- ಆ.8 ರವರೆಗೆ ನಮೂನೆಗಳ ಗಣಕೀಕರಣ ಪ್ರಕ್ರಿಯೆ: ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ಮಾಹಿತಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಜೂನ್ 30 ರಿಂದಲೇ ಎನ್ಯುಮರೇಷನ್ ಫಾರಂಗಳೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ.ಈ ಮಾಹಿತಿ ಸಂಗ್ರಹ ಹಾಗೂ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆಯು ಜೂ.30 ರಿಂದ ಆ.8 ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಜೂನ್ 16 ರವರೆಗೆ ಒಟ್ಟು 14,99,282 ಮತದಾರರಿದ್ದು, ಬಿಎಲ್ಒಗಳಿಗೆ ಅಗತ್ಯವಿರುವ ಎಲ್ಲ ಫಾರಂಗಳನ್ನು ಮುದ್ರಿಸಿ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 14,99,282 ಮತದಾರರ ಪೈಕಿ ಇಂದಿನವರೆಗೆ ಬಿಎಲ್ಒಗಳು ಎಲ್ಲಾ 14,99,282 ಎನುಮೆರೇಷನ್ ನಮೂನೆಗಳನ್ನು ವಿತರಿಸಿದ್ದು, ಈ ಪೈಕಿ 11,33,854 ನಮೂನೆಗಳನ್ನು ಗಣಕೀಕರಿಸಲಾಗಿದೆ. ಕ್ಷೇತ್ರವಾರು ವಿವರ ನೋಡುವುದಾದರೆ, 103-ಜಗಳೂರು: ಒಟ್ಟು 2,00,836 ಮತದಾರರಿದ್ದು, ಬಿಎಲ್ಒಗಳಿಂದ ಎಲ್ಲಾ 2,00,836 ನಮೂನೆಗಳನ್ನು ವಿತರಿಸಲಾಗಿದ್ದು, 1,63,318 ನಮೂನೆಗಳನ್ನು ಗಣಕೀಕರಿಸಲಾಗಿದೆ. 105-ಹರಿಹರ: ಒಟ್ಟು 2,11,023 ಮತದಾರರಿದ್ದು, ಎಲ್ಲಾ 2,11,023 ನಮೂನೆಗಳನ್ನು ವಿತರಿಸಲಾಗಿದ್ದು, 1,76,819 ನಮೂನೆಗಳನ್ನು ಗಣಕೀಕರಿಸಲಾಗಿದೆ.
109-ಚನ್ನಗಿರಿ : ಒಟ್ಟು 2,03,628 ಮತದಾರರಿದ್ದು, ಎಲ್ಲಾ 2,03,628 ನಮೂನೆಗಳನ್ನು ವಿತರಿಸಲಾಗಿದ್ದು, 1,70,565 ನಮೂನೆಗಳನ್ನು ಗಣಕೀಕರಿಸಲಾಗಿದೆ. 110-ಹೊನ್ನಾಳಿ : ಒಟ್ಟು 2,00,033 ಮತದಾರರಿದ್ದು, ಎಲ್ಲಾ 2,00,033 ನಮೂನೆಗಳನ್ನು ವಿತರಿಸಲಾಗಿದ್ದು, 1,67,654 ನಮೂನೆಗಳ ಗಣಕೀಕರಿಸಲಾಗಿದೆ.
ಮನೆ ಮನೆ ಭೇಟಿ ಸಂದರ್ಭದಲ್ಲಿ ಜು.19 ರವರೆಗೆ ಜಿಲ್ಲಾದ್ಯಂತ ಒಟ್ಟು 50,088 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪ್ರತಿ ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 1397 ನಮೂನೆಗಳು ಸಂಗ್ರಹವಾಗದೇ ಉಳಿದಿದ್ದು, 20682 ಶಾಶ್ವತ ವಲಸೆ, 18218 ಮರಣ ಪ್ರಕರಣ, 9590 ದ್ವಿಪ್ರತಿ ನಮೂನೆಗಳು ಹಾಗೂ 201 ಇತರೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಜಗಳೂರು ಕ್ಷೇತ್ರದಲ್ಲಿ ಒಟ್ಟು 5894 ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 308 ಸಂಗ್ರಹವಾಗದ, 2822 ಶಾಶ್ವತ ವಲಸೆ, 1618 ಮರಣ, 1121 ದ್ವಿಪ್ರತಿ ಹಾಗೂ 25 ಇತರೆ ಪ್ರಕರಣಗಳಿವೆ. ಹರಿಹರ ಕ್ಷೇತ್ರದಲ್ಲಿ ಒಟ್ಟು 8134 ಪ್ರಕರಣಗಳು ಪತ್ತೆಯಾಗಿದ್ದು, 371 ಸಂಗ್ರಹವಾಗದ, 2511 ಶಾಶ್ವತ ವಲಸೆ, 3092 ಮರಣ, 2120 ದ್ವಿಪ್ರತಿ ಮತ್ತು 40 ಇತರೆ ಪ್ರಕರಣಗಳಿವೆ.
ಮಾಯಕೊಂಡ ಕ್ಷೇತ್ರದಲ್ಲಿ ಒಟ್ಟು 10148 ಪ್ರಕರಣಗಳಿದ್ದು, 181 ಸಂಗ್ರಹವಾಗದ, 4570 ಶಾಶ್ವತ ವಲಸೆ, 3757 ಮರಣ, 1612 ದ್ವಿಪ್ರತಿ ಹಾಗೂ 28 ಇತರೆ ಪ್ರಕರಣಗಳಿವೆ. ಚನ್ನಗಿರಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ 6309 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 171 ಸಂಗ್ರಹವಾಗದ, 2971 ಶಾಶ್ವತ ವಲಸೆ, 1984 ಮರಣ, 1157 ದ್ವಿಪ್ರತಿ ಹಾಗೂ 26 ಇತರೆ ಪ್ರಕರಣಗಳು ಸೇರಿವೆ.
- - -
-19ಕೆಡಿವಿಜಿ37: ಜಿ.ಎಂ.ಗಂಗಾಧರ ಸ್ವಾಮಿ