ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯು ೨೩ನೇ ಸ್ಥಾನದಲ್ಲಿತ್ತು. ಈ ವರ್ಷ ೮ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಶಿರಸಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಶಿರಸಿ ಶೈಕ್ಷಣಿಕ ಜಿಲ್ಲೆಯು ಶೇ. ೮೪.೧೯೬ ರಷ್ಟು ಫಲಿತಾಂಶ ದಾಖಲಿಸಿ, ರಾಜ್ಯದಲ್ಲಿ ೮ನೇ ಸ್ಥಾನ ದೊರಕಿದೆ.
ತಾಲೂಕಿನಲ್ಲಿ ೨೬೭೯ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ೨೪೩೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. ೯೧ರಷ್ಟು ಫಲಿತಾಂಶ ದಾಖಲಿಸಿ, ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಸಿದ್ದಾಪುರ ತಾಲೂಕಿನಲ್ಲಿ ೧೨೩೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೧೧೯೩ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ. ೯೬.೬೭೭ ಫಲಿತಾಂಶ ದಾಖಲಿಸಿ, ಮೊದಲ ಸ್ಥಾನ ಪಡೆದಿದೆ.ಹಳಿಯಾಳ ತಾಲೂಕಿನಲ್ಲಿ ೨೯೬೮ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ೨೨೧೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. ೭೪.೭೩ ಫಲಿತಾಂಶ ದಾಖಲಿಸಿ, ೬ನೇ ಸ್ಥಾನ ಪಡೆದಿದೆ. ಜೋಯಿಡಾ ತಾಲೂಕಿನಲ್ಲಿ ೮೨೦ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ೬೪೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. ೭೯.೧೪೬ ಫಲಿತಾಂಶ ದಾಖಲಿಸಿ, 4ನೇ ಸ್ಥಾನ ಪಡೆದಿದೆ.ಮುಂಡಗೋಡ ತಾಲೂಕಿನಲ್ಲಿ ೧೩೨೮ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ೧೦೩೩ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. ೭೭.೭೮೬ ಫಲಿತಾಂಶ ದಾಖಲಿಸಿ, 5ನೇ ಸ್ಥಾನ ಪಡೆದಿದೆ. ಯಲ್ಲಾಪುರ ತಾಲೂಕಿನಲ್ಲಿ ೧೦೭೦ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ೯೭೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. ೯೦.೮೪ ಫಲಿತಾಂಶ ದಾಖಲಿಸಿ, ಮೂರನೆಯ ಸ್ಥಾನ ಪಡೆದಿದೆ.ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯು ೨೩ನೇ ಸ್ಥಾನದಲ್ಲಿತ್ತು. ಈ ವರ್ಷ ೮ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ರಾಜ್ಯಕ್ಕೆ ನಾಲ್ವರು ದ್ವಿತೀಯ, ಓರ್ವ ವಿದ್ಯಾರ್ಥಿನಿಗೆ ತೃತೀಯ ಸ್ಥಾನ
ಶಿರಸಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಯ ನಾಲ್ವರು ರಾಜ್ಯ ಮಟ್ಟದಲ್ಲಿ ದ್ವಿತೀಯ ಮತ್ತು ಒಬ್ಬ ವಿದ್ಯಾರ್ಥಿನಿ ತೃತೀಯ ಸ್ಥಾನ ಪಡೆದು ಶಿರಸಿ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ದರ್ಶನ ಸುಬ್ರಾಯ ಭಟ್ಟ, ತಾಲೂಕಿನ ಗೋಳಿಯ ಸಿದ್ಧಿವಿನಾಯಕ ಪ್ರೌಢಶಾಲೆಯ ಚಿನ್ಮಯಿ ಶ್ರೀಪಾದ ಹೆಗಡೆ ಹಾಗೂ ಭೈರುಂಬೆಯ ಜಗದಂಬಾ ಪ್ರೌಢಶಾಲೆಯ ಶ್ರೀರಾಮ ಕೆ.ಎಂ. ೬೨೫ ಕ್ಕೆ ೬೨೪ ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಪಡೆದಿದ್ದಾರೆ. ಗೋಳಿ ಪ್ರೌಢಶಾಲೆಯ ತೃಪ್ತಿ ಗೌಡ ೬೨೫ಕ್ಕೆ ೬೨೩ ಅಂಕ ಗಳಿಸಿ, ತೃತೀಯ ಸ್ಥಾನ ಪಡೆದಿದ್ದಾಳೆ.ಗ್ರಾಮೀಣ ಪೌಢಶಾಲೆಯ ಮೇಲುಗೈ: ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಪ್ರೌಢಶಾಲೆಯ ಮೂವರು ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಹಾಗೂ ಓರ್ವ ವಿದ್ಯಾರ್ಥಿನಿ ತೃತೀಯ ಸ್ಥಾನ ಪಡೆದು ಮೇಲುಗೈ ಸಾಧಿಸಿದ್ದಾರೆ. ಗೋಳಿಯ ಸಿದ್ಧಿವಿನಾಯಕ ಪ್ರೌಢಶಾಲೆಯು ಪ್ರತಿವರ್ಷವೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ರ‍್ಯಾಂಕ್ ಪಡೆಯುತ್ತಿದ್ದು, ಈ ವರ್ಷ ಎರಡು ರ‍್ಯಾಂಕ್ ಪಡೆದುಕೊಂಡಿದೆ.
ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪಾಲಕರು ಸಿಹಿ ತಿನಿಸಿ, ಸಂಭ್ರಮಾಚರಣೆ ನಡೆಸಿದ್ದರಲ್ಲದೇ, ಇಡೀ ಊರಿನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಕುಟುಂಬದವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.