ಡೊಂಕನಾಳ ಸರ್ಕಾರಿ ಶಾಲೆಗೆ ಬೆಳ್ಳಿ ಹಬ್ಬದ ಸಂಭ್ರಮ

KannadaprabhaNewsNetwork |  
Published : Sep 24, 2026, 02:30 AM IST
21ಎಚ್.ಎಲ್.ವೈ-1: ತಾಲೂಕಿನ ಡೊಂಕನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಂಸ್ಥಾಪನೆಯ   ಬೆಳ್ಳಿ ಮಹೋತ್ಸವದ ಕಾರ್ಯಕ್ರಮಕ್ಕೆ ಉತ್ತರಕನ್ನಡ ಜಿ.ಪಂ ಮಾಜಿ ಅಧ್ಯಕ್ಷ ಕೃಷ್ಣಾ ಪಾಟೀಲ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಬಿಇಒ ಪ್ರಮೋದ್ ಮಹಾಲೆ ಮಾತನಾಡಿ, ಶಾಲೆಯು ಒಂದು ಗ್ರಾಮದ ಅಭಿವೃದ್ಧಿಯ ಕೇಂದ್ರಬಿಂದುವಾಗಬಲ್ಲದು ಎಂಬುದನ್ನು ಡೊಂಕನಾಳ ಗ್ರಾಮ ಶಾಲೆಯು ಸಾಬೀತುಪಡಿಸಿದೆ ಎಂದರು.

ಹಳಿಯಾಳ: ಶಿಕ್ಷಣವೇ ಶಕ್ತಿ ಎಂಬುದನ್ನು ಸಾಬೀತುಪಡಿಸಿದ ತಾಲೂಕಿನ ಡೊಂಕನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ತನ್ನ ಸಂಸ್ಥಾಪನೆಯ ಬೆಳ್ಳಿ ಮಹೋತ್ಸವದ ಮೂಲಕ ಅರ್ಥಪೂರ್ಣವಾಗಿ ಶನಿವಾರ ಆಚರಿಸಿತು.

ಬೆಳ್ಳಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ಕೃಷ್ಣe ಪಾಟೀಲ ಅವರು, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿಗಿಂತಲೂ ಉತ್ತಮವಾಗಿ ಅಭಿವೃದ್ಧಿಪಡಿಸಿರುವುದು ಡೊಂಕನಾಳ ಗ್ರಾಮದ ಹೆಮ್ಮೆ. ಇಲ್ಲಿ ಪ್ರತಿಷ್ಠಾಪಿಸಿರುವ ಸರಸ್ವತಿ ಮಾತೆ ಮತ್ತು ರಾಧಾಕೃಷ್ಣನ್ ಅವರ ಮೂರ್ತಿಗಳು ಕೇವಲ ಕಲ್ಲಿನ ಮೂರ್ತಿಗಳಲ್ಲ, ಅವು ಗ್ರಾಮಸ್ಥರ ಶಿಕ್ಷಣದ ಕಾಳಜಿಯ ಜೀವಂತ ಸಂಕೇತಗಳು ಎಂದರು.ಬಿಇಒ ಪ್ರಮೋದ್ ಮಹಾಲೆ ಮಾತನಾಡಿ, ಶಾಲೆಯು ಒಂದು ಗ್ರಾಮದ ಅಭಿವೃದ್ಧಿಯ ಕೇಂದ್ರಬಿಂದುವಾಗಬಲ್ಲದು ಎಂಬುದನ್ನು ಡೊಂಕನಾಳ ಗ್ರಾಮ ಶಾಲೆಯು ಸಾಬೀತುಪಡಿಸಿದೆ ಎಂದರು.ತಾಲೂಕು ಪಂಚಾಯಿತಿ ಇಒ ವಿಲಾಸರಾಜ ಪ್ರಸನ್ನ ಮಾತನಾಡಿ, ಡೊಂಕನಾಳದ ಜನರ ಶಿಕ್ಷಣ ಪ್ರೀತಿ ಇಡೀ ತಾಲೂಕಿಗೆ ಮಾದರಿ. ಸರಸ್ವತಿ ಮಂದಿರ ಹಾಗೂ ರಾಧಾಕೃಷ್ಣನ್ ಪುತ್ಥಳಿ ಸ್ಥಾಪನೆಯು ಮುಂದಿನ ಪೀಳಿಗೆಗೆ ಶಿಕ್ಷಣದ ಮಹತ್ವವನ್ನು ಸಾರಿ ಹೇಳುತ್ತದೆ ಎಂದರು.ತಹಸೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಮಾತನಾಡಿ, ಗ್ರಾಮಸ್ಥರ ಒಗ್ಗಟ್ಟು ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಠಕ್ಕು ಬಾಜಾರಿ ಅವರ ದಣಿವರಿಯದ ಸೇವೆಯನ್ನು ಶ್ಲಾಘಿಸಿದರು. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿರಸಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಸತೀಶ ನಾಯಕ ಮಾತನಾಡಿ, ತಾವು ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಸುವರ್ಣ ದಿನಗಳನ್ನು ಸ್ಮರಿಸಿಕೊಂಡು ಭಾವುಕರಾದರು.

ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರಮೇಶ ಪಾಟೀಲ ಮತ್ತು ಉದಯ ನಾಯಕ್ ಅವರು ಮಾತನಾಡಿ ಶುಭ ಹಾರೈಸಿದರು.

ಸಮಾರಂಭದಲ್ಲಿ ಈ ಶಾಲೆಯಲ್ಲಿ ಹಿಂದೆ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರ ಪಾದಪೂಜೆ ನೆರವೇರಿಸಿ ಗೌರವಿಸಲಾಯಿತು.ಎಸ್‌ಡಿಎಂಸಿ ಅಧ್ಯಕ್ಷ ಠಕ್ಕು ಬಾಜಾರಿ ಮಾತನಾಡಿದರು. ಸಿಡಿಪಿಒ ಕೊರವರ, ಸಾಂಬ್ರಾಣಿ ಆರ್‌ಎಫ್‌ಒ, ಗ್ರಾಮ ಪ್ರಮುಖ ಯುವನಾಯಕ ಅರ್ಜುನ ಬೋವಿ, ಗಫಾರಸಾಬ್ ಬಾಳೆಗುಂದಿ, ಜಪಾರಖಾನ್, ಶಾಲಾಭಿವೃದ್ಧಿ ಸಮಿತಿಯ ವಾಗು ಧೂಳು, ಅಪ್ಪು, ನಾವು, ನವಲು, ಬಮ್ಮು, ನಾಗು, ರಾಮು ಹಾಗೂ ನೆರೆಯ ಭಾಗವತಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಉಪಸ್ಥಿತರಿದ್ದರು.ಬೆಳ್ಳಿ ಮಹೋತ್ಸವದ ಸವಿನೆನಪಿಗಾಗಿ ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಸರಸ್ವತಿ ಮಂದಿರವನ್ನು ಭಕ್ತಿ ಭಾವದಿಂದ ಉದ್ಘಾಟಿಸಲಾಯಿತು. ಜತೆಗೆ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು. ಶಾಲಾ ಮಕ್ಕಳ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಮನಸೂರೆಗೊಂಡವು.

ಶಾಲೆಯ ಮುಖ್ಯ ಶಿಕ್ಷಕಿ ರಾಧಾ ಬಿ. ಅವರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿದರು. ಶಿಕ್ಷಕರಾದ ಲೀಲಾಧರ ಮೊಗೇರ, ರಮ್ಯಾ ತಮ್ಮಡಗಿ, ಮೇಘಾ ನಾಯ್ಕ ಮತ್ತು ಗಾಯತ್ರಿ ಅವರು ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ-ಬೆಳೆ ಸಮೃದ್ಧಿಗೆ ಜೋಕುಮಾರನ ಆರಾಧನೆ
ಹೊಸ ಯೋಚನೆಗಳ ಹರಿಕಾರ ಚಿದಂಬರರಾವ್‌ ಜಂಬೆ