ಕನ್ನಡಪ್ರಭ ವಾರ್ತೆ ದೇವನಹಳ್ಳಿ
ಪಟ್ಟಣದ ಕನಕ ಭವನದಲ್ಲಿ ಕುರುಬರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೨೦೧೩ರಿಂದ ೨೦೨೮ರವರೆವಿಗೂ ಹಾಗೂ ೨೦೨೩ರಿಂದ ಈವರೆವಿಗೂ ಕಾಂಗ್ರಸ್ ಪಕ್ಷದಿಂದ ಗೆದ್ದು ಜಾತ್ಯಾತೀತ ಧರ್ಮಾತೀತವಾಗಿ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸುತ್ತಾ ಪಂಚ ಗ್ಯಾರಂಟಿಗಳನ್ನು ನುಡಿದಂತೆ ಜಾರಿ ಮಾಡಿ ನುಡಿದಂತೆ ನಡೆಯುತ್ತಿರುವ ಸಿದ್ದರಾಮಣ್ಣನವರು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ದುಡಿಯುತ್ತಿರುವ ಅಗ್ರಗಣ್ಯರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಅಗ್ರಗಣ್ಯರಾದರೂ ಸಹ ಅವರಿಗೆ ಇನ್ನೂ ವಯಸ್ಸಿದೆ. ಮುಂದೆ ಅವಕಾಶವಿದೆ. ಅವರು ಸಹ ಮುಖ್ಯಮಂತ್ರಿಯಾಗಲು ಅರ್ಹರಿದ್ದಾರೆ. ಆದರೆ ಈಗ ಸಕಾಲವಲ್ಲ ಈ ಐದು ವರ್ಷ ಸಂಪೂರ್ಣ ಅವಧಿ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿದು ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಬೇಕು. ೨೦೨೮ಕ್ಕೆ ಮತ್ತೆ ಕಾಂಗ್ರೆಸ್ ಆಡಳಿತ ಬರಲಿದ್ದು ಆಗ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ, ಈಗ ವಿನಾಕಾರಣ ಅವರನ್ನು ಬದಲಿಸುವ ಯಾವುದೇ ಹುನ್ನಾರಕ್ಕೆ ವರಿಷ್ಠರು ಗಮನ ಹರಿಸಬಾರದು ಎಂದು ಹೇಳಿದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಎಸ್.ಕೆ.ಕೋದಂಡರಾಮಯ್ಯ ಮಾತನಾಡಿ, ಶೇಕಡ ೮೦೫ ಇರುವ ಹಿಂದುಳಿದ ವರ್ಗಗಳ ಆಶಾಕಿರಣ ಸಿದ್ದರಾಮಯ್ಯನವರು ಇನ್ನೂ ಎರಡೂವರೆ ವರ್ಷ ಮುಂದುವರಿಯಲೇಬೇಕು. ರಾಜ್ಯದಲ್ಲಿ ಹಬ್ಬಿರುವ ಬದಲಾವಣೆಯ ಕೂಗಿಗೆ ಹೈಕಮಾಂಡ್ ಪೂರ್ಣ ವಿರಾಮ ಹಾಕಬೇಕು ಎಂದು ಹೇಳಿದರು.ಸಭೆಯಲ್ಲಿ ಕುರುಬರ ಸಂಘದ ತಾಲೂಕು ಅಧ್ಯಕ್ಷ ಎಸ್.ಕೆ.ಕೋದಂಡರಾಮಯ್ಯ, ಉಪಾಧ್ಯಕ್ಷ ಬರ್ಮ ಮುನಿರಾಜು, ಆನಂದ್, ತಾಲೂಕು ನಿದೇರ್ಶಕ ಮುನಿರಾಜು, ರಾಜ್ಯ ನಿದೇರ್ಶಕರಾದ ಕೇಶವಮೂರ್ತಿ, ಮಂಜುಳಾ, ಮಾಜಿ ನಿರ್ದೇಶಕಿ ಭಾಗ್ಯ ರಮೇಶ್, ದೇವನಹಳ್ಳಿ ತಾಲೂಕು ಕಾರ್ಯದರ್ಶಿ ತಿಲಕ್, ಮಾಜಿ ಪ್ರದಾನ ಕಾರ್ಯದರ್ಶಿ ಸಿ.ಮುನಿರಾಜು, ನೆಲಮಂಗಲ ತಾಲುಕು ಕಾಐದರ್ಶಿ ಗಂಗರಾಜು, ಗ್ರಾಮಾಂತರ ಜಿಲ್ಲಾ ಯುವಕ ಸಂಘದ ಕಾರ್ಯದರ್ಶಿ ರವಿ, ಯುವ ಸಂಘದ ಮಂಜುನಾಥ್, ಮಾಜಿ ತಾಲೂಕು ಉಪಾಧ್ಯಕ್ಷ ನಾರಾಯಣಸ್ವಾಮಿ, ಮಾದೇಶ, ವಕೀಲರಾದ ರಮೇಶ್ ಇತರರಿದ್ದರು.