ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿ ಸಸ್ಯ ಸಂರಕ್ಷಕ ರಾಮೇಗೌಡ ಮತ್ತು ಬೆಂಗಳೂರಿನ ನವಚೇತನ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕ ವಿ.ಶ್ರೀನಿವಾಸರಾಜು ಅವರಿಗೆ ಈ ಪ್ರಶಸ್ತಿ ನೀಡಲಾಯಿತು.
ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ರಾಮೇಗೌಡ ಅವರು, ತಮಗೆ ಸೇರಿದ ಒಂದೂವರೆ ಎಕರೆ ಜಮೀನಿಲ್ಲಿ ವಿವಿಧ ಜಾತಿಯ ಪಾರಂಪರಿಕ ಸಸ್ಯಗಳ ನರ್ಸರಿಯನ್ನು ಹುಟ್ಟುಹಾಕಿದ್ದಾರೆ.ಅಪಾಯದ ಹಂಚಿನಲ್ಲಿರುವ, ಅಪರೂಪದ ಅನೇಕಾನೇಕ ಸಸ್ಯಗಳನು ಬೆಳೆಸಿದ್ದಾರೆ. ಜೀವ ವೈವಿಧ್ಯ ರಕ್ಷಣೆಯ ಆಸಕ್ತಿ ಇರುವ ಅನೇಕ ಸಂಘ- ಸಂಸ್ಥೆಗಳು ರಾಮೇಗೌಡರಿಂದ ಈ ಸಸಿ ಪಡೆದು ಬೇರೆ ಬೇರೆ ಪ್ರದೇಶದಲ್ಲಿ ಬೆಳೆಸಿ ಕಾಪಾಡಿದ್ದಾರೆ.
ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಐಷಾರಾಮಿ ಬಂಗಲೆಗಳಲ್ಲಿ ಎಸಿ, ಫ್ಯಾನ್ ಗಳ ಮೂಲಕ ಗಾಳಿ ಬರುತ್ತದೆ. ಇದಕ್ಕೆ ಹಣವನ್ನು ಕೊಡಬೇಕು. ಆದರೆ ಹೊರಗೆ ಇರುವ ಮರದಡಿಯಲ್ಲಿ ಕುಳಿತರೆ ಅಲ್ಲಿ ಉತ್ತಮ ಗಾಳಿ ಸಿಗುತ್ತದೆ. ಅದಕ್ಕೆ ಹಣವನ್ನು ಕೊಡಬೇಕಾಗಿಲ್ಲ. ಆದ್ದರಿಂದ ಗಿಡಗಳನ್ನು ನೆಟ್ಟು, ಅವುಗಳನ್ನು ಸಂರಕ್ಷಿಸುವ ಕೆಲಸ ಎಲ್ಲರಿಂದಲೂ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ. ಮಾಲತಿ ಪ್ರಿಯಾ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ. ನಾಗಣ್ಣ, ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ಬಿ.ಸಿ. ಟ್ರಸ್ಟ್ನ ಜಿಲ್ಲಾ ನಿರ್ದೇಶಕ ವಿಜಯಕುಮಾರ್ನಾಗನಾಳ, ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ, ಶೇಷಪ್ರಸಾದ್, ವೆಂಕಟೇಶ್, ಪತ್ರಕರ್ತ ಲೋಕೇಶ್ಬಾಬು, ಲೀಲಾ ಶಿವಕುಮಾರ್, ಪರಶುರಾಮೇಗೌಡ, ಕೋಟಿ ವೃಕ್ಷ ಪ್ರತಿಷ್ಠಾನದ ಶ್ರೀಕಾಂತ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೊದಲಾದವರು ಇದ್ದರು.