ಭಾವೈಕ್ಯತೆ ಸಾರಿದ ತೋಂಟದ ಸಿದ್ಧಲಿಂಗ ಶ್ರೀ

KannadaprabhaNewsNetwork |  
Published : Feb 23, 2025, 12:33 AM IST
ಜಮಖಂಡಿ ತಾಲುಕಿನ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ತ್ರಿವಿಧ ದಾಸೋಹಿ, ಕನ್ನಡದ ಕುಲಗುರು ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ 76 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಜಕನೂರ ಸಿದ್ಧಾಶ್ರಮದ ಡಾ. ಮಾದುಲಿಂಗ ಮಹಾರಾಜರು ಮಾತನಾಡಿದರು. | Kannada Prabha

ಸಾರಾಂಶ

ಗದುಗಿನ ತೊಂಟದ ಸಿದ್ಧಲಿಂಗ ಸ್ವಾಮೀಜಿ ಭಾವೈಕ್ಯತೆ ಸಾರಿದ ಮಹಾನ್‌ ಸಂತರು ಎಂದು ಜಕನೂರ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಡಾ.ಮಾದುಲಿಂಗ ಶ್ರೀಗಳು ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಗದುಗಿನ ತೊಂಟದ ಸಿದ್ಧಲಿಂಗ ಶ್ರೀಗಳು ಭಾವೈಕ್ಯತೆ ಸಾರಿದ ಮಹಾನ್‌ ಸಂತರು ಎಂದು ಜಕನೂರ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಡಾ.ಮಾದುಲಿಂಗ ಶ್ರೀಗಳು ಬಣ್ಣಿಸಿದರು. ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಅಂಗ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಲಿಂ.ಡಾ.ತೋಂಟದ ಸಿದ್ಧಲಿಂಗ ಶ್ರೀಗಳ 76ನೇ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಭಾವೈಕ್ಯತಾ ದಿನಾಚರಣೆ ಹಾಗೂ ಐದು, ಏಳು ಮತ್ತು ಹತ್ತನೇ ತರಗತಿ ಮಕ್ಕಳ ಬೀಳ್ಕೊಡುವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಿದ್ದಲಿಂಗ ಶ್ರೀಗಳು ನುಡಿ ಸಂಸ್ಕೃತಿಯ ಪರಿಪಾಲಕರಾಗಿದ್ದಾರೆ. ಪೂಜ್ಯರ ಚರಿತ್ರೆ ಪರಮ ಪವಿತ್ರ. ಮಾತೃ ಹೃದಯಿಗಳಾಗಿದ್ದರು. ಜಾತಿ, ಮತ, ಪಂಥದ ಗರಿಮೆಯೇ ಇಲ್ಲ ಎಂಬುದಕ್ಕೆ ಶ್ರೀಗಳ ತತ್ವಾದರ್ಶಗಳು ಸಾಕ್ಷಿಯಾಗಿವೆ. ಪೂಜ್ಯರ ಬದುಕೇ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಮಾತನಾಡಿ, ಮಕ್ಕಳು ಬದುಕಿನ ಮೌಲ್ಯ ಕಟ್ಟಿಕೊಳ್ಳಲು ತೋಂಟದ ಸಿದ್ಧಲಿಂಗ ಶ್ರೀಗಳು ಸಂಸ್ಥೆ ತೆರೆದಿದ್ದಾರೆ. ಶ್ರೀಗಳು ಶಿಕ್ಷಣ ಸಂಸ್ಕೃತಿ ಮೇಲೆ ತೋರಿದ ಕಳಕಳಿ ಮಕ್ಕಳು ಸಾರ್ಥಕ ಪಡಿಸಿಕೊಂಡು ಜೀವನದ ದಾರಿಯಲ್ಲಿ ಯಶಸ್ಸು ಕಾಣಬೇಕು ಎಂದು ಹೇಳಿದರು.

ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಸಹಾಯಕ ಬುಡೆಸಾಬ ಗೆಣ್ಣೂರ, ಚಿಕ್ಕಪಡಸಲಗಿ ಎಂ.ಎಂ. ಐಟಿಐ ಕಾಲೇಜಿನ ಪ್ರಾಂಶುಪಾಲ ರಾಯಪ್ಪ ಸಣಮನಿ, ನಾಗನೂರ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಭೀಮು ಬಡಿಗೇರ, ಆಲಗೂರ ತೋಟದ ಸರ್ಕಾರಿ ಎಚ್.ಪಿ.ಎಸ್. ಶಾಲೆ ಮುಖ್ಯ ಶಿಕ್ಷಕ ಬಾಹುಬಲಿ ಬೀಸಳಗಿ, ಕವಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಅನಿತಾ ಗೋರಕಲ್, ಆಲಗೂರ ಶಾಂತಿನಾಥ ಎಚ್.ಪಿ.ಎಸ್. ಶಾಲೆ ಮುಖ್ಯ ಶಿಕ್ಷಕಿ ಚೌಗಲಾ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಎಸ್. ಅರಬಳ್ಳಿ, ಜಿ.ಎಸ್. ಬಾಳೆಕುಂದ್ರಿ, ಮುಖ್ಯಶಿಕ್ಷಕಿ ಮಾಲಾ ಕಲ್ಯಾಣಿ ಇತರರು ವೇದಿಕೆಯಲ್ಲಿದ್ದರು.

ಪ್ಪಭಾರಿ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಅವರ ಉಸ್ತುವಾರಿಯಲ್ಲಿ ನಡೆದ ಸಮಾರಂಭದಲ್ಲಿ ಹಣಮಂತ ಗದಿಗೆಪ್ಪಗೋಳ, ಸುರೇಶ ಸಂತಿ, ಲೋಹಿತ ಮಿರ್ಜಿ, ಗುಲಾಬಚಂದ ಜಾಧವ, ಶ್ರೀಶೈಲ ಹುಣಶಿಕಟ್ಟಿ, ಕುಮಾರ ವಾಣಿ, ಸದಾಶಿವ ಹೊಸಮನಿ, ಸದಾಶಿವ ಬೋದ್ಲಿ, ಮಲ್ಲಯ್ಯ ಮಠಪತಿ, ಸಹನಾ ಹತ್ತಳ್ಳಿ (ಕಲ್ಯಾಣಿ), ಶ್ರುತಿ ಲಿಗಾಡೆ, ಶೋಭಾ ಹಿರೇಮಠ, ಸುನಂದಾ ಬಬಲಾದಿಮಠ, ಭಾಗ್ಯಶ್ರೀ ವಿಭೂತಿಮಠ, ಚಂಪಾ ದಯಗೊಂಡ, ರೇಶ್ಮಾ ಕನಾಳ, ರೇಣುಕಾ ಲಾಳಸಂಗಿ, ಅಶ್ವಿನಿ ಕಲ್ಯಾಣಿ, ಪೂಜಾ ಜಾಡರ, ಶಾಂತಾ ರೋಣಿಹಾಳ, ಲಕ್ಕವ್ವ ಸನದಿ, ಮಾಲಾ ಯಣಗಾಯಿ, ಶಾಯಿನ್ ಗೆಣ್ಣೂರ, ಕಸ್ತೂರಿ ಪಟ್ಚಣಶೆಟ್ಟಿ ಇತತರು ಇದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು