ಸಿದ್ದಾಪುರ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ದೇಶವ್ಯಾಪಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಸಿದ್ದಾಪುರದ ಸಮಾನ ಮನಸ್ಕರ ವೇದಿಕೆಯಿಂದ ಸೋಮವಾರ ಕಾಲ್ನಡಿಗೆ ಜಾಥಾ, ಮಾನವ ಸರಪಳಿ ಹಾಗೂ ಸಾರ್ವಜನಿಕ ಸಭೆ ನಡೆಯಿತು.
ದಕ್ಷಿಣ ಕನ್ನಡದ ಧಾರ್ಮಿಕ ಪರಿಷತ್ ಪ್ರಮುಖರಾದ ಲಕ್ಷ್ಮೀಶ್ ಗಬ್ಲಡ್ಕ ಮಾತನಾಡಿ, ''''''''ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಮುಂದಿಟ್ಟು ಷಡ್ಯಂತರದ ಮೂಲಕ ಪ್ರಜಾಪ್ರಭುತ್ವವನ್ನು ಕೆಡವಲು ಯತ್ನಿಸುತ್ತಿದೆ'''''''' ಎಂದು ಆರೋಪಿಸಿದರು.
ಕೇರಳ ಡಿವೈಎಫ್‌ಐ ಕಾರ್ಯದರ್ಶಿ ಅನುಶ್ರೀ ಮಾತನಾಡಿ, ಎಸ್‌ಐಆರ್‌ನಿಂದ ದೇಶದ 13 ಕೋಟಿ ಜನರ ಹೆಸರನ್ನು ಮತಪಟ್ಟಿಯಿಂದ ಹೊರಗಿಡಲಾಗಿದೆ. ಮೃತಪಟ್ಟಿದ್ದಾರೆ ಎಂದು ಪಟ್ಟಿಯಿಂದ ಅಳಿಸಿದ ಹಲವರು ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಜಾಪ್ರಭುತ್ವವನ್ನು ಉಳಿಸಬೇಕಾದ ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಪರ ಕೆಲಸ ಮಾಡುತ್ತಿದೆ'''''''' ಎಂದು ಆರೋಪಿಸಿದರು.ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮಾತನಾಡಿ, ರಾಜ್ಯದಲ್ಲಿ 1 ಕೋಟಿ ಮಂದಿಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಚುನಾವಣಾ ಆಯೋಗ ಬಿಜೆಪಿಯ ಏಜೆಂಟ್‌ನಂತೆ ವರ್ತಿಸುತ್ತಿದೆ. ಇದಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ'''''''' ಎಂದರು. ಸಭೆಯಲ್ಲಿ ರೈತ ಮುಖಂಡ ನೆರವಂಡ ಉಮೇಶ್, ಪ್ರಮುಖರಾದ ಎ.ಕೆ. ಹಕೀಂ, ಎಸ್.ಬಿ. ಪ್ರತೀಶ್, ಸೈಯದ್ ಅಲವಿ ಬಾವ, ಎಚ್.ಬಿ. ರಮೇಶ್, ಬಷೀರ್ ಅಹ್ಮದ್, ಎ.ಎಸ್. ಮುಸ್ತಫ, ಅಸ್ನರ್, ಎಂ.ಕೆ. ಅಶ್ರಫ್, ಜೋಸೆಫ್ ಸಾಂ, ಉದಯ ಕುಮಾರ್, ವೈಜು ಹಾಜರಿದ್ದರು.