ಸಮಾಜದ ಏಳಿಗೆಗೆ ಕೆರೆಕಟ್ಟೆ ನಿರ್ಮಿಸಿದ ಮಹಾಪುರಷ ಸಿದ್ದರಾಮೇಶ್ವರರು: ನರಸಿಂಹಮೂರ್ತಿ

KannadaprabhaNewsNetwork |  
Published : Jan 18, 2024, 02:02 AM IST
ಕೊರಟಗೆರೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ. | Kannada Prabha

ಸಾರಾಂಶ

ಕೊರಟಗೆರೆ ತಾಲೂಕು ಆಡಳಿತ ವತಿಯಿಂದ ಸಿದ್ಧರಾಮೇಶ್ವರ ಜಯಂತಿ ಆಚರಣೆ

ಕೊರಟಗೆರೆ: ವೈಜ್ಞಾನಿಕತೆಗೆ ಮನುಷ್ಯ ಬರುವ ಮುನ್ನವೇ ಸಮಾಜದ ಏಳಿಗೆಗಾಗಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರು ನಿರ್ಮಿಸಿರುವ ಅನೇಕ ಕೆರೆಕಟ್ಟೆಗಳನ್ನು ಇಂದಿನ ತಂತ್ರಜ್ಞಾನಕ್ಕೆ ಸವಾಲಾಗಿ ನಿಂತಿದ್ದು, ತಾವು ನಿರ್ಮಿಸಿದ ಕೆರೆಕಟ್ಟೆಗಳಿಂದ ಎಲ್ಲಾ ವರ್ಗದವರು ನೀರನ್ನು ಸಮಪಾಲು ಪಡೆಯುವಂತಾ ವ್ಯವಸ್ಥೆಯನ್ನು ಕಲ್ಪಿಸಿದ ಕಾಯಕಯೋಗಿ ಸಿದ್ಧರಾಮೇಶ್ವರರು ಎಂದು ಗ್ರೇಡ್ 2 ತಹಶೀಲ್ದಾರ್ ನರಸಿಂಹಮೂರ್ತಿ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಪೂರ್ಣ ಕಾಯಕ ನಿರ್ವಹಣೆ ಸಾಧನೆ ಸಿದ್ದಿಗಳಿಗೆ, ಮಾನವೀಯ ಮೌಲ್ಯಗಳಿಗೆ ಜಾತಿ, ಮತ, ಕುಲ, ಧರ್ಮಗಳು ಅಡ್ಡಿಯಾಗಬಾರದೆಂದು ದಿವ್ಯ ಸಂದೇಶವನ್ನು 12ನೇ ಶತಮಾನದಲ್ಲಿ ಸಮಾಜಕ್ಕೆ ಸಾರಿದ ಕಾಯಕಯೋಗಿ ಸಿದ್ಧರಾಮೇಶ್ವರರು ಸಮಾಜೋದ್ಧಾರ ಮಂತ್ರವನ್ನು ಮೂಲವಾಗಿಸಿಕೊಂಡು ಶೋಷಣೆ, ಅಸಮಾನತೆ ತೊಲಗಿಸಿ, ಸ್ತ್ರೀಯರಿಗೆ ಸಮಾನತೆ ದೊರಿಕಿಸಿಕೊಟ್ಟರು ಎಂದು ತಿಳಿಸಿದರು.

ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ದೊಡ್ಡರಾಮಯ್ಯ ಮಾತನಾಡಿ, ಸಿದ್ಧರಾಮೇಶ್ವರರು ಸಮಾಜದ ಅಭಿವೃದ್ಧಿಗಾಗಿ ನಾಡಿನಲ್ಲೆಡೆ ಸಂಚರಿಸಿ ಅನುಭವದ ಪರಿಚಯವನ್ನು ಮಾಡಿಕೊಟ್ಟು ಮೌಢ್ಯಗಳನ್ನು ತೊಡೆದುಹಾಕಲು ಹೋರಾಡಿದ ಅವರು ತಮ್ಮ ಜ್ಞಾನದ ಬಲದಿಂದ ಸಮಾಸಮಾಜವನ್ನು ಕಟ್ಟಲು ಪ್ರಯತ್ನಿಸಿ ರೈತರು, ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಕೆರೆಕಟ್ಟೆಗಳನ್ನು ನಿರ್ಮಿಸಿ ಇಂದಿನ ಸಮಾಜಕ್ಕೆ ಮಾದರಿಯಾಗಿರುವ ಸಿದ್ಧರಾಮೇಶ್ವರರು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ, ಎಲ್ಲಾ ಸಮುದಾಯದ ಏಳಿಗೆಗೆ ಶ್ರಮಿಸಿದ ಮಹಾನ್ ಸಂತರಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರದಲ್ಲಿ ತಾಲೂಕು ಭೋವಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಶ್ವತ್ತಪ್ಪ, ಗೌರವಾಧ್ಯಕ್ಷ ಹಾಗೂ ತಾ.ಪಂ.ಮಾಜಿ ಸದಸ್ಯ ವೆಂಕಟಪ್ಪ, ಉಪಾಧ್ಯಕ್ಷ ಯಲ್ಲಪ್ಪ, ಪಿ.ಸಿ.ನಾರಾಯಣ್, ಖಜಾಂಚಿ ಕೆ. ರಾಜು. ನಿರ್ದೇಶಕರಾದ ಬಿ.ಆರ್‌. ಮಂಜುನಾಥ್, ಕೆಂಪರಾಜ್, ಹನುಮಂತರಾಯಪ್ಪ, ರಾಮಯ್ಯ, ಎ.ಡಿ.ಎಲ್.ಆರ್‌. ಮಹೇಶ್, ಪಶುಇಲಾಖೆಯ ಎಚ್.ಎಸ್. ಪ್ರಕಾಶ್, ಬಿಇಒ ಕಚೇರಿಯ ಕಾಮರಾಜು, ಅರಣ್ಯ ಇಲಾಖೆಯ ನಾಗರಾಜು, ಕಂದಾಯಇಲಾಖೆಯ ನಕುಲ್, ಅನ್ನಪೂರ್ಣಮ್ಮ, ಶಾಂತಮ್ಮ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ