ಸಿದ್ದಯ್ಯನ ಕೋಟೆಯಲ್ಲಿ 15ರಿಂದ ಶ್ರೀ ಮಠದ ರಜತ ಮಹೋತ್ಸವ ಸಂಭ್ರಮ

KannadaprabhaNewsNetwork |  
Published : Feb 13, 2024, 12:45 AM IST
ಚಿತ್ರಶೀರ್ಷಿಕೆ12ಎಂಎಲ್ ಕೆ3ಮೊಳಕಾಲ್ಮುರು ಪಟ್ಟಣದ ತಾಲೂಕುಪಂಚಾಯಿತಿ ಸಭಾಂಗಣದಲ್ಲಿ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾ ಮಠದ ರಜತ ಮಹೋತ್ಸವ ಆಮಂತ್ರಣ ಪತ್ರಿಕೆಗಳನ್ನುಸಿದ್ದಯ್ಯನ ಕೋಟೆ ಶ್ರೀಗಳು ಅನಾವರಣಗೊಳಿಸಿದರು.  | Kannada Prabha

ಸಾರಾಂಶ

ಸಿದ್ದಯ್ಯನ ಕೋಟೆ ಶ್ರೀ ಮಠದಲ್ಲಿ ಫೆ. 15 ರಿಂದ 5 ದಿನಗಳ ಕಾಲ ನಡೆಯುವ ರಜತ ಮಹೋತ್ಸವ ಕಾರ್ಯಕ್ರಮದ ಯಶಸ್ವಿಗೆ ತಾಲೂಕಿನ ಪ್ರತಿಯೊಬ್ಬರು ಸಹಕರಿಸುವಂತೆ ಸಿದ್ದಯ್ಯನ ಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ ಮನವಿ ಮಾಡಿದ್ದಾರೆ.

ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು

ಸಿದ್ದಯ್ಯನ ಕೋಟೆ ಶ್ರೀ ಮಠದಲ್ಲಿ ಫೆ. 15 ರಿಂದ 5 ದಿನಗಳ ಕಾಲ ನಡೆಯುವ ರಜತ ಮಹೋತ್ಸವ ಕಾರ್ಯಕ್ರಮದ ಯಶಸ್ವಿಗೆ ತಾಲೂಕಿನ ಪ್ರತಿಯೊಬ್ಬರು ಸಹಕರಿಸುವಂತೆ ಸಿದ್ದಯ್ಯನ ಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ ಮನವಿ ಮಾಡಿದ್ದಾರೆ.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾ ಮಠದ ರಜತ ಮಹೋತ್ಸವ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಳಕಲ್ ಡಾ.ಮಹಾಂತ ಅಪ್ಪಗಳ ಆಶೀರ್ವಾದದಿಂದ ಗಡಿ ತಾಲೂಕಿನ ಸಿದ್ದಯ್ಯನ ಕೋಟೆಯಲ್ಲಿ ವಿಜಯ ಮಹಾಂತೇಶ್ವರ ಮಠ ಆರಂಭಗೊಂಡು 25 ವರ್ಷ ಕಂಡಿದೆ. ತಾಲೂಕಿನ ಭಕ್ತರ ಸಹಕಾರದಿಂದ ಶ್ರೀ ಮಠವು ಶೈಕ್ಷಣಿಕ, ಸಾಂಸ್ಕೃತಿಕವಾಗಿ ಇಂದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ರಜತ ಮಹೋತ್ಸವ ಆಚರಿಸಿಕೊಳ್ಳುವಂತಾಗಿದೆ.

25ವರ್ಷಗಳ ಸೇವೆ ಪರಿಣಾಮ ರಜತ ಮಹೋತ್ಸವ ಸಂಭ್ರಮ ಏರ್ಪಡಿಸಲಾಗಿದೆ. ಫೆ. 15ರಿಂದ 19ರವರಗೆ ಐದು ದಿನಗಳ ಕಾಲ ಜರುಗುವ ಕಾರ್ಯಕ್ರಮಕ್ಕೆ ಹೆಸರಾಂತ ಮಠಾದೀಶರು, ಬುದ್ಧಿ ಜೀವಿಗಳು, ಕವಿಗಳು, ಸಚಿವರು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕಲಾವಿದರು, ಚಿಂತಕರು ಆಗಮಿಸಲಿದ್ದಾರೆ. ಇದರೊಟ್ಟಿಗೆ ಪ್ರಗತಿ ಪರ ರೈತರು, ಸ್ಥಳೀಯ ಕಲಾವಿದರು, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ರಾಜ್ಯದ ಮೂಲೆ ಮೂಲೆಯಿಂದಲೂ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತಾಲೂಕಿನ ಭಕ್ತರು ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದರು.

ಸರಳ ಆಚರಣೆಗೆ ವಿರೋಧ:

ತಾಲೂಕಿನಲ್ಲಿ ಎದುರಾಗಿರುವ ಬರದಿಂದಾಗಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಬೇಕೆಂಬ ತೀರ್ಮಾನವನ್ನು ನಿರಾಕರಿಸಿದ ಭಕ್ತರು ಕಳೆದ 25 ವರ್ಷಗಳಿಂದ ಕಾಯಕ ಮಾಡುತ್ತಲೇ ಮಠವನ್ನು ಕಟ್ಟಿದ್ದೀರಿ. ತಾಲೂಕಿಗೆ ಅನೇಕ ಬಾರಿ ಬರಗಾಲಗಳು ಬಂದು ಹೋಗಿವೆ. ಕೋವಿಡ್ ಸಂಕಷ್ಟ ಎದುರಾಗಿದ್ದರೂ ನಿಮ್ಮ ಶ್ರಮದಿಂದ ಮಠದ ವಿದ್ಯಾರ್ಥಿಗಳಿಗೆ, ಬರುವ ಭಕ್ತರಿಗೆ ತೊಂದರೆಯಾಗದಂತೆ ದಾಸೋಹ ಮುನ್ನಡೆಸಿದ್ದೀರಿ. ಶ್ರೀ ಮಠವನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿತ್ತಿರುವುದು ತಾಲೂಕಿನ ಭಕ್ತರಿಗೆ ಹೆಮ್ಮೆ ತರುವ ಸಂಗತಿಯಾಗಿದೆ. ಹಾಗಾಗಿ ಪ್ರಸ್ತುತ.ರಜತ ಮಹೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಬೇಕೆಂದು ಭಕ್ತರ ಅಭಿಲಾಷೆಯಾಗಿದೆ. ಹಾಗಾಗಿ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಲಾಗಿದೆ. ತಾಲೂಕಿನ ಭಕ್ತರು ಪ್ರಗತಿ ಪರ ಸಂಘಟನೆಯ ಪದಾಧಿಕಾರಿಗಳು, ಚಿಂತಕರು ಎಲ್ಲರೂ ಭಾಗವಹಿಸಬೇಕೆಂದು ತಿಳಿಸಿದರು.

ಈ ವೇಳೆ ಹಿರಿಯ ಮುಖಂಡ ಪಟೇಲ್ ಪಾಪನಾಯಕ, ಕಸಾಪ ಅಧ್ಯಕ್ಷ ಜಿಂಕಾ ಶ್ರೀನಿವಾಸ, ಮರಿಸ್ವಾಮಿ, ಟಿ.ಬಸಣ್ಣ, ಶ್ರೀಮಠದ ಕಾರ್ಯದರ್ಶಿ ಕಾಂತರಾಜ ಇದ್ದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌