ಹಿಮಪಾತದಿಂದ ಶಿರಸಿ ಯುವತಿ ಸಾವು

KannadaprabhaNewsNetwork |  
Published : Jun 07, 2024, 12:30 AM IST
ಪದ್ಮಿನಿ ಹೆಗಡೆ | Kannada Prabha

ಸಾರಾಂಶ

ಚಾರಣಕ್ಕೆ ತೆರಳುವ ಬಗ್ಗೆ ಕುಟುಂಬದ ಸದಸ್ಯರಿಗೂ ಪದ್ಮಿನಿ ಹೆಗಡೆ ಹೆಚ್ಚಿನ ಮಾಹಿತಿ ನೀಡಿರಲಿಲ್ಲ. ಹಿಮಪ್ರವಾಹದಲ್ಲಿ ಸಿಲುಕಿ ಸಾವಿಗೀಡಾಗಿದವರಲ್ಲಿ ಅವರೂ ಒಬ್ಬರಾಗಿದ್ದಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.

ಶಿರಸಿ: ಉತ್ತರಾಖಂಡದಲ್ಲಿ ಮಂಗಳವಾರ ಹವಾಮಾನ ವೈಪರೀತ್ಯದಿಂದ ಸಂಭವಿಸಿದ ಹಿಮಪಾತದಲ್ಲಿ ತಾಲೂಕಿನ ಜಾಗನಳ್ಳಿ ಯುವತಿ ಪದ್ಮಿನಿ ಹೆಗಡೆ ಸಾವಿಗೀಡಾಗಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಪದ್ಮಿನಿ ಟ್ರಕಿಂಗ್‌ ಹವ್ಯಾಸ ಹೊಂದಿದ್ದಳು. ಅವರ ತಾಯಿ ಶೈಲಜಾ ಮತ್ತು ಸಹೋದರಿ ಮುಂಬೈನಲ್ಲಿ ವಾಸವಾಗಿದ್ದಾರೆ. ರಜಾ ದಿನಗಳಲ್ಲಿ, ಹವ್ಯಾಸಕ್ಕಾಗಿ ತಂಡದೊಂದಿಗೆ ಟ್ರಕ್ಕಿಂಗ್ ಮಾಡುತ್ತಿದ್ದ ಪದ್ಮಿನಿ, ಬೆಂಗಳೂರಿನ ಮೌಂಟೇನಿಯರಿಂಗ್‌ ಫೌಂಡೇಶನ್‌ ಮೇ ೨೯ರಿಂದ ಜೂ. ೭ರ ವರೆಗೆ ಆಯೋಜಿಸಿದ್ದ ಭಟವಾಡಿ ಮಲ್ಲಾ ಕುಶಕಲ್ಯಾಣ ಸಹಸ್ತ್ರತಾಲ್‌ ಟ್ರಕಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಅವರೊಂದಿಗೆ ರಾಜ್ಯದ ೧೭ ಜನ ಸಹ ತೆರಳಿದ್ದರು ಎನ್ನಲಾಗಿದೆ. ಚಾರಣಕ್ಕೆ ತೆರಳುವ ಬಗ್ಗೆ ಕುಟುಂಬದ ಸದಸ್ಯರಿಗೂ ಪದ್ಮಿನಿ ಹೆಗಡೆ ಹೆಚ್ಚಿನ ಮಾಹಿತಿ ನೀಡಿರಲಿಲ್ಲ. ಹಿಮಪ್ರವಾಹದಲ್ಲಿ ಸಿಲುಕಿ ಸಾವಿಗೀಡಾಗಿದವರಲ್ಲಿ ಅವರೂ ಒಬ್ಬರಾಗಿದ್ದಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.ಕಾಗೇರಿ ಸಂತಾಪ: ಉತ್ತರಾಖಂಡದ ಎತ್ತರದ ಸಹಸ್ತ್ರತಲ್ ಮಹಳಿ ಪ್ರದೇಶಕ್ಕೆ ಚಾರಣಕ್ಕೆ ಹೋದ ಸಂದರ್ಭದಲ್ಲಿ ಆದ ಹವಾಮಾನ ವೈಪರೀತ್ಯದ ಅವಘಡದಲ್ಲಿ ಶಿರಸಿ ತಾಲೂಕಿನ ಜಾಗನಳ್ಳಿ ಮೂಲದ ಪದ್ಮಿನಿ ಹೆಗಡೆ ಮೃತಪಟ್ಟಿರುವ ವಿಷಯ ತಿಳಿದು ತುಂಬಾ ನೋವಾಗಿದೆ ಎಂದು ನೂತನ‌ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.ಈಗಾಗಲೆ ಈಕೆಯ ತಾಯಿ ಶೈಲಜಾ ಹೆಗಡೆಯವರನ್ನು ಹಾಗೂ ಕುಟುಂಬಸ್ಥರನ್ನು ಸಂಪರ್ಕಿಸಿ ಧೈರ್ಯ, ಸಾಂತ್ವನ ಹೇಳಿದ್ದೇನೆ. ಪದ್ಮಿನಿ ಅವರ ನಿಧನದ ನೋವನ್ನು ಸಹಿಸುವ ಶಕ್ತಿ ಆಕೆಯ ಕುಟುಂಬಕ್ಕೆ ದೊರೆಯಲಿ. ಪದ್ಮಿನಿ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಚಾರಣ ಸಂದರ್ಭದಲ್ಲಿ‌ ಮೃತರಾದ ಕರ್ನಾಟಕ ಉಳಿದವರಿಗೂ ಶ್ರದ್ದಾಂಜಲಿ ಸಲ್ಲಿಸುತ್ತೇನೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು 11 ಸಾವಿರ ನೀಡಿ
ದೇಶಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ