ಸಿದ್ದರಾಮಯ್ಯನವರದ್ದು ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರ: ಗೋವಿಂದ ಕಾರಜೋಳ ವಾಗ್ದಾಳಿ

KannadaprabhaNewsNetwork |  
Published : Dec 25, 2023, 01:30 AM IST

ಸಾರಾಂಶ

ವಿಜಯಪುರ: ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಬಂದ್ ಮಾಡಿದ್ದು, ಸಿದ್ದರಾಮಯ್ಯ ಸರ್ಕಾರ ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರವಾಗಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಬಂದ್ ಮಾಡಿ ಲಂಚ ತಿನ್ನುತ್ತಿದ್ದಾರೆ. ಜನರ ಅಸಮದಾನವನ್ನು ಬೆರೆಡೆಗೆ ಸೆಳೆಯಲು ಗಿಮಿಕ್ ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯಪುರ: ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಬಂದ್ ಮಾಡಿದ್ದು, ಸಿದ್ದರಾಮಯ್ಯ ಸರ್ಕಾರ ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರವಾಗಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಬಂದ್ ಮಾಡಿ ಲಂಚ ತಿನ್ನುತ್ತಿದ್ದಾರೆ. ಜನರ ಅಸಮದಾನವನ್ನು ಬೆರೆಡೆಗೆ ಸೆಳೆಯಲು ಗಿಮಿಕ್ ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶಕ್ಕೆ ಸಂವಿಧಾನವಿದೆ. ಶಿಕ್ಷಣ, ಆರೋಗ್ಯ ಹಾಗೂ ಜನರ ಕಲ್ಯಾಣದ ಬಗ್ಗೆ ಸಂವಿಧಾನ ಪಾಲಿಸಬೇಕಾಗುತ್ತದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯ ಶೂನ್ಯವಾಗಿವೆ. ಆಡಳಿತ ವೈಫಲ್ಯ ಡೈವರ್ಟ್ ಮಾಡಲು ಕಾಲಕಾಲಕ್ಕೆ ಇಂತಹ ವಿಷಯಗಳನ್ನು ಮುನ್ನೆಲೆಗೆ ತರುತ್ತಾರೆ ಎಂದು ಕಿಡಿಕಾರಿದರು.

ಜಾತಿ ಜನಗಣತಿಗೆ ಲಿಂಗಾಯತ ಸಮಾಜ ಹಾಗೂ ಸ್ವಾಮೀಜಿಗಳು ವಿರೋಧ ಮಾಡಿದ್ದಾರೆ. ಶ್ರೀಶೈಲ ಶ್ರೀಗಳು ಯಾವುದಕ್ಕೆ ವಿರೋಧ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆ ಕುರಿತು ಹೆಚ್ಚಿನ ಮಾಹಿತಿ ಶಾಮನೂರು ಶಿವಶಂಕರಪ್ಪ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತ್ರ ಗೊತ್ತು ಎಂದರು.

ಪದಾಧಿಕಾರಿಗಳ ನೇಮಕಕ್ಕೆ ಅಸಮಾಧಾನವಿಲ್ಲ:

ನೂತನ ಪದಾಧಿಕಾರಿಗಳ ನೇಮಕ ಅಸಮಾಧಾನ ವಿಚಾರ ಸತ್ಯಕ್ಕೆ ದೂರವಾದದ್ದು, ಯಾರಿಗೆ ಅವಕಾಶ ಸಿಕ್ಕಿಲ್ಲ, ಅವರಿಗೆಲ್ಲಾ ಅಸಮಾಧಾನ ಆಗಬಾರದು ಎಂದು ವಿನಂತಿ ಮಾಡುವೆ. ಎಲ್ಲರೂ ಸೇರಿ ಪಕ್ಷವನ್ನು ಸಂಘಟಿಸಿ ಮುಂದಿನ ಲೋಕಸಭೆ ಚುನಾವಣೆ ಎದುರಿಸಬೇಕು. ಪಕ್ಷ ಸಂಘಟನೆಗೆ ಸಹಕರಿಸಿ. ನಮ್ಮ ಪಕ್ಷ ಲೋಕಸಭೆ ಚುನಾವಣೆಯಲ್ಲಿ 25 ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ. ಕಡಿಮೆ ಸ್ಥಾನ ಸಾಧ್ಯವೇ ಇಲ್ಲ. ಲೋಕಸಭಾ ಕಡಿಮೆ ಸ್ಥಾನ ಬಂದರೆ ವಿಜಯೇಂದ್ರ ಕೆಳಗಿಳಿಸುವ ವಿಚಾರ ಕೇವಲ ಊಹಾಪೋಹ. ಈಗ ಹೊಸ ತಂಡ ಕಟ್ಟಲಾಗಿದೆ. ಹೊಸಬರನ್ನು ಮುಂದೆ ತರುವ ಕೆಲಸ ಹೈಕಮಾಂಡ್ ಮಾಡಿದೆ. ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಲ್ಲ ಕಾರ್ಯಕರ್ತರು ಕೈ ಜೋಡಿಸಿ ಎಂದರು.

ವಿಜಯಪುರದ ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ.!

ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ರಾಜ್ಯ-ರಾಷ್ಟ್ರ ನಾಯಕರೊಂದಿಗೆ ಸೇರಿ ರಾಜ್ಯದ 28 ಕ್ಷೇತ್ರದಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲ್ಲಲು ಎಲ್ಲ ಪ್ರಯತ್ನ ಮಾಡುತ್ತೇನೆ. ನಾನು ಲೋಕಸಭೆ ಸ್ಪರ್ಧೆ ಮಾಡಬೇಕು ಎನ್ನುವ ಕೂಗು ಪಕ್ಷದಲ್ಲಿ ಇಲ್ಲ. ಗಾಳಿ ಸುದ್ದಿಗಳನ್ನು ಮಾಧ್ಯಮ ಮಿತ್ರರು ನಂಬಬಾರದು. ಸದ್ಯ ನಡೆಯುತ್ತಿರುವ ಮಾದಿಗರ ಆತ್ಮಗೌರವ ಸಮಾವೇಶ. ಇದೊಂದು ಸಾಮಾಜಿಕ ನ್ಯಾಯದ ಹೋರಾಟ, ಜನರ ಎಚ್ಚರಿಸುವ ಕೆಲಸ ಇದಕ್ಕೂ ಲೋಕಸಭಾ ಚುನಾವಣೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆರ್.ಎಸ್.ಎಸ್ ವಿರುದ್ಧ ಕಾಂಗ್ರೆಸ್ ನಾಯಕ ಹರಿಪ್ರಸಾದ ಆರೋಪ ಕುರಿತು ಪ್ರತಿಕ್ರೀಯೆ ನೀಡಿದ ಗೊಂವಿದ ಕಾರಜೋಳ ಅವರು, ಕಾಂಗ್ರೆಸ್ ನಾಯಕ ಹರಿಪ್ರಸಾದ ಬಗ್ಗೆ ಹಗುರವಾಗಿ ಮಾತನಾಡಲು ಇಷ್ಟಪಡಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಸ್ವಾತಂತ್ರ್ಯ ಯೋಧರ ಬಗ್ಗೆ ತಿಳಿದುಕೊಂಡು ಹರಿಪ್ರಸಾದ ಮಾತನಾಡಲಿ, ದೇಶ ಇತಿಹಾಸ ಬಗ್ಗೆ ತಿಳಿದುಕೊಂಡು ಮಾತನಾಡುವುದು ಒಳ್ಳೆಯದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ