ಸಿದ್ಧಗಂಗಾ ಶ್ರೀ ಸಮಾಜದ ಏಳಿಗೆಗೆ ಬದುಕು ಸವೆಸಿದ ಸಂತ: ಎಸ್.ಎಸ್. ಪಾಟೀಲ

KannadaprabhaNewsNetwork | Published : Apr 2, 2025 1:00 AM

ಸಾರಾಂಶ

ಲಕ್ಷಾಂತರ ವಿದ್ಯಾರ್ಥಿಗಳಿಗೆ ಊಟ, ವಸತಿ ನೀಡಿ ಜ್ಞಾನವನ್ನು ಧಾರೆ ಎರೆದ ಈ ಮಹಾಸ್ವಾಮಿಗಳು ಯಾವುದೇ ಜಾತಿ, ಮತ, ಪಂಥಗಳಿಲ್ಲದೆ ಎಲ್ಲದನ್ನು ಮಾನವೀಯತೆ ದೃಷ್ಟಿಯಿಂದ ಸಮಾಜದ ಏಳಿಗೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರು.

ಹಿರೇಕೆರೂರು: ಶಿವಕುಮಾರ ಸ್ವಾಮಿಗಳು ಭಾರತ ಕಂಡ ಆಧ್ಯಾತ್ಮಿಕ ಮಹಾ ಗುರುಗಳು. ಕರ್ನಾಟಕದ ಸಿದ್ಧಗಂಗಾ ಮಠದ ಪೀಠಾಧಿಪತಿಗಳಾಗಿ 112 ವರ್ಷಗಳ ಕಾಲ ಬದುಕಿ ಅನ್ನ, ಅಕ್ಷರ ಮತ್ತು ಜ್ಞಾನವನ್ನು ನಾಡಿಗೆ ನಿರಂತರವಾಗಿ ನೀಡಿದರು ಎಂದು ಎಸ್.ಎಸ್. ಪಾಟೀಲ ತಿಳಿಸಿದರು.ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆ ಹಾಗೂ ಟಿಎಪಿಸಿಎಂಎಸ್ ಆಶ್ರಯದಲ್ಲಿ ನಡೆದ 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಅನುಯಾಯಿ ನಡೆದಾಡುವ ದೇವರು, ಕಾಯಕ ಯೋಗಿ, ಕರ್ನಾಟಕ ರತ್ನ ಶಿವಕುಮಾರ ಸ್ವಾಮಿಗಳ 118ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಲಕ್ಷಾಂತರ ವಿದ್ಯಾರ್ಥಿಗಳಿಗೆ ಊಟ, ವಸತಿ ನೀಡಿ ಜ್ಞಾನವನ್ನು ಧಾರೆ ಎರೆದ ಈ ಮಹಾಸ್ವಾಮಿಗಳು ಯಾವುದೇ ಜಾತಿ, ಮತ, ಪಂಥಗಳಿಲ್ಲದೆ ಎಲ್ಲದನ್ನು ಮಾನವೀಯತೆ ದೃಷ್ಟಿಯಿಂದ ಸಮಾಜದ ಏಳಿಗೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರು ಎಂದರು.ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ ಮಾತನಾಡಿದರು. ಡಾ. ಎಸ್.ಬಿ. ಚನ್ನಗೌಡ್ರ ನುಡಿನಮನ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಏಕೇಶಣ್ಣ ಬಣಕಾರ, ಯು.ಎಸ್. ಕಳಗೊಂಡದ, ಸಂಶೋಧನಾ ವಿಭಾಗದ ನಿರ್ದೇಶಕರಾದ ರಜಿತ್‌ಕುಮಾರ್ ಎಚ್.ಬಿ. ಪ್ರಾಂಶುಪಾಲರಾದ ಬಿ.ಪಿ. ಹಳ್ಳೇರ ಕೆ.ಎಚ್. ಮಾವೀನತೋಪ ಮುಖ್ಯೋಪಾಧ್ಯಾಯರಾದ ಆರ್.ಎಚ್. ಬೆಟ್ಟಳ್ಳೇರ, ಆರ್.ಎಚ್. ಪೂಜಾರ, ಹಾಗೂ ಟಿಎಪಿಸಿಎಂಎಸ್ ಪ್ರಧಾನ ವ್ಯವಸ್ಥಾಪಕ ಬಿ.ಜಿ. ಬಣಕಾರ, ರೇಖಾ ನಲವಾಲದ, ಸುನಿತಾ ಪಿ.ಎಂ. ಡಮ್ಮಳ್ಳಿ, ಎನ್.ಡಿ. ನಿಂಗಪ್ಪನವರ, ರಮೇಶ ಮೆಣಸಗಿ, ಪಿ.ಪಿ. ಕಾಂಬಳೆ, ಎಸ್.ಬಿ. ಪಾಟೀಲ್ ಹಿರೇಮಠ ಹಾಗೂ ಬಿಎಡಿ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಡಾ. ಸತೀಶ ಬಣಕಾರ ಸ್ವಾಗತಿಸಿದರು. ದಾನೇಶ ಟಿ. ವಂದಿಸಿದರು. ಲಿಂಗದೀಕ್ಷೆ ಭಗವಂತನ ಒಲುಮೆಗೆ ಸಾಧನ

ಗುತ್ತಲ: ಲಿಂಗದೀಕ್ಷೆಯು ಭಗವಂತನ ಒಲಿಸಿಕೊಳ್ಳುವ ಸಾಧನವಾಗಿದೆ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಸಮೀಪದ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಗುರುಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಜರುಗಿದ ಅಯ್ಯಾಚಾರ ಶಿವದೀಕ್ಷಾ ಕಾರ್ಯಕ್ರಮದಲ್ಲಿ 10 ಜಂಗಮ ವಟುಗಳಿಗೆ ಅಯ್ಯಾಚಾರ, ಓರ್ವರಿಗೆ ಶಿವದೀಕ್ಷೆ ನೇರವೇರಿಸಿ ಆಶೀರ್ವಚನ ನೀಡಿದರು.ಧರ್ಮ ಸಂಸ್ಕಾರದಿಂದ ಮಾತ್ರ ಉಜ್ವಲ ಭವಿಷ್ಯ ನಿರ್ಮಾಣವಾಗಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬ ವೀರಶೈವ ಲಿಂಗಾಯತ ಸಮಾಜದವರು ಮಕ್ಕಳಿಗೆ ಲಿಂಗದೀಕ್ಷೆ ಸಂಸ್ಕಾರ ನೀಡಿ ಧರ್ಮದ ಮಾರ್ಗ ತೋರಬೇಕು ಎಂದರು.ಕಾರ್ಯಕ್ರಮದಲ್ಲಿ ಶ್ರೀಮಠದ ಪಾಠಶಾಲೆಯ ಪ್ರಾಚಾರ್ಯ ಮಹೇಶ ಶಾಸ್ತ್ರಿ ಹಾವೇರಿಮಠ, ಗುರುಶಾಂತಸ್ವಾಮಿ ಹಿರೇಮಠ ಮತ್ತು ಪಾಠಶಾಲೆಯ ವಿದ್ಯಾರ್ಥಿಗಳು ದೀಕ್ಷಾ ಸಂಸ್ಕಾರ, ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಟುಗಳು ಭಿಕ್ಷಾಟನೆ ಕೈಗೊಂಡರು. ದಾವಣಗೆರೆ, ಗದಗ, ಹಾವೇರಿ ಜಿಲ್ಲೆಗಳ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು.ಇಂದು ಸಾಮೂಹಿಕ ವಿವಾಹ

ಶ್ರೀಮಠದ ಜಾತ್ರಾ ಮಹೊತ್ಸವ ಪ್ರಯುಕ್ತ ಏ. 2ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗುವುದು. ಸಾಯಂಕಾಲ 5ಕ್ಕೆ ಶ್ರೀಮಠದ ಗುರುಶಾಂತ ಶಿವಯೋಗಿಗಳವರ ರಜತ ಮೂರ್ತಿ ಜತೆಗೆ ಸರ್ವಧರ್ಮ ಶರಣರ ಭಾವಚಿತ್ರ ಮೆರವಣಿಗೆ ನಡೆಯಲಿದೆ.

Share this article