ಗುಳೇದಗುಡ್ಡ ಪಟ್ಟಣದಲ್ಲಿ ಶಾಶ್ವತ ನ್ಯಾಯಾಲಯ ಸ್ಥಾಪನೆಯ ಸಲುವಾಗಿ ಇಲ್ಲಿನ ಎರಡು ಸ್ಥಳಗಳಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವಿಜಯ ನೆರಳೆ ಸೋಮವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಪಟ್ಟಣದಲ್ಲಿ ಶಾಶ್ವತ ನ್ಯಾಯಾಲಯ ಸ್ಥಾಪನೆಯ ಸಲುವಾಗಿ ಇಲ್ಲಿನ ಎರಡು ಸ್ಥಳಗಳಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವಿಜಯ ನೆರಳೆ ಸೋಮವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣದ ಎದರುಗಡೆ ಇರುವ ಪೆಟ್ರೋಲ್ ಬಂಕ್ ಹಿಂದುಗಡೆಯ ಜಾಗವನ್ನು ಪರಿಶೀಲನೆ ನಡೆಸಿ, ಈ ಜಾಗಕ್ಕೆ ಬರಲು ಇರುವ ರಸ್ತೆಮಾರ್ಗದ ಬಗ್ಗೆ ಮಾಹಿತಿಯನ್ನು ತಹಸೀಲ್ದಾರ್ ಹಾಗೂ ಸರ್ವೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪರ್ವತಿ ಗ್ರಾಮದ ಹತ್ತಿರ ಇರುವ ಜಾಗ ಪರಿಶೀಲಿಸಿ ಈ ಜಾಗ ಚೆನ್ನಾಗಿದ್ದು, ಮುಖ್ಯರಸ್ತೆಗೆ ಹೊಂದಿಕೊಂಡಿದೆ. ಪಟ್ಟಣದಿಂದ ಜಾಸ್ತಿ ದೂರವೇನು ಇಲ್ಲ. ಎರಡು ಜಾಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ, ಮೇಲಧಿಕಾರಿಗಳಿಗೆ ಕಳುಹಿಸಿ, ಒಂದು ಜಾಗ ಅಂತಿಮಗೊಳಿಸೋಣ ಎಂದು ಹೇಳಿದರು.
ತಹಸೀಲ್ದಾರ್ ಎಂ.ಮಂಗಳಾ ಅವರು ನ್ಯಾಯಾಧೀಶರಾದ ವಿಜಯ ನೆರಳೆ ಅವರಿಗೆ ಲಭ್ಯವಿರುವ ಜಾಗಗಳ ಬಗ್ಗೆ ಮಾಹಿತಿ ನೀಡಿದರು. ಮೆಂಬರ್ ಆಫ್ ಸೆಕ್ರೆಟರಿ ದ್ಯಾವಪ್ಪ ಡೋಣಿ, ವಕೀಲರಾದ ಎಸ್.ಆರ್.ಬರಹಾಣಾಪೂರ, ಸಿ.ಪಿ ಬೆಕಿನಾಳ, ಶಕೀಲ್ ಕಂಟ್ರಾಕ್ಟರ್, ಟಿ.ಎಸ್. ಬೆನಕಟ್ಟಿ. ವಿ.ವೈ. ಹೊಸಮನಿ, ತೊಳಮಟ್ಟಿ, ಕಂದಾಯ ನೀರಿಕ್ಷಕ ಜೋಗಿನ, ಪಿಎಸ್ಐ ಲಕ್ಷ್ಮಣ ಆರಿ ಸೇರಿದಂತೆ ಇತರರು ಇದ್ದರು.