ಕಾರ್ಖಾನೆ ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ: ಎಸ್.ಆರ್. ಪಾಟೀಲ

KannadaprabhaNewsNetwork |  
Published : Oct 27, 2025, 12:45 AM IST
ಲೋಕಾಪುರ ಸಮೀಪ ತಿಮ್ಮಾಪುರ(ರನ್ನನಗರ) ದಲ್ಲಿ ಬೀಳಗಿ ಶುಗರ್ ಮಿಲ್ ಯೂನಿಟ್-೨ ರ ೨೦೨೫-೨೬ ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯನ್ ಪೂಜಾ ಕಾರ್ಯಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. ಎಸ್.ಆರ್.ಪಾಟೀಲ, ಎಚ್.ಎಲ್. ಪಾಟೀಲ, ದಯಾನಂದ ಪಾಟೀಲ, ರಾಹುಲಗೌಡ ನಾಡಗೌಡ ಇನ್ನಿತರರು ಇದ್ದರು. | Kannada Prabha

ಸಾರಾಂಶ

ರೈತರು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಪೂರೈಸಿ ಕಾರ್ಖಾನೆಯ ಅಭಿವೃದ್ಧಿ ಮತ್ತು ಉತ್ಪಾದನೆಯ ಪ್ರಗತಿಯಲ್ಲಿ ಸಹಕಾರ ನೀಡಬೇಕು. ಬೆಳೆಗಾರರ ಬೆಂಬಲ, ಕಾರ್ಖಾನೆಯ ಶಕ್ತಿ. ಎಲ್ಲರ ಸಹಕಾರದಿಂದ ಪ್ರಸಕ್ತ ಹಂಗಾಮಿನಲ್ಲಿ ೬ ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಬೀಳಗಿ ಶುಗರ್ಸ್‌ ಅಧ್ಯಕ್ಷ, ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ರೈತರು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಪೂರೈಸಿ ಕಾರ್ಖಾನೆಯ ಅಭಿವೃದ್ಧಿ ಮತ್ತು ಉತ್ಪಾದನೆಯ ಪ್ರಗತಿಯಲ್ಲಿ ಸಹಕಾರ ನೀಡಬೇಕು. ಬೆಳೆಗಾರರ ಬೆಂಬಲ, ಕಾರ್ಖಾನೆಯ ಶಕ್ತಿ. ಎಲ್ಲರ ಸಹಕಾರದಿಂದ ಪ್ರಸಕ್ತ ಹಂಗಾಮಿನಲ್ಲಿ ೬ ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಬೀಳಗಿ ಶುಗರ್ಸ್‌ ಅಧ್ಯಕ್ಷ, ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ಸಮೀಪದ ತಿಮ್ಮಾಪುರ (ರನ್ನ ನಗರ) ಗ್ರಾಮದಲ್ಲಿ ಬೀಳಗಿ ಶುಗರ್ ಮಿಲ್ ಯುನಿಟ್-೨ರ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ರೈತರು ಕಾರ್ಖಾನೆ ಕಟ್ಟುವಲ್ಲಿ, ಷೇರು ಸಂಗ್ರಹದಲ್ಲಿ ಭಾಗಿಯಾಗಿ ಬದುಕು ಕಟ್ಟಿಕೊಳ್ಳಲು ಶ್ರಮಪಟ್ಟಿದ್ದರಿಂದ ಇಂದು ಕಾರ್ಖಾನೆ ಮತ್ತೆ ಬೆಳೆಯಲು ಸಾಧ್ಯವಾಗಿದೆ. ಈ ಕಾರ್ಖಾನೆ ರೈತರ ಜೀವನ ಶೈಲಿ ಬದಲಾಯಿಸಲಿದೆ. ಕಾರ್ಖಾನೆಯಿಂದ ಯಾವುದೇ ಲಾಭದಾಸೆ ಹೊಂದಿಲ್ಲ. ರೈತರ, ಕಾರ್ಮಿಕರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಕಾರ್ಖಾನೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಖಾನೆಗೆ ಮಾಜಿ ನಿರ್ದೇಶಕ ದಯಾನಂದ ಪಾಟೀಲ ಮಾತನಾಡಿ, ಕಾರ್ಖಾನೆ ಬೆಳೆಯಲು ಈ ಭಾಗದ ರೈತರು ಹಾಗೂ ಷೇರು ಸದಸ್ಯರು, ರೈತರು ಹಾಗೂ ಕಾರ್ಮಿಕರು ಕಾರ್ಖಾನೆ ನಮ್ಮದು ಎಂದು ಪ್ರಾಂಜಲ ಮನಸ್ಸಿನಿಂದ ದುಡಿಯಬೇಕು. ದುಡಿದ ಹಣದಲ್ಲಿ ಬದುಕಿಗಾಗಿ, ಒಳ್ಳೆಯದಕ್ಕಾಗಿ ಹಣ ಬಳಕೆ ಮಾಡಿಕೊಳ್ಳಬೇಕು. ಈಗಾಗಲೇ ನಾವು ಅನೇಕ ತೊಂದರೆ ಅನುಭವಿಸಿದ್ದೇವೆ. ಬರುವ ದಿನಗಳಲ್ಲಿ ಯಾವುದೇ ತೊಂದರೆ ಆಗದ ಹಾಗೆ ನಡೆದುಕೊಳ್ಳುತ್ತೇವೆ. ಈ ವರ್ಷ ಬೆಳೆದ ಕಬ್ಬನ್ನು ನಮ್ಮ ಕಾರ್ಖಾನೆಗೆ ಕಳಿಸಿ ಈಗಾಗಲೇ ಕೊಟ್ಟ ಕಬ್ಬಿಗೆ ಒಳ್ಳೆಯ ದರ ಕೊಡುವ ಭರವಸೆಯನ್ನು ಎಸ್.ಆರ್. ಪಾಟೀಲ ಅವರು ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಕೀಲರಾದ ಆರ್.ಎಂ. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಮಾಜಿ ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಶಿವಾನಂದ ಉದಪುಡಿ, ಕೆ.ಆರ್. ಮಾಚಪ್ಪನವರ, ಮಂಜುನಾಥ ಅರಳಿಕಟ್ಟಿ ಮಾತನಾಡಿ, ಈ ಭಾಗದ ರೈತರು ಕಾರ್ಖಾನೆಗೆ ಹೆಚ್ಚಿನ ಕಬ್ಬು ಕಳಿಸಿ ಕಾರ್ಖಾನೆಯ ಉಳಿಸಿಕೊಳ್ಳಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿ, ಎಸ್.ಆರ್. ಪಾಟೀಲ ಅವರು ಈ ಕಾರ್ಖಾನೆ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ರೈತರ ಕಾರ್ಮಿಕರ ಮತ್ತು ಕಬ್ಬು ಬೆಳೆಗಾರರ ಪರವಾಗಿ ನಿಂತಿದ್ದು, ಒಂದು ಅದೃಷ್ಟ ಎಂದು ಹೇಳಿದರು.

ಈ ವೇಳೆ ನಿರ್ದೇಶಕರಾದ ಎಚ್.ಎಲ್. ಪಾಟೀಲ, ಸುರೇಶಗೌಡ ಪಾಟೀಲ, ರಾಹುಲ ನಾಡಗೌಡ, ಮಂಜುನಾಥ ಅರಳಿಕಟ್ಟಿ, ಲಕ್ಷ್ಮಣ ನಿರಾಣಿ, ಮುಖಂಡರಾದ ಸತೀಶ ಬಂಡಿವಡ್ಡರ, ಅರುಣ ಕಾರಜೋಳ, ಉದಯ ಸಾರವಾಡ, ವೆಂಕಣ್ಣ ಗಿಡ್ಡಪ್ಪನವರ, ರಾಜುಗೌಡ ಪಾಟೀಲ, ಸಂಗನಗೌಡ ಕಾತರಕಿ, ವಿಠ್ಠಲ ತುಮ್ಮರಮಟ್ಟಿ, ಶ್ರೀಕಾಂತ ಗುಜ್ಜನ್ನವರ, ವಕೀಲ ಬಸವರಾಜ ಚಿಕ್ಕೂರ, ಲೋಕಣ್ಣ ಕತ್ತಿ, ತಮ್ಮಣ್ಣಪ್ಪ ಅರಳಿಕಟ್ಟಿ, ರಾಜು ಹಲಗತ್ತಿ, ಪಾಂಡುರಂಗ ಹೊವನ್ನವರ, ಕಾರ್ಖಾನೆಯ ಆಡಳಿತಾಧಿಕಾರಿ ದಾನಯ್ಯ ಹಿರೇಮಠ, ಕಾರ್ಮಿಕ ಯುನಿಯನ್ ಸಂಘದ ಅಧ್ಯಕ್ಷ ಉಮೇಶ ಬಡಿಗೇರ, ಉಪಾಧ್ಯಕ್ಷ ನಾಗಪ್ಪ ಕೆಳಗಡೆ, ಕಾರ್ಯದರ್ಶಿ ಪ್ರಕಾಶ ಕಬ್ಬೂರ, ಖಜಾಂಜಿ ಪಾಂಡು ಮುಳ್ಳೂರ, ಕಾಳಪ್ಪ ಕಂಬಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ, ಸಾವಿರಾರು ರೈತರು, ಕಾರ್ಮಿಕರು, ಕಬ್ಬು ಬೆಳೆಗಾರರು, ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

ದೇಶದಲ್ಲಿ ಅನೇಕ ಸಹಕಾರಿ ಸಂಘಗಳು ರೈತರು ಮತ್ತು ವ್ಯಾಪಾರಿಗಳಿಗೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುತ್ತವೆ. ಬೀಳಗಿ ಶುಗರ್ಸ್‌ ಕಾರ್ಖಾನೆ ಈ ಭಾಗದ ಎಲ್ಲ ರೈತರಿಗೆ ಕಾಮಧೇನು ಕಲ್ಪವೃಕ್ಷದಂತಿದೆ. ಬರುವ ದಿನಗಳಲ್ಲಿ ಈ ಭಾಗದ ರೈತರು ತಮ್ಮ ಕಬ್ಬು ಕಾರ್ಖಾನೆಗೆ ಕಳಿಸಬೇಕು. ಕಾರ್ಖಾನೆ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಬೀಳಗಿ ಶುಗರ್ಸ್‌ ಅಧ್ಯಕ್ಷ ಎಸ್.ಆರ್. ಪಾಟೀಲ ಅವರು ಜವಾಬ್ದಾರಿ ವಹಿಸಿಕೊಂಡ ಈ ಕಾರ್ಖಾನೆಗೆ ಎಲ್ಲ ರೈತರ, ಕಬ್ಬು ಬೆಳೆಗಾರರ, ಕಾರ್ಮಿಕರ ಶ್ರಮ ಅತ್ಯವಶ್ಯವಿದೆ.

- ಅಜಯಕುಮಾರ ಸರನಾಯಕ ಅಧ್ಯಕ್ಷರು ಬಿಡಿಸಿಸಿ ಬ್ಯಾಂಕ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!