ಯಗಚಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

KannadaprabhaNewsNetwork | Published : May 1, 2025 12:46 AM

ಸಾರಾಂಶ

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಒತ್ತಾಸೆಯಿಂದಾಗಿ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 35 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ವಿಶ್ವವಿಖ್ಯಾತ ಸ್ಥಳ ಇದಾಗಿದ್ದು ಇಂದು ತಾಂತ್ರಿಕ ಸಮಿತಿ ಅಧ್ಯಕ್ಷ ಜಯಪ್ರಸಾದ್ ಅವರ ನೇತೃತ್ವದ ತಂಡ ಸ್ಥಳಕ್ಕೆಬಂದು ಪರಿಶೀಲನೆ ನಡೆಸಿದೆ. ಚತುಷ್ಪಥ ರಸ್ತೆಗೆ ಅನುಗುಣವಾಗಿ ಸೇತುವೆ ನಿರ್ಮಿಸಲಾಗುವುದು. ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ನಂತರ ಕೆಲಸ ಆರಂಭಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಗಿಂತ ಉತ್ತಮ ರೀತಿಯಲ್ಲಿ ನಿರ್ಮಿಸಲಾಗುವುದು. ಹೊಳೆಬೀದಿ ಸರ್ಕಾರಕ್ಕೆ ಸೇರಿದ 93 ಅಡಿ ರಸ್ತೆ ಇದ್ದು ಅಲ್ಪಸ್ವಲ್ಪ ಒತ್ತುವರಿ ಇದ್ದರೂ ಬಿಟ್ಟುಕೊಡಲಿದ್ದಾರೆ. ಎಲ್ಲರ ಸಹಕಾರ ಮುಖ್ಯ.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಹೊಳೆಬೀದಿ ರಸ್ತೆಗೆ ಹಾಸನ ರಸ್ತೆಯಿಂದ ಸಂಪರ್ಕ ನೀಡುವ ಯಗಚಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಲ್ಪಟ್ಟಿರುವ ಸೇತುವೆ ನಿರ್ಮಾಣಕ್ಕೆ ತಾಂತ್ರಿಕ ಪರಿಣಿತರ ಸಮಿತಿ ತಂಡ ಆಗಮಿಸಿ ಪರಿಶೀಲನೆ ನಡೆಸಲಾಯಿತು.

ಶಾಸಕ ಎಚ್.ಕೆ.ಸುರೇಶ್ ಅವರ ನೇತೃತ್ವದಲ್ಲಿ ಸಮಿತಿಯ ಅಧ್ಯಕ್ಷ ಜಯಪ್ರಸಾದ್ ಮತ್ತವರ ತಂಡ ಹೊಳೆಬೀದಿ ಮೂಲಕ ಯಗಚಿ ನದಿ ಸಮೀಪಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಒತ್ತಾಸೆಯಿಂದಾಗಿ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 35 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ವಿಶ್ವವಿಖ್ಯಾತ ಸ್ಥಳ ಇದಾಗಿದ್ದು ಇಂದು ತಾಂತ್ರಿಕ ಸಮಿತಿ ಅಧ್ಯಕ್ಷ ಜಯಪ್ರಸಾದ್ ಅವರ ನೇತೃತ್ವದ ತಂಡ ಸ್ಥಳಕ್ಕೆಬಂದು ಪರಿಶೀಲನೆ ನಡೆಸಿದೆ. ಚತುಷ್ಪಥ ರಸ್ತೆಗೆ ಅನುಗುಣವಾಗಿ ಸೇತುವೆ ನಿರ್ಮಿಸಲಾಗುವುದು. ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ನಂತರ ಕೆಲಸ ಆರಂಭಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಗಿಂತ ಉತ್ತಮ ರೀತಿಯಲ್ಲಿ ನಿರ್ಮಿಸಲಾಗುವುದು. ಹೊಳೆಬೀದಿ ಸರ್ಕಾರಕ್ಕೆ ಸೇರಿದ 93 ಅಡಿ ರಸ್ತೆ ಇದ್ದು ಅಲ್ಪಸ್ವಲ್ಪ ಒತ್ತುವರಿ ಇದ್ದರೂ ಬಿಟ್ಟುಕೊಡಲಿದ್ದಾರೆ. ಎಲ್ಲರ ಸಹಕಾರ ಮುಖ್ಯ. ತಾಂತ್ರಿಕ ಸಮಿತಿ ಪರಿಶೀಲನೆ ನಡೆಸಿದ್ದು ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿರುವುದರಿಂದ ಹೊಳೆಬೀದಿ ರಸ್ತೆ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ ಮಾಡಿಕೊಳ್ಳುವಂತೆ ತಹಸೀಲ್ದಾರ್‌ ಮಮತಾ ಹಾಗೂ ಪುರಸಭೆ ಮುಖ್ಯಾಧಿಕಾರಿ ಸುಜಯ್ ಅವರಿಗೆ ಶಾಸಕರು ಸೂಚಿಸಿದರು.

ಕೆಆರ್‌ಡಿಸಿಎಲ್ ತಾಂತ್ರಿಕ ಪರಿಣಿತರ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ಬೇಲೂರು ಐತಿಹಾಸಿಕ ಪ್ರವಾಸಿ ಸ್ಥಳವಾಗಿದ್ದು, ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಇರುವ ಕೇವಲ ಒಂದು ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಲಿದೆ. ಇದನ್ನು ಮನಗಂಡು ಶಾಸಕ ಎಚ್.ಕೆ.ಸುರೇಶ್ ಅವರು, ಹೊಳೆಬೀದಿಯ ಅಭಿವೃದ್ಧಿಗೆ ಆಸಕ್ತಿ ತೋರಿದ್ದಾರೆ. ಆ ಕಾರಣ ಇಂದು ಸ್ಥಳ ಪರಿಶೀಲನೆ ನಡೆಸಿದ್ದು ವರದಿಯನ್ನು ಸಮಿತಿಯಲ್ಲಿಟ್ಟು ನಂತರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.

ಇದೇ ವೇಳೆ ಸಮಿತಿ ತಂಡವು ಯಗಚಿ ಈ ತೆರಳಿ ವೀಕ್ಷಿಸಿತು. ಸದಸ್ಯರಾದ ರಮೇಶ್, ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಬುರ್ಜಿ, ಅಧೀಕ್ಷಕ ಎಂಜಿನಿಯರ್‌ ಪ್ರಮೀತ್, ಕಾರ್ಯಪಾಲಕ ಅಭಿಯಂತರ ಎಲ್.ರಘು, ತಹಸೀಲ್ದಾ‌ರ್‌ ಎಂ.ಮಮತಾ, ಪುರಸಭೆ ಮುಖ್ಯಾಧಿಕಾರಿ ಸುಜಯ್, ಎಡಿಎಲ್‌ಆರ್‌ ಗಂಗಯ್ಯ, ಡಿಡಿಎಲ್‌ಆರ್‌ ಸುಜಯ್ ಕುಮಾರ್, ಎಂಜಿನಿಯರ್‌ ಶಿವಕುಮಾ‌ರ್, ತಾಪಂ ದಯಾನಂದ್ ಇದ್ದರು.

Share this article