ಬಸ್ ನಿಲ್ದಾಣ-ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

KannadaprabhaNewsNetwork | Published : Mar 27, 2025 1:03 AM

ಸಾರಾಂಶ

ಶ್ರೀಗವಿಸಿದ್ಧೇಶ್ವರ ಮಠದ ನಿವೇಶನದಲ್ಲಿ ಈ ಹಿಂದೆ ಭವನ ನಿರ್ಮಿಸಿದ್ದು, ಉಳಿದ ನಿವೇಶನದಲ್ಲಿ ಭವನ ನಿರ್ಮಿಸುವುದು ಸೂಕ್ತವಾಗಿದೆ. ಗ್ರಾಮದಲ್ಲಿ ವಿವಾಹ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಭವನ ನಿರ್ಮಾಣಕ್ಕಾಗಿ ಸರ್ಕಾರ ₹ 3 ಕೋಟಿ ಮುಂಜೂರು ಮಾಡಿದೆ. ಹೀಗಾಗಿ ನಿವೇಶನ ನೀಡುವಂತೆ ಗವಿಸಿದ್ಧೇಶ್ವರ ಶ್ರೀಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು.

ಕುಕನೂರು:

ಗ್ರಾಮದ ಜನರಿಗೆ ಹೆಚ್ಚು ಅನುಕೂಲವಾಗುವಂತೆ ಬುದ್ಧ, ಬಸವ, ಅಂಬೇಡ್ಕರ್ ಭವನವನ್ನು ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಭಾನಾಪುರ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣ ಹಿನ್ನಲೆಯಲ್ಲಿ ಮಂಗಳವಾರ ಭೂಮಿ ಪರಿಶೀಲಿಸಿ ಮಾತನಾಡಿದರು.

೩೦ ವರ್ಷದ ಹಿಂದೆಯೇ ಸಮುದಾಯ ಭವನ ನಿರ್ಮಾಣ ಮಾಡಿದ್ದು, ಇಂದಿಗೂ ಸುಸಜ್ಜಿತವಾಗಿದೆ. ಅದರ ಎದುರು ಬುದ್ಧ-ಬಸವ-ಅಂಬೇಡ್ಕರ್ ಭವನ ನಿರ್ಮಿಸುವುದು ಸೂಕ್ತವಾಗಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಸದ್ಯ ಲಭ್ಯವಿರುವ ಸ್ಥಳದಲ್ಲಿ ನಿರ್ಮಿಸಿದರೆ ಜನರಿಗೆ ಹೆಚ್ಚು ಅನುಕೂಲವಾಗುವುದಿಲ್ಲ ಎಂದರು. ಶ್ರೀಗವಿಸಿದ್ಧೇಶ್ವರ ಮಠದ ನಿವೇಶನದಲ್ಲಿ ಈ ಹಿಂದೆ ಭವನ ನಿರ್ಮಿಸಿದ್ದು, ಉಳಿದ ನಿವೇಶನದಲ್ಲಿ ಭವನ ನಿರ್ಮಿಸುವುದು ಸೂಕ್ತವಾಗಿದೆ ಎಂದ ಅವರು, ಗ್ರಾಮದಲ್ಲಿ ವಿವಾಹ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಭವನ ನಿರ್ಮಾಣಕ್ಕಾಗಿ ಸರ್ಕಾರ ₹ 3 ಕೋಟಿ ಮುಂಜೂರು ಮಾಡಿದೆ. ಹೀಗಾಗಿ ನಿವೇಶನ ನೀಡುವಂತೆ ಗವಿಸಿದ್ಧೇಶ್ವರ ಶ್ರೀಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ಹೇಳಿದರು.

ಇಟಗಿಯಲ್ಲಿ ₹ 4 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ, ಮಂಡಲಗೇರಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದರು. ಈ ವೇಳೆ ತಹಸೀಲ್ದಾರ್ ಎಚ್. ಪ್ರಾಣೇಶ, ಎಂಜಿನಿಯರ್‌ ಎಇ ಮಲ್ಲಿಕಾರ್ಜುನ, ವೆಂಕಟೇಶ, ತಾಪಂ ಇಒ ಸಂತೋಷ ಬಿರಾದಾರ, ಕೆರಿಸಬಪ್ಪ ನಿಡಗುಂದಿ, ಮಾಜಿ ಜಿಪಂ ಸದಸ್ಯ ಹನುಮಂತಗೌಡ ಚಂಡೂರು, ಪಿಕಾಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಬಸವಪ್ರಭು ಇಟಗಿ, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಸಂಗಮೇಶ ಗುತ್ತಿ, ಗ್ರಾಪಂ ಪಿಡಿಒ ರಮೇಶ ತಿಮ್ಮರಡ್ಡಿ, ಶರಣಪ್ಪ ಕೆಳಗಿನಮನಿ, ಪ್ರಮುಖರಾದ ನಿಂಗನಗೌಡ ಡಂಬಳ, ಶಂಕ್ರಪ್ಪ ಚೌಡ್ಕಿ, ಶಶಿಧರಯ್ಯ ಕುಡ್ಲೇಪ್ಪನವರ, ಪರಶುರಾಮ ಮಡಿವಾಳರ, ರೈಹಿಮಾನ್‌ಸಾಬ್ ನದಾಫ್, ಕಲ್ಯಾಣಪ್ಪ ಕುಂಬಾರ, ರಫೀಸಾಬ್ ಮಂಡ್ಲಿಗೇರಿ, ಬಸವನಗೌಡ ಮುದ್ದಾಬಳ್ಳಿ, ಮಹೇಶ ಇತರರಿದ್ದರು.

Share this article