ಆಂಜನೇಯ ಮತ್ತು ಗಣಪತಿ ಮೂರ್ತಿಗಳಿಗೆ ಬೆಳ್ಳಿ ಮುಖವಾಡ

KannadaprabhaNewsNetwork |  
Published : Feb 10, 2025, 01:49 AM IST
9ಕೆಆರ್ ಎಂಎನ್ 4.ಜೆಪಿಜಿ ಕುದೂರು ಗ್ರಾಮದ ಪೋಲೀಸ್ ಠಾಣೆಯ ಆವರಣದಲ್ಲಿ ದಾನಿ ನಾಗರಾಜ್ ರವರು ನೀಡಿರುವ ಆಂಜನೇಯಸ್ವಾಮಿ ಮತ್ತು ಗಣಪತಿಗೆ ಬೆಳ್ಳಿ ಮುಖವಾಡಗಳನ್ನು ತೊಡಿಸಿ ವಿಶೇಷ ಅಲಂಕಾರ ಮಾಡಿರುವುದು. | Kannada Prabha

ಸಾರಾಂಶ

ಕುದೂರು: ಕುದೂರು ಪೋಲೀಸ್ ಠಾಣೆಯ ಆರವಣದಲ್ಲಿ ನಿರ್ಮಿಸಿರುವ ಶ್ರೀ ಆಂಜನೇಯ ಮತ್ತು ಶ್ರೀಗಣಪತಿ ದೇವಾಲಯದ ವಾರ್ಷಿಕೋತ್ಸವ ಮತ್ತು ದೇವತಾಮೂರ್ತಿಗಳಿಗೆ ನೂತನ ಬೆಳ್ಳಿಯ ಮುಖವಾಡಗಳನ್ನು ತೊಡಿಸುವ ಕಾರ್ಯಕ್ರಮ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಕುದೂರು: ಕುದೂರು ಪೋಲೀಸ್ ಠಾಣೆಯ ಆರವಣದಲ್ಲಿ ನಿರ್ಮಿಸಿರುವ ಶ್ರೀ ಆಂಜನೇಯ ಮತ್ತು ಶ್ರೀಗಣಪತಿ ದೇವಾಲಯದ ವಾರ್ಷಿಕೋತ್ಸವ ಮತ್ತು ದೇವತಾಮೂರ್ತಿಗಳಿಗೆ ನೂತನ ಬೆಳ್ಳಿಯ ಮುಖವಾಡಗಳನ್ನು ತೊಡಿಸುವ ಕಾರ್ಯಕ್ರಮ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಈ ದೇವಾಲಯದ ಗರ್ಭಗುಡಿಯ ಒಂದೇ ಪೀಠದಲ್ಲಿ ಆಂಜನೇಯ ಮತ್ತು ಗಣಪತಿ ಎರಡೂ ಮೂರ್ತಿಗಳಿರುವುದು ರಾಜ್ಯದಲ್ಲಿ ಅಪರೂಪ.

ಎರಡೂ ದೇವತಾ ಮೂರ್ತಿಗಳಿಗೆ ಬೆಳ್ಳಿ ಮುಖವಾಡಗಳನ್ನು ದಾನವಾಗಿ ನೀಡಿದ ನಾಗರಾಜ್ ಮಾತನಾಡಿ, ಬಹಳ ಅಪರೂಪ ಎನ್ನುವಂತಿರುವ ಈ ಮೂರ್ತಿಗಳ ಶಕ್ತಿಯನ್ನು ಸ್ವತಃ ನಾನು ಅನುಭವಿಸಿದ್ದೇನೆ. ಪೋಲೀಸ್ ಠಾಣೆಗೆ ಬರುವ ಜನರು ಮೊದಲು ಈ ದೇವಾಲಯಕ್ಕೆ ನಮಸ್ಕರಿಸಿ ಹೋಗುತ್ತಾರೆ. ತಮ್ಮ ತಮ್ಮ ಜಗಳಗಳನ್ನು ಅಲ್ಲಲ್ಲಿಯೇ ತೀರ್ಮಾನ ಮಾಡಿಕೊಳ್ಳುವ ಸೋಜಿಗದ ಅಂಶವನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ. ಸಾರ್ವಜನಿಕರ ಸಹಯೋಗದೊಂದಿಗೆ ದೇವಾಲಯ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದ ದಿನಗಳಿಂದ ಪ್ರತಿ ದಿನವೂ ತಪ್ಪದೇ ಪೂಜಾ ಪ್ರಸಾದ ಕೈಂಕರ್‍ಯಗಳನ್ನು ನಿಲ್ಲಿಸದೆ ಬರುತ್ತಿದ್ದೇವೆ ಎಂದು ತಿಳಿಸಿದರು.

ಯುವ ಮುಖಂಡ ಗೋವಿಂದರಾಜ್ ಮಾತನಾಡಿ, ಒಳ್ಳೆಯ ಮನಸಿದ್ದವರಿಗೆ ಪ್ರತಿಯೊಂದರಲ್ಲೂ ದೇವರನ್ನು ನೋಡಬಹುದಾಗಿದೆ. ಗ್ರಾಮದಲ್ಲಿ ಧಾರ್ಮಿಕ ಕಾರ್‍ಯಗಳು ಹೆಚ್ಚೆಚ್ಚು ನಡೆದಂತೆ ಗ್ರಾಮದಲ್ಲಿ ಶಾಂತಿ ನೆಲೆಸಿರುತ್ತದೆ ಎಂಬ ಹಿರಿಯರ ನಂಬಿಕೆಯನ್ನು ಗ್ರಾಮಸ್ಥರು ಪಾಲಿಸುತ್ತಾ ಬರುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ದೇವಾಲಯಕ್ಕೆ ಭೇಟಿ ನೀಡಿದ್ದರು.

--------------------------

9ಕೆಆರ್ ಎಂಎನ್ 4.ಜೆಪಿಜಿ

ಕುದೂರು ಗ್ರಾಮದ ಪೋಲೀಸ್ ಠಾಣೆಯ ಆವರಣದಲ್ಲಿ ದಾನಿ ನಾಗರಾಜ್ ರವರು ನೀಡಿರುವ ಆಂಜನೇಯಸ್ವಾಮಿ ಮತ್ತು ಗಣಪತಿಗೆ ಬೆಳ್ಳಿ ಮುಖವಾಡಗಳನ್ನು ತೊಡಿಸಿ ವಿಶೇಷ ಅಲಂಕಾರ ಮಾಡಿರುವುದು.

----------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌