ರಾಮನಗರ: ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾ ಪ್ರಕರಣಗಳು ಈ ಬಾರಿ ಗಣನೀಯವಾಗಿ ಇಳಿಕೆಯಾಗಿವೆ.
ಜಿಲ್ಲೆಯಲ್ಲಿ 2021 ಮತ್ತು 2022ನೇ ಸಾಲಿನಲ್ಲಿ ತಲಾ 2 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದರೆ, 2023ರಲ್ಲಿ ಇದೇ ಅವಧಿಗೆ 11 ಪ್ರಕರಣಗಳು ಇತ್ತು. ಈ ವರ್ಷದಲ್ಲಿ ಒಂದು ಪ್ರಕರಣವೂ ಪತ್ತೆಯಾಗಿಲ್ಲ.
2023ರ ವಿಧಾನಸಭಾ ಚುನಾವಣೆ ವೇಳೆ ಸ್ಟ್ರಾಂಗ್ ರೂಮ್ ನ ಭದ್ರತೆಗಾಗಿ ಸಿಆರ್ ಪಿಎಫ್ ನ 1300 ಸಿಬ್ಬಂದಿ ನಿಯೋಜನೆಗೊಂಡಿದ್ದರು. ಅವರೆಲ್ಲರ ರಕ್ತದ ಮಾದರಿ ಪರೀಕ್ಷಿಸಿದಾಗ 4 ಮಂದಿಯಲ್ಲಿ ಮಲೇರಿಯಾ ಪತ್ತೆಯಾಗಿತ್ತು. ಆನಂತರ ಬಿಹಾರ, ಜಾರ್ಖಂಡ್ , ಉತ್ತರ ಪ್ರದೇಶದಿಂದ ಬಂದಿದ್ದ 7 ಮಂದಿ ವಲಸೆ ಕಾರ್ಮಿಕರಲ್ಲಿಯೂ ಮಲೇರಿಯಾ ಕಂಡು ಬಂದಿತ್ತು. ಅವರೆಲ್ಲರು ರಾಮನಗರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾದರು.44 ಡೆಂಘೀ ಪ್ರಕರಣಗಳು ಪತ್ತೆ :
2021ರಲ್ಲಿ 406 ಜನರ ರಕ್ತದ ಮಾದರಿ ಪರೀಕ್ಷಿಸಿದಾಗ 41, 2022ರಲ್ಲಿ 2364 ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಿದಾಗ 158 ಹಾಗೂ 2023ರಲ್ಲಿ 2395 ಜನರ ರಕ್ತದ ಮಾದರಿ ಪರೀಕ್ಷೆ ವೇಳೆ 128 ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿತ್ತು.
ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್!:
ಸಾಮಾನ್ಯವಾಗಿ ಮಳೆಗಾಲದಲ್ಲಿ ಮಲೇರಿಯಾ, ಡೆಂಘೀ ಪ್ರಕರಣಗಳು ತೀವ್ರಗೊಳ್ಳುತ್ತವೆ. ಆರೋಗ್ಯ ಇಲಾಖೆ ಏಪ್ರಿಲ್ ನಿಂದಲೇ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ ಪರಿಣಾಮ ರೋಗಗಳು ನಿಯಂತ್ರಣಕ್ಕೆ ಬಂದಿವೆ.
ಡೆಂಘೀ, ಮಲೇರಿಯಾ ಮತ್ತಿತರ ರೋಗವಾಹಕ ಆಶ್ರಿತ ರೋಗಗಳ ತಡೆಯುವುದಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ ಜಾರಿಯಲ್ಲಿದೆ. ಈ ಪ್ರಕರಣಗಳು ಪತ್ತೆಯಾಗಬಹುದಾದ ಪ್ರದೇಶಕ್ಕೆ ತೆರಳಿ ಕಟ್ಟಡ ಸ್ಥಳ, ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಇದಕ್ಕಾಗಿ ಆಶಾ ಮತ್ತು ಸ್ವಯಂ ಸೇವಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಸೊಳ್ಳೆಗಳ ನಿಯಂತ್ರಣಕ್ಕೆ ಗಪ್ಪಿ ಮತ್ತು ಗಂಬೂಸಿಯಾ ಮೀನಿನ ಮರಿಗಳನ್ನು ಸಾಕಾಣಿಕೆ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಕೆರೆ ಕಟ್ಟೆ, ಬಾವಿಗಳಲ್ಲಿ ಬಿಡಲಾಗಿದೆ. ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಹಾಗೂ ಡಿಪೋಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅನುಪಯುಕ್ತ ಟೈರು - ಟ್ಯೂಬ್ ಗಳನ್ನು ವಿಲೇವಾರಿ ಮಾಡಿಸಿದ್ದಾರೆ. ಅಲ್ಲದೆ ಗ್ರಾಪಂನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಾಲಾ - ಕಾಲೇಜು ಮಕ್ಕಳು, ಶಿಕ್ಷಕರಲ್ಲಿಯೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಬಾಕ್ಸ್ .............
ಸಾರ್ವಜನಿಕರಿಗೆ ಮುನ್ನೆಚ್ಚರಿಕೆಗಳು:ಹವಾಮಾನ ಬದಲಾವಣೆಯಿಂದ ಸೊಳ್ಳೆ ವೃದ್ಧಿಯಾಗಿ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಮರಳಿ ಕಾಣಿಸಿಕೊಳ್ಳಬಹುದು. ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯ ಜತೆಗೆ ಜನರೂ ಮುನ್ನೆಚ್ಚರಿಕೆ ವಹಿಸಬೇಕು.
-ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ-ಮನೆಯಲ್ಲಿ ಸೊಳ್ಳೆ ಪರದೆ ಅಳವಡಿಸಿ. ಆ ಸೊಳ್ಳೆ ಪರದೆಯನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿ
-ಸೊಳ್ಳೆಗಳು ಒಳಬರದಂತೆ ಸಂಜೆಯಾಗುತ್ತಲೆ ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಳ್ಳಿ.-ದಿನಂಪ್ರತಿ ಸೋಂಕುನಿವಾರಕ ಬಳಸಿ ಮನೆಯ ನೆಲ ಒರಸಲು ಮರೆಯದಿರಿ.
-ಜ್ವರ ಲಕ್ಷಣ 4 ರಿಂದ 5 ದಿನಗಳ ಕಾಲ ಇದ್ದರೆ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಿ.ಕೋಟ್ ................
ರಾಮನಗರ ಜಿಲ್ಲೆಯಲ್ಲಿ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ ಪ್ರಕರಣ ನಿಯಂತ್ರಣದಲ್ಲಿದ್ದು, ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮನೆ ಮನೆಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಸಾಂಕ್ರಾಮಿಕ ರೋಗ ಬಂದರೂ ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಔಷಧ ದಾಸ್ತಾನು ಸಮರ್ಪಕವಾಗಿದ್ದು, ಬೆಡ್‌ಗಳ ಕೊರತೆ ಇಲ್ಲ.- ಡಾ.ಶಶಿಧರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ರಾಮನಗರ
26ಕೆಆರ್ ಎಂಎನ್ 1,2,3.ಜೆಪಿಜಿ1.ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆ ಸರ್ವೆ ಮಾಡುತ್ತಿರುವುದು.
2.ಡಾ.ಶಶಿಧರ್ ಮನೆ ಮನೆ ಭೇಟಿ ವೇಳೆ ಡ್ರಮ್ ನಲ್ಲಿ ಸಂಗ್ರಹಿಸಿದ್ದ ನೀರನ್ನು ಪರಿಕ್ಷೀಸುತ್ತಿರುವುದು.3.ಡಾ.ಶಶಿಧರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ರಾಮನಗರ