ಕನ್ನಡಪ್ರಭ ವಾರ್ತೆ ವಿಜಯಪುರ
ಶಾಸ್ತ್ರಬದ್ಧವಾಗಿ ಸಜ್ಜುಗೊಂಡ ಮದುವೆ ಮಂಟಪದಲ್ಲಿ ಸಿದ್ದರಾಮನ ಕುಂಬಾರ ಕನ್ನೆಯೊಬ್ಬಳ ಮೂರ್ತಿಗಳು ಮದುವೆ ಮಕ್ಕಳಾಗಿದ್ದರು. ಶಿವಯೋಗಿಯ ಯೋಗ ದಂಡದೊಂದಿಗೆ ವಿವಾಹ ಸಾಂಕೇತಿಸಲು ಸಾಲಂಕ್ರುತಗೊಂಡ 7 ನಂದಿಕೋಲುಗಳು ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಉತ್ಸವ ಮೂರ್ತಿಯು ಮನಸೂರೆಗೊಂಡವು. ಸಂಪ್ರದಾಯದಂತೆ ವಿಜಯಪುರ ನಗರ ಶಾಸಕರಾದ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ನೇತೃತ್ವ ವಹಿಸಿದ್ದರು.
ಅಕ್ಷತೆಯ ಕಾರ್ಯಕ್ರಮದ ವಿದಿ ವಿಧಾನದಂತೆ ನೆರೆವೇರಿತು. ಹೆಣ್ಣು ಮಕ್ಕಳಿಗೆ ಅರಿಶಿಣ, ಕುಂಕುಮ ನೀಡಲಾಯಿತು.ಕಾರ್ಯಕ್ರಮವನ್ನು ವೇದಮೂರ್ತಿ ಮುರಗಯ್ಯಾ ಗಚ್ಚಿನಮಠ ನೆರೆವೇರಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿದ್ಧೇಶ್ವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.
ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ, ಚೇರಮನ್ ಬಸಯ್ಯಾ ಹಿರೇಮಠ, ಪದಾಧಿಕಾರಿಗಳಾದ ಬಿ.ಎಸ್.ಸುಗೂರ, ಸದಾನಂದ ದೇಸಾಯಿ, ಶಿವಾನಂದ ನೀಲಾ, ಗುರು ಗಚ್ಚಿನಮಠ, ಅಮೃತ ತೋಸನಿವಾಲ, ಪ್ರೇಮಾನಂದ ಬಿರಾದಾರ, ರಾಹುಲ ಜಾಧವ, ಪಾಂಡು ಸಾಹುಕಾರ ದೊಡಮನಿ, ಚಂದ್ರು ಚೌಧರಿ, ಮುಂತಾದ ಪ್ರಮುಖರು ಹಾಗೂ ಭಕ್ತಾದಿಗಳು ಹಾಜರಿದ್ದರು.ಮಹಾಪ್ರಸಾದ ಸೇವೆಯನ್ನು ಅರುಣ ಹುಂಡೆಕಾರ ನೇರೆವೆರಿಸಿದರು. ಜನೇವರಿ 14ರಂದು ಮಧ್ಯಾಹ್ನ 12.30ಕ್ಕೆ ನಂದಿ ಧ್ವಜಗಳಿಗೆ ಪೂಜೆ ಹಾಗೂ ಹೋಮ-ಹವನ ಕಾರ್ಯಕ್ರಮ ಜರುಗಲಿದೆ.