ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕು ಧನಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ದರಾಜು ಅವಿರೋಧವಾಗಿ ಆಯ್ಕೆಯಾದರು.ಈ ವೇಳೆ ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ ಮಾತನಾಡಿ, ಸಹಕಾರ ಕ್ಷೇತ್ರಕ್ಕೆ ನಾವು ಹೋಗಲಿಲ್ಲ. ಆದರೆ, ಬಿ. ಗುರುಸ್ವಾಮಿಯವರು ಸಹಕಾರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಈ ಹೊಸ ಕಟ್ಟಡವೇ ಸಾಕ್ಷಿಯಾಗಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಪರ, ರೈತರ ಪರ, ಮಹಿಳೆಯರ ಪರವಾಗಿದ್ದು, ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುತ್ತಿದೆ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.ನೂತನ ಅಧ್ಯಕ್ಷ ಸಿದ್ದರಾಜು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಜಿ ಅಧ್ಯಕ್ಷರಾದ ಡಿ. ಗುರುಸ್ವಾಮಿ ಸಹಕಾರದಿಂದ ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕು ಎಂದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ. ಗುರುಸ್ವಾಮಿ ಮಾತನಾಡಿ, ನಮ್ಮ ಸಹಕಾರ ಸಂಘದಲ್ಲಿ 1934 ಜನ ಸದಸ್ಯರಿದ್ದು, ಅದರಲ್ಲಿ 588 ಜನ ರೈತರಿಗೆ ಬೆಳೆ ಸಾಲ 6.20 ಕೋಟಿ ನೀಡಿದ್ದೇವೆ. ಸಂಘಕ್ಕೆ 11 ಲಕ್ಷ ರು. ಆದಾಯ ಬಂದಿದೆ. ಈ ಸಂಘಕ್ಕೆ 8 ಗ್ರಾಮಗಳು ಸೇರುತ್ತದೆ. ನನ್ನ ಅವಧಿಯಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ಮಾಡಿದ್ದೇವೆ. ನಿಮ್ಮೆಲ್ಲರ ಸಹಕಾರದಿಂದ ಸಂಘ ಈ ಮಟ್ಟಕ್ಕೆ ಬೆಳೆದಿದೆ ಎಂದರು.ಸಂಘದ ನಿರ್ದೇಶಕರಾದ ಎಸ್. ಬಸಪ್ಪ, ಮಾದನಾಯಕ, ಜವರೇಗೌಡ, ಬಸವೇಗೌಡ, ಜಿ.ಎ. ರಾಜೇಗೌಡ, ಚಿಕ್ಕಣ್ಣ, ಬಿ. ಕಾಳಲಿಂಗೇಗೌಡ, ಕೃಷ್ಣಮೂರ್ತಿ, ತಿಮ್ಮಮ್ಮ, ಮೇಲ್ವಿಚಾರಕ ಎಂ. ಗಿರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ತಾಪಂ ಮಾಜಿ ಸದಸ್ಯ ಸಿ.ಎಂ. ಸಿದ್ದರಾಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಸೋಮಣ್ಣ, ಬಸವರಾಜು, ನಂಜುಂಡೇಗೌಡ, ಧನಗಳ್ಳಿ ಬಸವರಾಜು, ಅಂದಾನಿ ಚಂದ್ರು, ಶಿವರಾಜೇಗೌಡ, ಮನೋಜ್ ಕೋಟೆಹುಂಡಿ, ಬಸಪ್ಪ, ಬಿ. ರವಿ, ಗಡ್ಡಬಸಪ್ಪ, ರಾಜೇಶ್, ಮಹೇಶ್, ರವಿಶಂಕರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಕೃಷ್ಣ, ಸಿ. ಮಾಲೇಗೌಡ, ರವಿಕುಮಾರ್, ಗೀತಾ ಇದ್ದರು.