ಬಲಿಷ್ಠ ಭಾರತಕ್ಕಾಗಿ ಶ್ರಮಿಸಿದ ಏಕೈಕ ಆರ್ಥಿಕ ತಜ್ಞ ಸಿಂಗ್‌ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ

KannadaprabhaNewsNetwork | Updated : Dec 28 2024, 01:31 PM IST

ಸಾರಾಂಶ

 ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಶ್ರಮಿಸಿದ ಏಕೈಕ ಆರ್ಥಿಕ ತಜ್ಞ, ದೇಶದ 13ನೇ ಮಾಜಿ ಪ್ರಧಾನಿ, ರಿಸರ್ವ್ ಬ್ಯಾಂಕ್‍ ನಿವೃತ್ತ ಗವರ್ನರ್ ಡಾ. ಮನಮೋಹನ್‍ಸಿಂಗ್ ಆಗಿದ್ದಾರೆ. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ ಸ್ಮರಿಸಿದರು.

 ಹರಿಹರ  : ಭಾರತ ದೇಶವು ಆರ್ಥಿಕ ಸಂಕಷ್ಟ ಎದುರಿಸುತಿದ್ದ ಸಂದಿಗ್ದ ಸಮಯದಲ್ಲಿ, ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಶ್ರಮಿಸಿದ ಏಕೈಕ ಆರ್ಥಿಕ ತಜ್ಞ, ದೇಶದ 13ನೇ ಮಾಜಿ ಪ್ರಧಾನಿ, ರಿಸರ್ವ್ ಬ್ಯಾಂಕ್‍ ನಿವೃತ್ತ ಗವರ್ನರ್ ಡಾ. ಮನಮೋಹನ್‍ಸಿಂಗ್ ಆಗಿದ್ದಾರೆ. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ ಸ್ಮರಿಸಿದರು.

ನಗರದ ಜೆ.ಸಿ. ಬಡಾವಣೆಯ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಮನಮೋಹನ್ ಸಿಂಗ್ ದೇಶ ಕಂಡ ಧೀಮಂತ ನಾಯಕ. 2004 ರಿಂದ 2014 ರವರೆಗೆ 10 ವರ್ಷ ದೇಶವನ್ನಾಳಿದ ಪ್ರಧಾನಿಗಳಲ್ಲಿ ಅತ್ಯಂತ ಶ್ರೇಷ್ಠ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ದುಃಖ ತಡೆಯುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸಿದರು.

ನಗರಸಭೆ ನಾಮನಿರ್ದೇಶಿತ ಸದಸ್ಯ ಕೆ.ಬಿ. ರಾಜಶೇಖರ್ ಮಾತನಾಡಿ, ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ ದೇಶದ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಅನ್ನದಾತ ರೈತರು, ಮಹಿಳೆಯರು, ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ನಾಮನಿರ್ದೇಶಿತ ಸದಸ್ಯ ಸಂತೋಷ ದೊಡ್ಡಮನಿ, ಆಶ್ರಯ ಸಮಿತಿ ಸದಸ್ಯೆ ಭಾಗ್ಯದೇವಿ, ಆರೋಗ್ಯ ಸಮಿತಿ ಸದಸ್ಯ ಶ್ರೀನಿಧಿ, ಭಾರತ ಸೇವಾದಳದ ಅಧ್ಯಕ್ಷ ಪ್ರವೀಣಕುಮಾರ್, ಮುಖಂಡರು ವೆಂಕಟೇಶ್ ಶೆಟ್ಟಿ, ದಾದಾಪೀರ್ ಭಾನುವಳ್ಳಿ, ಎ.ಕೆ. ನಾಗೇಂದ್ರಪ್ಪ, ಗಣೇಶ್, ಅರುಣ್ ಕುಮಾರ್ ಬೊಂಗಾಳೆ, ಮಗ್ದುಂ, ಮುರುಗೇಶ, ಜ್ಯೋತಿ, ಹರಣಿ, ಜಮಿಲಾಬಿ ಇದ್ದರು. 

Share this article