ಸಿದ್ದೇಶ್ವರ ಶ್ರೀಗಳು ಸರಳತೆಯ ಸಾಕಾರ ಮೂರ್ತಿಗಳು

KannadaprabhaNewsNetwork |  
Published : Jan 03, 2025, 12:33 AM IST
ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿರುವ ಜ್ಞಾನಯೋಗಾಶ್ರಮದಲ್ಲಿ ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಸಿದ್ದೇಶ್ವರ ಶ್ರೀಗಳು ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗ ರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು. ಅವರ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವವಾಗಿದೆ.

ಹುಬ್ಬಳ್ಳಿ:

ಸಿದ್ದೇಶ್ವರ ಶ್ರೀಗಳು ಸರಳತೆಯ ಸಾಕಾರ ಮೂರ್ತಿಗಳು. ದ್ವೇಷ, ಅಹಂಕಾರದಿಂದ ಬಿಡುಗಡೆ ಹೊಂದಿದ ಅತ್ಯುನ್ನತ ಮನುಷ್ಯತ್ವದ ಸೃಷ್ಟಿಗೆ ಶ್ರಮಿಸಿದವರು. ಇವರ ಬದುಕು ಮತ್ತು ಸಾಧನೆ ವರ್ಣಿಸಲು ಪದಗಳೇ ಇಲ್ಲ ಎಂದು ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ಹೇಳಿದರು.

ತಾಲೂಕಿನ ವರೂರು ಗ್ರಾಮದಲ್ಲಿರುವ ಜ್ಞಾನಯೋಗಾಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಂದಿನ ಗುರುನಮನ ಮಹೋತ್ಸವದೊಳಗೆ ಗ್ರಾಮದಲ್ಲಿ ಸುಸರ್ಜಿತವಾಗಿರುವ ಸಿದ್ದೇಶ್ವರ ಜ್ಞಾನ ಯೋಗಶ್ರಮ ಕಟ್ಟಡ ನಿರ್ಮಾಣವಾಗಲಿ. ಅದಕ್ಕೆ ಬೇಕಾದ ಸಹಾಯ-ಸಹಕಾರದ ಭರವಸೆ ನೀಡಿದರು.

ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಂ.ಕೆ. ನಾಯ್ಕರ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗ ರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು. ಅವರ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವವಾಗಿದೆ ಎಂದು ಹೇಳಿದರು.

ಈ ವೇಳೆ ವಿ.ಎಫ್. ಪಾಟೀಲ, ಎಚ್.ವೈ. ಬಡಿಗೇರ, ಶೇಖರಯ್ಯ ಹಿರೇಮಠ, ನಾಗನಗೌಡ ಸಿದ್ದನಗೌಡ್ರ, ಜಗನ್ನಾಥಗೌಡ ಸಿದ್ದನಗೌಡ್ರ, ಬಾಬಣ್ಣ ನವಲಗುಂದ, ಜಗದೀಶ ಹಿರೇಮಠ, ಶ್ರೀಪಾಲ್ ಬಸ್ತಿ, ಅಶೋಕ ಮರಿಹಾಳ, ಸೋಮನಗೌಡ ಪಾಟೀಲ, ಮನೋಹರ್ ಮಿಸ್ಕಿನ್, ಚನ್ನಬಸಗೌಡ ಹನುಮಂತ ಗೌಡ್ರ, ಅಶೋಕ ಹುಲಗೂರು, ಯಲ್ಲಪ್ಪ ಹುಬ್ಬಳ್ಳಿ, ಶಿವಪ್ಪ ನೂಲ್ವಿ, ಯಲ್ಲಪ್ಪ ನೇರ್ತಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!