ಸಿದ್ದರಾಮಯ್ಯಗೆ ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ: ಶಾಸಕ ಮೇಟಿ

KannadaprabhaNewsNetwork |  
Published : Aug 04, 2025, 12:30 AM IST
ನವನಗರದಲ್ಲಿರುವ ಶಾಸಕ ಗೃಹಕಚೇರಿ ಆವರಣದಲ್ಲಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಮುಖಂಡ ಹೊಳೆಬಸು ಶೆಟ್ಟರ್ ಅವರು ಕೇಕ್ ಕತ್ತರಿಸಿದರು. | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಪ್ರಯುಕ್ತ ಶಾಸಕ ಎಚ್.ವೈ.ಮೇಟಿ ಅವರ ನೇತೃತ್ವದಲ್ಲಿ ನವನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಪ್ರಯುಕ್ತ ಶಾಸಕ ಎಚ್.ವೈ.ಮೇಟಿ ಅವರ ನೇತೃತ್ವದಲ್ಲಿ ನವನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೇಟಿ ಅವರು, ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಹರಿಕಾರರು. ದೇವರಾಜ ಅರಸು ಅವರ ನಂತರ ಶೋಷಿತರಿಗಾಗಿ ದುಡಿದ ಏಕಮಾತ್ರ ನಾಯಕರಿದ್ದರೆ ಅದು ಸಿದ್ದರಾಮಯ್ಯ ಅವರು. ಬಡವರ ಬಗ್ಗೆ ಸದಾ ಚಿಂತಿಸುವ ಅವರು ಎಷ್ಟೇ ಸವಾಲುಗಳು ಎದುರಾದರೂ ಅವುಗಳನ್ನು ಹಿಮ್ಮೆಟ್ಟಿಸಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಶೋಷಿತ, ಬಡಸಮುದಾಯದ ಜನರ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಬಾಗಲಕೋಟೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ನನಸು ಮಾಡುತ್ತಿದ್ದಾರೆ. ನವನಗರದ ಮೂರನೇ ಯೂನಿಟ್‌ನಲ್ಲಿ ಬೃಹತ್ ಮಾರುಕಟ್ಟೆ ನಿರ್ಮಾಣಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರು ಮಾತನಾಡಿ, ಸಿದ್ದರಾಮಯ್ಯ ಅವರು ಈ ಬಾರಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿದ್ದಾರೆ. ಬಡವರಿಗಾಗಿ ಸಾಕಷ್ಟು ಯೋಜನೆ ತಂದಿದ್ದಾರೆ. ಅಭಿವೃದ್ಧಿ ಪರ ಚಿಂತನೆ ಹೊಂದಿದ್ದಾರೆ ಎಂದರು. ಉಮೇಶ ಮೇಟಿ, ಸಿಕಂದರ್ ಅಥಣಿ, ಆರ್.ಎಚ್.ಪೆಂಡಾರಿ, ಅಕ್ಬರ್ ಮುಲ್ಲಾ, ರಜಾಕ್ ಬೇನೂರ, ಎಸ್.ಎಂ.ರಾಂಪೂರ, ಆರಿಫ ಡಾಲಾಯತ್, ದ್ಯಾಮಣ್ಣ ಗಾಳಿ, ಅಮಿನ್ಸಾಬ್ ರಕ್ಕಸಗಿ, ವೈ.ವೈ.ತಿಮ್ಮಾಪೂರ ಮತ್ತಿತರರು ಇದ್ದರು.

ಕೇಕ್ ಕತ್ತರಿಸಿ ಸಂಭ್ರಮ: ನವನಗರದಲ್ಲಿರುವ ಶಾಸಕ ಗೃಹಕಚೇರಿ ಆವರಣದಲ್ಲಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಮುಖಂಡ ಹೊಳೆಬಸು ಶೆಟ್ಟರ ಅವರು ಕೇಕ್ ಕಟ್‌ ಮಾಡಿದರು. ಸಿದ್ದರಾಮಯ್ಯ ಅವರು ಬಾದಾಮಿ ಪ್ರತಿನಿಧಿಸಿದ್ದರು. ಈ ಭಾಗದ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ನಾವು ಇಲ್ಲಿನ ಸಮಸ್ಯೆಗಳನ್ನು ತೆಗೆದುಕೊಂಡು ಹೋದಾಗ ಆಸಕ್ತಿಯಿಂದ ಆಲಿಸುವುದಲ್ಲದೇ ತಕ್ಷಣ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತಾರೆ. ಸದಾ ಬಡವರಪರ, ಶೋಷಿತರ ಪರ ಚಿಂತಿಸುತ್ತಾರೆ. ಸಾಮಾಜಿಕ ನ್ಯಾಯದ ಪರ ಸದಾ ಧ್ವನಿಯಾಗುತ್ತಾರೆ ಎಂದ ಅವರು, ಬಾಗಲಕೋಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಸಗಳು ಈ ಅವಧಿಯಲ್ಲಿ ಆಗಿವೆ. ಸರ್ಕಾರಿ ಮೆಡಿಕಲ್ ಕಾಲೇಜು, ಮಾರುಕಟ್ಟೆ ನಿರ್ಮಾಣವೂ ನನಸಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಅಶೋಕ ಲಾಗಲೋಟಿ ಮತ್ತಿತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ