ಡಿ.೧ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ: ಎಚ್‌.ಶಿವರಾಮು

KannadaprabhaNewsNetwork |  
Published : Nov 21, 2026, 01:30 AM IST
೨೦ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಹಲ್ಲೇಗೆರೆ ಶಿವರಾಮು ಮಾತನಾಡಿದರು. | Kannada Prabha

ಸಾರಾಂಶ

ಕೇಂದ್ರ-ರಾಜ್ಯ ಸರ್ಕಾರಗಳಿಂದ ರೈತರಿಗೆ ಆಗುತ್ತಿರುವ ತಾರತಮ್ಯ, ಎಲ್ಲಾ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ, ಪ್ರಮುಖವಾಗಿ ಎಲ್ಲಾ ಬೆಳೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಲೆ ನಿಗದಿ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತಸಂಘ, ಹಸಿರು ಸೇನೆ ತಾಲೂಕು ಘಟಕದಿಂದ ಡಿ.೧ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ-ರಾಜ್ಯ ಸರ್ಕಾರಗಳಿಂದ ರೈತರಿಗೆ ಆಗುತ್ತಿರುವ ತಾರತಮ್ಯ, ಎಲ್ಲಾ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ, ಪ್ರಮುಖವಾಗಿ ಎಲ್ಲಾ ಬೆಳೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಲೆ ನಿಗದಿ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತಸಂಘ, ಹಸಿರು ಸೇನೆ ತಾಲೂಕು ಘಟಕದಿಂದ ಡಿ.೧ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಮ್ಮಿಕೊಂಡಿರುವುದಾಗಿ ಅಧ್ಯಕ್ಷ ಎಚ್.ಶಿವರಾಮು ಹೇಳಿದರು.

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮುತ್ತಿಗೆ ಕಾರ್ಯಕ್ರಮದ ನೇತೃತ್ವ ವಹಿಸುವರು. ಟನ್ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಲ್ಲಿ ನಿರಂತರವಾಗಿ ರೈತರಿಗೆ ಅನ್ಯಾಯ ಮಾಡಿಕೊಂಡು ಬಂದಿವೆ. ಬೆಲೆ ನಿಗದಿಯಲ್ಲಿ ಉತ್ತರ-ದಕ್ಷಿಣ ಕರ್ನಾಟಕವೆಂದು ತಾರತಮ್ಯ ಮಾಡುತ್ತಿರುವುದಕ್ಕೆ ಸುದ್ದಿಗೋಷ್ಠಿಯಲ್ಲಿ ವಿರೋಧ ವ್ಯಕ್ತಪಡಿಸಿದರು.

ಪ್ರತಿ ಟನ್ ಕಬ್ಬಿಗೆ ೧ ಸಾವಿರ ರು. ಹಣವನ್ನು ರೈತರಿಗೆ ಕೊಟ್ಟರೆ ೬ ಸಾವಿರ ಕೋಟಿ ರು. ಆಗುತ್ತದೆ. ಇದನ್ನು ಒಂದು ಗ್ಯಾರಂಟಿ ಎಂದು ಘೋಷಣೆ ಮಾಡಿದರೆ ರಾಜ್ಯ ಸರ್ಕಾರಕ್ಕೆ ಪ್ರತಿ ಟನ್ ಕಬ್ಬಿಗೆ ತೆರಿಗೆ ರೂಪದಲ್ಲಿ ೧೦ ಸಾವಿರ ಕೋಟಿ ರು. ಕಬ್ಬು ಬೆಳೆಯಿಂದಲೇ ಬರುತತದೆ. ಇದರಿಂದ ಇನ್ನೂ ೪ ಸಾವಿರ ಕೋಟಿ ರು. ಸರ್ಕಾರಕ್ಕೇ ಉಳಿಯುತ್ತದೆ ಎಂದರು.

ಸಕ್ಕರೆ ಕಾರ್ಖಾನೆಗಳ ಮಾಲೀಕರು ನಷ್ಟ ಎಂದು ಹೇಳಿಕೊಂಡೇ ಹೊಸ ಹೊಸ ಸಕ್ಕರೆ ಕಾರ್ಖಾನೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಇಳುವರಿ ನೆಪದಲ್ಲಿ ಮೋಸ ಮಾಡುತ್ತಿದ್ದಾರೆ. ದಕ್ಷಿಣ ಕರ್ನಾಟಕದ ಕಬ್ಬನ್ನು ಶೇ.೮.೫ ರಿಂದ ಶೇ.೯.೫ಕ್ಕೆ ಇಳುವರಿನ್ನು ಸೀಮಿತಗೊಳಿಸಿದ್ದಾರೆ. ಕೇಂದ್ರಸರ್ಕಾರ ಶೇ.೯.೫ಕ್ಕೆ ನಿಗದಿ ಮಾಡುತ್ತಿದ್ದ ಎಫ್‌ಆರ್‌ಪಿ ದರವನ್ನು ಶೇ.೧೦.೫ಕ್ಕೆ ಏರಿಸಿದೆ. ಇದನ್ನು ರಾಜ್ಯಸರ್ಕಾರ ಪ್ರಶ್ನೆ ಮಾಡುವುದಿಲ್ಲ. ಏಕೆಂದರೆ ಸಕ್ಕರೆ ಕಂಪನಿ ಮಾಲೀಕರೇ ಶಾಸಕರು, ಸಂಸದರು, ಮಂತ್ರಿಗಳಾಗಿರುವುದರಿಂದ ಅವರೆಲ್ಲರೂ ರೈತರಿಗೆ ಮೋಸ ಮಾಡಿ ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ಈಗಾಗಲೇ ಉತ್ತರ ಕರ್ನಾಟಕದ ರೈತರು ಎಚ್ಚೆತ್ತಿದ್ದಾರೆ. ದಕ್ಷಿಣ ಕರ್ನಾಟಕದ ರೈತರೂ ಎಚ್ಚೆತ್ತುಕೊಂಡು ಜನಪ್ರತಿನಿಧಿಗಳ ಮನೆಗೆ ಮುತ್ತಿಗೆ ಹಾಕುವ ದಿನಗಳೂ ದೂರವಿಲ್ಲ ಎಂದು ಎಚ್ಚರಿಸಿದ ಅವರು, ಯುವ ರೈತರು ನಿಮ್ಮ ಬದುಕಿನ ರಕ್ಷಣೆಗಾಗಿ ಹೋರಾಟಕ್ಕೆ ಸಜ್ಜಾಗಬೇಕಿದೆ. ಬೆಳೆಗಳಿಗೆ ಬೆಲೆ ನಿಗದಿಪಡಿಸುವ ಅಧಿಕಾರ, ಕಬ್ಬಿಗೆ ವೈಜ್ಞಾನಿಕ ಬೆಲೆ ಪಡೆಯುವುದಕ್ಕೆ ಎಲ್ಲರೂ ಟೊಂಕಕಟ್ಟಿ ನಿಲ್ಲಬೇಕಿದೆ ಎಂದರು.

ಕೇಂದ್ರದಲ್ಲಿ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸುವರ್ಣಾವಕಾಶವಿದೆ. ಪ್ರಸ್ತುತ ಪೆಟ್ರೋಲ್‌ಗೆ ಎಥೆನಾಲ್‌ನ್ನು ಮಿಶ್ರಣ ಮಾಡಲಾಗುತ್ತಿದೆ. ಆದರೂ ಪೆಟ್ರೋಲ್ ಹಾಗೂ ಎಥೆನಾಲ್‌ಗೂ ಒಂದೇ ಬೆಲೆಯನ್ನು ಪಡೆಯಲಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರವಿರುವಾಗಲೇ ಎಥೆನಾಲ್‌ನ ಸಣ್ಣ ಪ್ರಮಾಣದ ಘಟಕಗಳನ್ನು ಪ್ರಾರಂಭಿಸಲು ಅನುಮತಿ ದೊರಕಿಸಬೇಕು. ಕೇಂದ್ರ ಮತ್ತು ರಾಜ್ಯಸರ್ಕಾರಗಳು ಅಬಕಾರಿ ನೀತಿಯನ್ನು ಬದಲಾವಣೆ ಮಾಡಿ ರೈತರು ಬೆಳೆದ ಉತ್ಪನ್ನಗಳಿಂದಲೇ ವೈನ್, ರಮ್, ಜಿನ್, ಬಿಯರ್ ಉತ್ಪಾದನಾ ಘಟಕಗಳನ್ನು ಸಣ್ಣ ಪ್ರಮಾಣದಲ್ಲಿ ರೈತರೇ ಪ್ರಾರಂಭಿಸುವುದಕ್ಕೆ ನೆರವಾಗಬೇಕು. ಇದರಿಂದ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ರೈತರ ಆದಾಯವೂ ಹೆಚ್ಚಾಗಲಿದೆ ಎಂದು ಸಲಹೆ ನೀಡಿದರು.

ಗೋಷ್ಠಿಯಲ್ಲಿ ಶಿವಳ್ಳಿ ಚಂದ್ರಶೇಖರ್, ಜವರೇಗೌಡ, ನಾಗರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ