಜೀವನ ಹಾಗೂ ಬಸವಕಲ್ಯಾಣ ಮಠದ ಅಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿಯವರ ಬದುಕು ಆದರ್ಶಮಯ ಎಂದು ಶ್ರೀವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವ ರಮಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಮೇಲೂರು ರಸ್ತೆಯ ಬಸವಕಲ್ಯಾಣ ಮಠದಲ್ಲಿ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿಯ ೧೧೯ನೇ ಜನ್ಮದಿನ, ಬಸವಕಲ್ಯಾಣ ಮಠದ ೩೭ನೇ ಪೀಠಾರೋಹಣ ಮಹೋತ್ಸವ, ಬಸವ ಜಯಂತಿ, ಎಂ.ಮರಿಯಮ್ಮನವರ ಸ್ಮರಣೋತ್ಸವ, ಮಹದೇವ ಸ್ವಾಮೀಜಿಯ ವರ್ಧಂತ್ಯುತ್ಸವ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಕಲ್ಯಾಣ ಮಠದ ಅಧ್ಯಕ್ಷ ಮಹದೇವ ಸ್ವಾಮೀಜಿ ಮಾತನಾಡಿ, ಯಾವುದೇ ಜಾತಿ, ಮತ, ಪಂಥ ಹಾಗೂ ಭೇದಭಾವವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿ ಸಮಾಜಮುಖಿಯಾಗಿ ಮಠವನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಕ್ತಾದಿಗಳು ಇದೇ ರೀತಿಯ ಪ್ರೀತಿ-ಆದರಗಳನ್ನು ಕಿರಿಯ ಶ್ರೀಗಳಾದ ಸದಾಶಿವ ಸ್ವಾಮೀಜಿ ನೀಡಬೇಕು ಎಂದು ಕೋರಿದರು.

ರಾಜ್ಯ ೫ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಮಾತನಾಡಿ, ಸಮಾಜದಲ್ಲಿ ಗುರುಗಳಿಗೆ ನೀಡಬೇಕಾದ ಗೌರವ ಮತ್ತು ಮಹತ್ವದ ಕುರಿತು ಬೆಳಕು ಚೆಲ್ಲಿದರು.

ಬಸವೇಶ್ವರನಗರದ ವಿನಾಯಕ ದೇವಾಲಯದಿಂದ ಮಹದೇವ ಸ್ವಾಮೀಜಿ, ಬಸವ ರಮಾನಂದ ಸ್ವಾಮೀಜಿ ಹಾಗೂ ಸದಾಶಿವ ಸ್ವಾಮೀಜಿಯವರನ್ನು ವೀರಗಾಸೆಯ ಜಾನಪದ ಕಲಾತಂಡದೊಂದಿಗೆ ಆಕರ್ಷಕ ಅಲಂಕೃತ ಪಲ್ಲಕ್ಕಿ ಮೆರವಣಿಗೆಯಲ್ಲಿ ಮಠಕ್ಕೆ ಕರೆತರಲಾಯಿತು.

ಉಚಿತ ಆರೋಗ್ಯ ತಪಾಸಣೆ: ದೃಷ್ಟಿ ಆಸ್ಪತ್ರೆ, ಅಪೋಲೋ ಮೆಡಿಕಲ್ ಸ್ಟೋರ್ ಹಾಗೂ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿಗೆ ಕಣ್ಣಿನ ತಪಾಸಣೆ, ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ನಡೆಸಿ, ಉಚಿತ ಔಷಧ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಎಚ್.ಆರ್.ನಾರಾಯಣಪ್ಪ, ಬೊಮ್ಮಸಂದ್ರದ ವಿ.ಎಂ.ಗುಮ್‌ಕಾರ್, ಕೆಂಗೇರಿಯ ಪ್ರಕಾಶ್ ಹಾಗೂ ವಿಶ್ವನಾಥ್, ಅರ್ಪುದರಾಜ್, ಜಾಲಹಳ್ಳಿಯ ಬಿ.ಎಂ. ಶಂಕರಪ್ಪ, ಪಿ.ಸಿ. ರಮೇಶ್, ವಸಂತ್ ಕುಮಾರ್ ಹಾಗೂ ಉದ್ಯಮಿ ರಾಜಪ್ಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಮಠದ ಕಿರಿಯ ಶ್ರೀಗಳಾದ ಶ್ರೀ ಸದಾಶಿವ ಸ್ವಾಮೀಜಿ, ಅಂಡ್ರಕಳ್ಳಿ ಶ್ರೀ ಪಟ್ಟದ ಪಂಚಾಕ್ಷರಿ ಸ್ವಾಮೀಜಿ, ಚಕ್ರಭಾವಿ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ದೊಡ್ಡಬಳ್ಳಾಪುರ ಖಾನಿಮಠದ ಶ್ರೀ ಬಸವರಾಜ ಸ್ವಾಮೀಜಿ, ಶ್ರೀ ಬಸವೇಶ್ವರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಮರಳವಾಡಿ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ, ಶ್ರೀ ಶಿವಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.

೦೧ವಿಜೆಪಿ ೦೧

ವಿಜಯಪುರ ಬಸವಕಲ್ಯಾಣ ಮಠದಲ್ಲಿ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿಯ ೧೧೯ನೇ ಜನ್ಮದಿನ, ಬಸವಕಲ್ಯಾಣ ಮಠದ ಪೀಠಾರೋಹಣ ಮಹೋತ್ಸವ, ಬಸವ ಜಯಂತಿ, ಎಂ.ಮರಿಯಮ್ಮನವರ ಸ್ಮರಣೋತ್ಸವ, ಶ್ರೀ ಮಹದೇವ ಸ್ವಾಮೀಜಿ ವರ್ಧಂತ್ಯುತ್ಸವ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದ ಪ್ರಯುಕ್ತ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ
ಶಿಕ್ಷಣದಿಂದ ಮಾತ್ರ ಪಿಡುಗುಗಳನ್ನು ತಡೆಯಬಹುದು: ನ್ಯಾ. ಯೋಗೇಂದ್ರ ಶೆಟ್ಟಿ ಸಲಹೆ