ಸರ್.ಎಂ.ವಿಶ್ವೇಶ್ವರಯ್ಯ ಕನ್ನಡಿಗರ ಹೆಮ್ಮೆ: ಭಂಡಾರಿ ಶ್ರೀನಿವಾಸ್‌

KannadaprabhaNewsNetwork |  
Published : Sep 17, 2024, 12:46 AM IST
16ಕೆೆೆೆೆಕೆಡಿಯು1. | Kannada Prabha

ಸಾರಾಂಶ

ಕಡೂರು, ಶಿಸ್ತು, ಸಮಯ ಪ್ರಜ್ಞೆ ಪ್ರತೀಕವಾಗಿದ್ದ ವಿಶ್ವೇಶ್ವರಯ್ಯನವರು ಅಪ್ರತಿಮ ಇಂಜಿನಿಯರ್ ಆಗಿ ದೇಶ ವಿದೇಶಗಳಲ್ಲೂ ಹೆಸರು ಪಡೆದ ಮಹಾನ್ ಚೇತನ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು

ಕನ್ನಡಪ್ರಭ ವಾರ್ತೆ, ಕಡೂರು

ಶಿಸ್ತು, ಸಮಯ ಪ್ರಜ್ಞೆ ಪ್ರತೀಕವಾಗಿದ್ದ ವಿಶ್ವೇಶ್ವರಯ್ಯನವರು ಅಪ್ರತಿಮ ಇಂಜಿನಿಯರ್ ಆಗಿ ದೇಶ ವಿದೇಶಗಳಲ್ಲೂ ಹೆಸರು ಪಡೆದ ಮಹಾನ್ ಚೇತನ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರುಪಟ್ಟಣದ ರೋಟರಿ ಸಭಾಂಗಣದಲ್ಲಿ ನಡೆದ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಹಾಗು ಕಡೂರು ಸಿವಿಲ್ ಇಂಜಿನಿಯರ್ ಅಸೋಸಿ ಯೇಶನ್ನಿನ ನೂತನ ಸಂಘ ಉದ್ಘಾಟಿಸಿ ಮಾತನಾಡಿದರು. ತಾಂತ್ರಿಕತೆ, ನೈಪುಣ್ಯತೆ ವಿಶ್ವೇಶ್ವರಯ್ಯನವರಲ್ಲಿ ಕಾಣಬಹುದಿತ್ತು. ಅಪ್ರತಿಮ ಇಂಜಿನಿಯರ್ ಆಗಿದ್ದ ಅವರು ಬ್ರಿಟೀಶರಿಂದಲೂ ದೇಶದ ರಾಜ ಮಹಾರಾಜರಿಂದಲೂ ಹೆಸರು ಪಡೆದ ಈ ನಾಡಿನ ಚೇತನರಾಗಿದ್ದರು.ಅಂತಹ ಮಹಾನ್ ವ್ಯಕ್ತಿಯ ಹುಟ್ಟುಹಬ್ಬದ ದಿನವನ್ನು ಇಂಜಿನಿಯರ್ ದಿನವಾಗಿ ಆಚರಿಸುತ್ತಿರುವ ಕಡೂರು ಸಿವಿಲ್ ಇಂಜಿನಿಯರ್ ಅಸೋಸಿಯೇಟ್ಸ್ ಬಳಗವನ್ನು ತುಂಬು ಹೃದಯದಿಂದ ಹಾರೈಸುತ್ತೇನೆ ಎಂದರು.ಇದೇ ಮೊದಲ ಬಾರಿಗೆ ಪಟ್ಟಣದ ಪ್ರಜ್ಞಾವಂತ ಸಿವಿಲ್ ಇಂಜಿನಿಯರ್ ಗಳು ಸಂಘಟಿತರಾಗಿ ಸಾಮಾಜಿಕ ಸೇವೆ ಮಾಡಲು ಮುಂದೆ ಬಂದಿದ್ದು, ವಿಶ್ವೇಶ್ವರಯ್ಯ ಅವರಂತೆ ಸಮಾಜ ಸೇವೆ ಮಾಡಲಿ. ಪುರಸಭೆ ವ್ಯಾಪ್ತಿಯ ನನ್ನ ಇತಿ ಮಿತಿಯಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಸಂಘದ ಬೇಡಿಕೆಯಾದ ಪ್ರವಾಸಿ ಮಂದಿರ ರಸ್ತೆಗೆ ಎಸ್.ಎಂ.ವಿ ಅವರ ಹೆಸರಿಡಲು ಮುಂದಿನ ಸಭೆಯಲ್ಲಿ ಚರ್ಚಿಸಿ ನಿಮ್ಮ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು. ಇಂಜಿನಿಯರ್ ಅಸೋಸಿಯೇಟ್ಸ್ ನ ಪ್ರಧಾನ ಕಾರ್ಯದರ್ಶಿ ಸಿ.ಎಚ್. ಪ್ರೇಮಕುಮಾರ್ ಮಾತನಾಡಿ, ವಿಶ್ವೇಶ್ವರಯ್ಯ ಅವರ ಸಂಪೂರ್ಣ ಜೀವನ ಚರಿತ್ರೆ , ಅವರ ಅನೇಕ ಯೋಜನೆಗಳನ್ನು ಸಭೆಗೆ ಮನದಟ್ಟು ಮಾಡಿಕೊಟ್ಟರು. ಕಡೂರಿನಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಕಡೂರು ಸಿವಿಲ್ ಇಂಜಿನಿಯರ್ ಸಂಘಟನೆ ಮುಂದಿನ ದಿನಗಳಲ್ಲಿ ಸೇವೆ ಮಾಡುವ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಡೂರು ಸಿವಿಲ್ ಇಂಜಿನಿಯರ್ ಅಸೋಸಿಯೇಟ್ಸ್ ನ ನೂತನ ಅಧ್ಯಕ್ಷ ಆರ್.ಎಸ್.ರಘುರಾಮ್ ಸಂಘ ಸಮಾಜ ಮುಖಿಯಾಗಿ ಸೇವೆ ಮಾಡುವ ಆಶಯದ ಜೊತೆಗೆ ಪಟ್ಟಣದ ಅಭಿವೃದ್ಧಿಗೆ ಪುರಸಭೆಯೊಂದಿಗೆ ಕೈ ಜೋಡಿಸಿ ಶ್ರಮಿಸಲಿದೆ ಎಂದರು.

ಅಸೋಸಿಯೇಟ್ಸ್ ನ 28 ಸಿವಿಲ್ ಇಂಜಿನಿಯರ್ಸ್‍ಗಳು, ಅವರ ಕುಟುಂಬದವರು ಮತ್ತು ಪಟ್ಟಣದ ವಿವಿಧ ಸಂಘ,ಸಂಸ್ಥೆಗಳು ಉದ್ಯಮಿಗಳು ನೂತನವಾಗಿ ಆರಂಭವಾದ ಕಡೂರು ಸಿವಿಲ್ ಇಂಜಿನಿಯರ್ ಗಳ ಸಂಘಕ್ಕೆ ಶುಭ ಕೋರಿದರು.

ಯುವ ಇಂಜಿನಿಯರ್ ಆದರ್ಶ ಎಸ್.ಎಂ.ವಿ ಅವರ ಚಿಂತನೆಗಳನ್ನು ಪಾಲಿಸಬೇಕು ಅವರು ನಾಡಿಗೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಂಡರು, ವಿಎಸ್‍ಐಎಲ್ ಪುನಶ್ಚೇತನ ಮಾಡಿ ಅವರ ಯೋಜನೆಗಳನ್ನು ಶಾಶ್ವತವಾಗಿ ಇಡಬೇಕು ಎಂದರು.ಇಂಜಿನಿಯರ್ ಗಳಾದ ಡಿ.ಪ್ರಶಾಂತ್, ಕೆ.ಪಿ.ತಮ್ಮಯ್ಯ ಚೌಳಹಿರಿಯೂರು ಸಿ.ಹಾಲಪ್ಪ, ಆದರ್ಶಕುಮಾರ್, ಪುಟ್ಟಪ್ಪ, ಮಧುಸೂಧನ್, ಚೇತನ್, ಭರತ್‍ರಾಜ್, ಸಾಗರ್, ಜಗದೀಶ್, ಸಂಘ, ಸಂಸ್ಥೆಯ ಅಧ್ಯಕ್ಷರಾದ ಟಿ.ಡಿ.ರಾಜನ್, ಗೋಪಿಕೃಷ್ಣ, ರಾಘವೇಂದ್ರ, ಪುನೀತ್,ಶರತ್, ಮನೋಜ್‍ಕುಮಾರ್, ಪವನ್, ಕೆ.ಪಿ.ವೆಂಕಟೇಶ್ ಮತ್ತಿತರರು ಇದ್ದರು.15ಕೆಕೆಡಿಯು1.ಕಡೂರು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಟ್ಸ್ ನ ನೂತನ ಸಂಘವನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ