ಸಮಸ್ಯೆಗಳಿಗೆ ಪಾಪ, ಪುಣ್ಯದ ಹೊಣೆ ತರವಲ್ಲ: ಡಾ. ಹುಲಿಕಲ್ ನಟರಾಜ್

KannadaprabhaNewsNetwork |  
Published : Jan 27, 2025, 12:50 AM IST
ನರಸಿಂಹರಾಜಪುರ ತಾಲೂಕಿನ ಬಿ.ಎಚ್.ಕೈಮರದಲ್ಲಿ ತಾಲೂಕು ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಆಶ್ರಯದಲ್ಲಿ ನಡೆದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪಿ.ಸಿ.ಎ.ಆರ್.ಡಿ. ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿರುವ ಸೀನಿಯರ್ ಚೇಂಬರ್ ಸದಸ್ಯ ಕೆ.ಎಂ.ಸುಂದರೇಶ್ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನರಸಿಂಹರಾಜಪುರ, ಮೋಸ ಹೋಗುವ ಜನರಿರುವುವರೆಗೂ ಮೋಸ ಮಾಡುವ ಜನರು ಇದ್ದೇ ಇರುತ್ತಾರೆ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ತಿಳಿಸಿದರು.ಶನಿವಾರ ಸಂಜೆ ಬಿ.ಎಚ್.ಕೈ ಮರದ ಸರ್ಕಲ್ ನಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಆಶ್ರಯದಲ್ಲಿ ನಡೆದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಪವಾಡಗಳನ್ನು ಬಯಲು ಮಾಡಿ ಮಾತನಾಡಿದರು.

ಬಿ.ಎಚ್.ಕೈಮರದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಆಶ್ರಯದಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮೋಸ ಹೋಗುವ ಜನರಿರುವುವರೆಗೂ ಮೋಸ ಮಾಡುವ ಜನರು ಇದ್ದೇ ಇರುತ್ತಾರೆ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ತಿಳಿಸಿದರು.

ಶನಿವಾರ ಸಂಜೆ ಬಿ.ಎಚ್.ಕೈ ಮರದ ಸರ್ಕಲ್ ನಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಆಶ್ರಯದಲ್ಲಿ ನಡೆದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಪವಾಡಗಳನ್ನು ಬಯಲು ಮಾಡಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟಿನಿಂದಲೂ ಸಮಸ್ಯೆಗಳು ಇರುತ್ತವೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಸಮಸ್ಯೆ ಬಗೆಹರಿಸಲು ಸರಿಯಾದ ಮಾರ್ಗ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಸಮಸ್ಯೆಗಳಿಗೆ ಪಾಪ, ಪುಣ್ಯವನ್ನು ಹೊಣೆ ಮಾಡಿ ಮನಸ್ಸನ್ನು ದುರ್ಬಲ ಮಾಡಿಕೊಂಡರೆ ಪಟ್ಟ ಭದ್ರಾಹಿತಾಸಕ್ತಿಗಳು ಇದನ್ನು ದುರುಪಯೋಗ ಮಾಡಿಕೊಂಡು ಶೋಷಣೆ ಮಾಡುತ್ತಾರೆ. ಒಮ್ಮೆ ಪಟ್ಟಭದ್ರಾಹಿತಾಸಕ್ತಿಗಳ ಕೈಗೆಸಿಲುಕಿಕೊಂಡರೆ ಜೀವನ ಪರ್ಯಂತ ಹೊರಗಡೆ ಬರಲು ಸಾಧ್ಯ ವಾಗುವುದಿಲ್ಲ. ವಿಜ್ಞಾನವನ್ನು ಸಹ ಮೋಸ ಮಾಡುವ ಜನರಿದ್ದಾರೆ ಎಂದರು.

ಕರ್ನಾಟಕ ವೈಜ್ಞಾನಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಹೊಸೂರು ಸುರೇಶ್ ಮಾತನಾಡಿ, ವೈಜ್ಞಾನಿಕ ಪರಿಷತ್ ವಿಜ್ಞಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಂಸ್ಥೆಯಾಗಿದೆ. ಎಲ್ಲಿ ಮೌಢ್ಯ ಇದೆಯೋ ಅಲ್ಲಿ ನಮ್ಮ ತಂಡದವರು ಹೋಗಿ ಜನರಲ್ಲಿ ಧೈರ್ಯ ತುಂಬುತ್ತಾರೆ. ಈಗಾಗಲೇ 200 ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿ ಜನರಲ್ಲಿ ಮೂಡ ನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದೇವೆ. ಡಾ.ಹುಲಿಕಲ್ ನಟರಾಜ್ ಅವರ ರಾಜ್ಯಾದ್ಯಂತ 10 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಪಿಸಿಎಆರ್ ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಸೀನಿಯರ್ ಚೇಂಬರ್ ಸದಸ್ಯ ಕೆ.ಎಂ.ಸುಂದರೇಶ್ ಅವರನ್ನು ಸನ್ಮಾನಿಸಲಾಯಿತು.

ಸಭೆ ಅಧ್ಯಕ್ಷತೆಯನ್ನು ತಾಲೂಕು ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಅಧ್ಯಕ್ಷ ಕೆ.ಆರ್.ನಾಗರಾಜ ಪುರಾಣಿಕ್ ವಹಿಸಿದ್ದರು. ಅತಿಥಿಗಳಾಗಿ ಪಿಸಿಎಆರ್ ಡಿ ಬ್ಯಾಂಕಿನ ಅಧ್ಯಕ್ಷ ಕೆ.ಎಂ.ಸುಂದರೇಶ್, ಸೀನಿಯರ್ ಚೇಂಬರ್ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದಕುಮಾರ್, ಕೆ.ಎಸ್. ರಾಜಕುಮಾರ್, ಎಸ್.ಎಸ್.ಜಗದೀಶ್ ಉಪಸ್ಥಿತರಿದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ