ಹೂಳು ತುಂಬಿದ ಹಿರೇಹಳ್ಳ: ಜಮೀನಿಗೆ ನುಗ್ಗುವ ನೀರು, ಹಳ್ಳದ ಹೂಳು ತೆಗೆಸಲು ರೈತರ ಆಗ್ರಹ

KannadaprabhaNewsNetwork |  
Published : Jun 16, 2025, 04:00 AM IST
ಪೊಟೋ ಪೈಲ್ ನೇಮ್ ೧೪ಎಸ್‌ಜಿವಿ೨ ಶಿಗ್ಗಾಂವಿ ತಾಲೂಕಿನ ಹುಲಸೋಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಾನಿಗೊಳಗಾದ ರೈತರ ಭೂಮಿ.೧೪ಎಸ್‌ಜಿವಿ೨-೧ ಶಿಗ್ಗಾಂವಿ ತಾಲೂಕಿನ ಹುಲಸೋಗಿ ಗ್ರಾಮದ ರೈತರ ಅಡಕಿ ಸಸಿ ಗಿಡವನ್ನು ಕಿತ್ತು ಹೊಗುವಂತೆ ಮಳೆ ನಿರಿನಿಂದ ಕೊಚ್ಚಿಹೋಗಿವೆ. | Kannada Prabha

ಸಾರಾಂಶ

ಇತ್ತೀಚೆಗೆ ಸುರಿದ ಮಳೆಗೆ ಮುಂಗಾರಿನ ಬಿತ್ತನೆ ಮಾಡಿದ ನೂರಾರು ಎಕರೆ ಜಮೀನಿನಲ್ಲಿ ನೀರು ನಿಂತಿದೆ. ಹೊಲದ ಮಧ್ಯೆ ಬದುವಿನ ಕಟ್ಟೆಗಳು ಒಡೆದು ಬಿತ್ತಿದ ಬೀಜ ಮೊಳಕೆಯೊಡೆದ ಪೈರು ಮಣ್ಣಿನಲ್ಲಿ ಕೊಚ್ಚಿ ಹೋಗಿವೆ. ಬಿತ್ತಿದ ಜಮೀನು ಬಿತ್ತನೆ ಮಾಡದಂತಾಗಿದೆ.

ಶಿಗ್ಗಾಂವಿ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಹಿರೇಹಳ್ಳ ತುಂಬಿ ಹರಿದಿದ್ದು, ಇದರಿಂದ ಬೆಂಡಿಗೇರಿ, ಬನ್ನೂರ, ಕಬನೂರ, ಬನ್ನಿಕೊಪ್ಪ, ಹಿರೇಮಲ್ಲೂರ, ಚಿಕ್ಕಮಲ್ಲೂರ ಗ್ರಾಮಗಳ ವ್ಯಾಪ್ತಿಯ ನೂರಾರು ಎಕರೆ ಜಮೀನು ಜಲಾವೃತವಾಗಿದೆ.ಇತ್ತೀಚೆಗೆ ಸುರಿದ ಮಳೆಗೆ ಮುಂಗಾರಿನ ಬಿತ್ತನೆ ಮಾಡಿದ ನೂರಾರು ಎಕರೆ ಜಮೀನಿನಲ್ಲಿ ನೀರು ನಿಂತಿದೆ. ಹೊಲದ ಮಧ್ಯೆ ಬದುವಿನ ಕಟ್ಟೆಗಳು ಒಡೆದು ಬಿತ್ತಿದ ಬೀಜ ಮೊಳಕೆಯೊಡೆದ ಪೈರು ಮಣ್ಣಿನಲ್ಲಿ ಕೊಚ್ಚಿ ಹೋಗಿವೆ. ಬಿತ್ತಿದ ಜಮೀನು ಬಿತ್ತನೆ ಮಾಡದಂತಾಗಿದೆ.ತಾಲೂಕಿನ ಬೆಂಡಿಗೇರಿಯಿಂದ ಉಗಮಿಸುವ ಹಳ್ಳವು ಮಾರ್ಗದಲ್ಲಿರುವ ಹತ್ತಾರು ಹಳ್ಳಿಗಳನ್ನು ದಾಟಿ ಸವಣೂರು ತಾಲೂಕಿನ ಗುಂಡೂರಿನ ದೊಡ್ಡ ಹಳ್ಳದ ಮೂಲಕ ವರದಾ ನದಿಗೆ ಸೇರುತ್ತದೆ. ಹೆಚ್ಚು ಮಳೆಯಾದಾಗಲೆಲ್ಲ ಹಳ್ಳ ತುಂಬಿ ಹರಿಯುತ್ತ ಅಕ್ಕಪಕ್ಕದ ಸಾವಿರಾರು ಎಕರೆ ಕೃಷಿ ಭೂಮಿಗೆ ನುಗ್ಗುತ್ತದೆ. ಇದರಿಂದ ಬೆಳೆ ಜಲಾವೃತಗೊಂಡಿದೆ.ಹಿರೇಮಲ್ಲೂರ ಬಳಿಯ ಹಿರೇಹಳ್ಳ ತುಂಬಿ ಜಮೀನಿನಲ್ಲಿ ನೀರು ಹರಿಯುತ್ತಿರುವುದರಿಂದ ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ. ಹಳ್ಳದಲ್ಲಿ ಗಿಡಗಂಟಿಗಳು ಬೆಳೆದು ಹೂಳು ತುಂಬಿಕೊಂಡಿದೆ. ಹೀಗಾಗಿ ನೀರು ಸರಾಗವಾಗಿ ಹರಿಯದೆ ಅಕ್ಕಪಕ್ಕದ ಜಮೀನಿಗೆ ನುಗ್ಗುತ್ತದೆ. ಹಾನಿಯಾದಾಗ ಅಧಿಕಾರಿಗಳು ಕಾಟಾಚಾರಕ್ಕೆ ಬಂದು ಪರಿಶೀಲನೆ ನಡೆಸುತ್ತಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಂದ ಕೇವಲ ಗಿಡಗಂಟಿಗಳನ್ನು ಸ್ವಚ್ಛ ಮಾಡಿಸಿ ಕೈ ತೊಳೆದುಕೊಳ್ಳುತ್ತಾರೆ. ಆದರೆ, ಹಳ್ಳದ ಹೂಳೆತ್ತುವ ಕೆಲಸ ಆಗದೆ ಇರುವುದು ಅನಾಹುತಕ್ಕೆ ಕಾರಣ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಇನ್ನೊಂದೆಡೆ ತಾಲೂಕಿನ ಹುಲಸೋಗಿ ಗ್ರಾಮದ ಫಲವತ್ತಾದ ಜಮೀನು ಮೇಲ್ಮೈ ಮಣ್ಣು ಕಿತ್ತು ಹೋಗುವುದಲ್ಲದೇ ಭೂಮಿಯ ಪೂರ್ಣ ಪ್ರಮಾಣದ ಮೇಲ್ಮೆ ಪದರು ಕಿತ್ತು ಹೋಗಿದ್ದರಿಂದ ಮುಂದೇನು ಅನ್ನುವಂತಾಗಿದೆ.ಬಾರದ ಪರಿಹಾರ: ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದಕ್ಕೆ ತಕ್ಷಣ ತಾಲೂಕು ಆಡಳಿತದಿಂದ ಪರಿಹಾರವನ್ನು ನೀಡಬೇಕು ಎಂದು ರೈತ ಮುಖಂಡರಾದ ಚನ್ನಬಸನಗೌಡ ಹುತ್ತನಗೌಡ್ರ, ಕೇದಾರಪ್ಪ ಕೊಕಾಟೆ, ನಕಲಪ್ಪ ಕೊಕಾಟೆ, ಶಿವಾನಂದ ಸುಲ್ತಾನಜಿ ಆಗ್ರಹಿಸಿದ್ದಾರೆ. ವೃದ್ಧ ಕಾಣೆ

ರಾಣಿಬೆನ್ನೂರು: ಇಲ್ಲಿನ ಮಾರುತಿ ನಗರ ಕಾಳಮ್ಮ ದೇವಸ್ಥಾನ ಬಳಿಯ ನಿವಾಸಿ ಮಹಾದೇವಪ್ಪ ತಂದೆ ನಾಗಪ್ಪ ಕಾನಪೇಟ(89) ಜೂ.10ರಂದು ಮನೆಯಿಂದ ಕಾಣೆಯಾಗಿದ್ದಾರೆ.ಇವರು 6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ದುಂಡು ಮುಖ ಹೊಂದಿದ್ದಾರೆ. ಇವರು ಕುರಿತು ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ರಾಣಿಬೆನ್ನೂರು ಶಹರ ಠಾಣಿಯ ದೂ. 08373- 266333, ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಮೊ. 9480804550, ಶಹರ ಠಾಣೆ ಸಿಪಿಐ ಡಾ. ಶಂಕರ ಎಸ್.ಕೆ. 9480804532 ಇವರಿಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ